![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 22, 2020, 5:10 AM IST
ಉಪ್ಪುಂದ: ಕೋವಿಡ್ 19 ಹರಡುವಿಕೆಯ ಅಪಾಯದ ಬಗೆಗೆ ಮತ್ತು ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗ್ರಾಮೀಣ ಜನರು ಎಚ್ಚೆತ್ತಿದ್ದಾರೆ ಎನ್ನುವುದಕ್ಕೆ ಮರವಂತೆಯಲ್ಲಿ ಬುಧವಾರ ನಡೆದ ಒಂದು ಘಟನೆ ಸಾಕ್ಷಿಯಾಗಿದೆ.
ಚೆಕ್‌ಪೋಸ್ಟ್‌ಗಳ ಕಣ್ತಪ್ಪಿಸಿಕೊಂಡು ಹೊರ ರಾಜ್ಯದಿಂದ ಬಂದು ಮನೆ ಸೇರಲು ಯತ್ನಿಸಿದ ಅಲ್ಲಿನ ನಡುಬೆಟ್ಟು ಪ್ರದೇಶದ ವ್ಯಕ್ತಿಯನ್ನು ಮನೆಯವರು ಹಾಗೂ ನೆರೆಹೊರೆಯವರು ಸೇರಿ ಕ್ವಾರಂಟೈನ್ ಗೆ ಕಳುಹಿಸುವ ಮೂಲಕ ಎಚ್ಚರ ಪ್ರದರ್ಶಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕದಲ್ಲಿ ವೃತ್ತಿ ನಡೆಸುತ್ತಿದ್ದ ಆತ ವಾಹನಗಳನ್ನು ಬದಲಿಸುತ್ತ ಜಿಲ್ಲೆಯ ಉತ್ತರ ಗಡಿಯ ಶಿರೂರು ಚೆಕ್‌ಪೋಸ್ಟ್‌ಗಿಂತ ಹಿಂದೆಯೇ ಇಳಿದುಕೊಂಡಿದ್ದಾನೆ. ಸ್ನೇಹಿತನಿಗೆ ಕರೆಮಾಡಿ ಬೈಕ್ ತರಿಸಿಕೊಂಡು ಚೆಕ್‌ಪೋಸ್ಟ್‌ನ ತಪಾಸಣೆಗೆ ಒಳಗಾಗದೆ ಅವನ ಜತೆ ಮನೆಗೆ ಬಂದಿದ್ದಾನೆ. ಹೊರರಾಜ್ಯದಿಂದ ನೇರಾಗಿ ಊರಿಗೆ ಹಿಂದಿರುಗಲು ಅವಕಾಶ ಇಲ್ಲ ಎನ್ನುವುದನ್ನು ಅರಿತಿರುವ ಮನೆಯವರು ಮತ್ತು ಅಕ್ಕಪಕ್ಕದವರು ಅವನನ್ನು ಮತ್ತು ಅವನ ಗಂಟುಮೂಟೆಗಳನ್ನು ಮನೆಗೆ ಸೇರಿಸಿಕೊಳ್ಳಲಿಲ್ಲ. ಆತ ಹಾಗೆ ಬಂದಿರುವ ವಿಷಯವನ್ನು ಅವರು ಗ್ರಾಮ ಪಂಚಾಯತ್ ಗಮನಕ್ಕೆ ತಂದರು. ಗ್ರಾಮ ಪಂಚಾಯತ್ ಪ್ರತಿನಿಧಿಗಳು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಮಾಹಿತಿ ನೀಡಿದರು. ತತ್‌ಕ್ಷಣ ಕಾರ್ಯೋನ್ಮುಖರಾದ ವೈದ್ಯರು ಆತನನ್ನು ಕುಂದಾಪುರಕ್ಕೆ ಕಳುಹಿಸಿ, ಪ್ರಾಥಮಿಕ ಪರೀಕ್ಷೆಯ ಬಳಿಕ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದರು ಎಂದು ತಿಳಿದುಬಂದಿದೆ.
You seem to have an Ad Blocker on.
To continue reading, please turn it off or whitelist Udayavani.