ಕುಂದಾಪುರ, ಕಾರ್ಕಳದಲ್ಲಿ ಕೋವಿಡ್ 19 ಆಸ್ಪತ್ರೆ ಆರಂಭ ; ಜಿಲ್ಲಾಧಿಕಾರಿ G.Jagadeesh ಹೇಳಿಕೆ
Team Udayavani, May 21, 2020, 7:20 PM IST
ಕುಂದಾಪುರ: ಇಲ್ಲಿನ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನಿಂದ ಕೊಡುಗೆಯಾಗಿ ನೀಡಿರುವ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಹೆರಿಗೆ ವಾರ್ಡ್ನ್ನು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಗುರುವಾರದಿಂದ ಕೋವಿಡ್ 19 ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ.ಅದರಂತೆ ಕಾರ್ಕಳದಲ್ಲಿಕೂಡ 100 ಬೆಡ್ ಗಳ ಕೋವಿಡ್ ಆಸ್ಪತ್ರೆಯನ್ನು ಆರಂಭಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಈಗಾಗಲೇ ಉಡುಪಿಯಲ್ಲಿ ಕೋವಿಡ್ 19 ಆಸ್ಪತ್ರೆ ಕಾರ್ಯಾಚರಿಸುತ್ತಿದ್ದು, ಇದೀಗ ಕುಂದಾಪುರದಲ್ಲಿ ಜಿಲ್ಲೆಯ 2ನೆಯ ಕೋವಿಡ್ -19 ಆಸ್ಪತ್ರೆ ಕಾರ್ಯಾರಂಭವಾಗಿದೆ. ಹೊರರಾಜ್ಯದಿಂದ ಬಂದವರಲ್ಲಿ ಸೋಂಕು ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.