ವಾಡಿ-ಯಾದಗಿರಿ ಮಧ್ಯೆ ಬಸ್ ಸಂಚಾರ ಶುರು
Team Udayavani, May 21, 2020, 11:45 AM IST
ಸಾಂದರ್ಭಿಕ ಚಿತ್ರ
ವಾಡಿ: ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ವಾಡಿ-ಯಾದಗಿರಿ ಮಧ್ಯೆ ಬುಧವಾರದಿಂದ ಬಸ್ ಸಂಚಾರ ಆರಂಭಗೊಂಡಿದ್ದು, ಪ್ರಾಯಾಣಿಕರಿಲ್ಲದ ಕಾರಣ ಬಸ್ನ ಆಸನಗಳು ಖಾಲಿ ಖಾಲಿಯಾಗಿದ್ದವು.
ಕಳೆದ 40 ದಿನಗಳಿಂದ ಬಸ್ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ಕಲಬುರಗಿ-ಯಾದಗಿರಿ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಆಗೊಂದು ಈಗೊಂದು ಎನ್ಇಕೆಎಸ್ಆರ್ ಟಿಸಿ ಬಸ್ ಕಾಣಿಸಿಕೊಳ್ಳುತ್ತಿವೆ. ಜನರು ಇನ್ನೂ ಮನೆಯಲ್ಲಿಯೇ ಲಾಕ್ಡೌನ್ ಫಜೀತಿ ಅನುಭವಿಸುತ್ತಿರುವುದರಿಂದ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದೆ. ಬೆಳಗ್ಗೆ 8:00ರ ನಂತರ ವಾಡಿ ನಗರಕ್ಕೆ ಬಂದು ಹೋಗುತ್ತಿರುವ ಯಾದಗಿರಿ ಡಿಪೋದ ಬಸ್ನಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣಿಸಿತು.
ಆರಂಭಿಕವಾಗಿ ಕೇವಲ ಬೆಳಗ್ಗೆ ಮಾತ್ರ ಒಂದು ಬಸ್ ಯಾದಗಿರಿಯಿಂದ ವಾಡಿ ನಗರಕ್ಕೆ ಬಂದು ಹೋಗುತ್ತಿದೆ. ಕಲಬುರಗಿ ಹಾಗೂ ಯಾದಗಿರಿ ಡಿಪೋಗಳಿಗೆ ಸೇರಿದ ಎಕ್ಸ್ ಪ್ರಸ್ ಬಸ್ ಸಂಖ್ಯೆಗಳಲ್ಲೂ ಏರಿಕೆ ಕಂಡಿಲ್ಲ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬಸ್ಗಳ ಸಂಖ್ಯೆಯೂ ಹೆಚ್ಚಿಸಲಾಗುವುದು ಎಂದು ಯಾದಗಿರಿ ಬಸ್ ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.