ಕ್ವಾರಂಟೈನ್ ಹೊಟೇಲ್ ಮಾಲಕರಿಗೆ ತರಬೇತಿ
Team Udayavani, May 22, 2020, 5:12 AM IST
ಕುಂದಾಪುರ: ಕ್ವಾರಂಟೈನ್‌ನಲ್ಲಿ ಇರಬೇಕಾದವರನ್ನು ಇರಿಸಿಕೊಂಡು ಸೇವೆ ನೀಡಲು ಒಪ್ಪಿದ ಹೊಟೇಲ್ ಮಾಲಕರು ಸಿಬಂದಿಯ ಕುರಿತು ಜಾಗರೂಕರಾಗಿರಬೇಕು. ಜತೆಗೆ ಕ್ವಾರಂಟೈನ್‌ನಲ್ಲಿರುವವರ ಕಾಳಜಿ, ತ್ಯಾಜ್ಯ ವಿಲೇ, ಸಂಪರ್ಕ ಕುರಿತು ಸ್ಪಷ್ಟ ಮಾಹಿತಿ ಪಡೆದಿರಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾ ಸಲಹೆಗಾರ ಗುರುರಾಜ್ ಹೇಳಿದ್ದಾರೆ.ಅವರು ಬುಧವಾರ ಇಲ್ಲಿನ ತಾ.ಪಂ.ನಲ್ಲಿ ಹೊಟೇಲ್ ಮಾಲಕರಿಗೆ ಕೋವಿಡ್ ಮಾಹಿತಿ, ಕ್ವಾರಂಟೈನ್ ತರಬೇತಿ ನೀಡಿದರು.
ಕ್ವಾರಂಟೈನ್‌ನಲ್ಲಿ ಇರುವವರು ಉಪಯೋಗಿಸಿ ಎಸೆದ ವಸ್ತುಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಿ ನಿರ್ವಹಣೆ ಮಾಡಬೇಕಾಗುತ್ತದೆ. ಇದನ್ನು ಆಸ್ಪತ್ರೆಗಳ ತ್ಯಾಜ್ಯ ಕೊಂಡೊಯ್ಯುವ ಸಂಸ್ಥೆ ವಿಲೇ ಮಾಡಲಿದೆ. ಕ್ವಾರಂಟೈನ್‌ನಲ್ಲಿ ಇರುವವರ ಸಂಪರ್ಕ ಮಾಡುವವರು, ಆಹಾರ ನೀಡುವವರು,ಸ್ವಚ್ಛತಾ ಸೇವಕರು ಎಲ್ಲ ಸುರಕ್ಷಾ ವಿಧಾನ ಅಳವಡಿಸಿಕೊಳ್ಳಲೇಬೇಕು. ಹಾಗೆ ಪಾಲ್ಗೊಂಡ ನಂತರ ಮನೆಗೆ ಹೋದಾಗಲೂ ಬಟ್ಟೆಬರೆ ಪ್ರತ್ಯೇಕ ಇಟ್ಟು, ಸ್ನಾನ ಮಾಡಿಯೇ ವ್ಯಕ್ತಿಗಳ ಸಂಪರ್ಕ ಮಾಡಬೇಕು. ಮಾಹಿತಿಗಾಗಿ ಆರೋಗ್ಯ ಕೇಂದ್ರ, ಪಂಚಾಯತ್, ಸ್ಥಳೀಯಾಡಳಿತ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದರು. ಪುರಸಭೆ ಪರಿಸರ ಎಂಜಿನಿಯರ್ ರಾಘವೇಂದ್ರ, ಸೋಂಕು ಹರಡುವ ಕಾರಣ ಮುನ್ನೆಚ್ಚರಿಕೆ ಅಗತ್ಯ. ಸ್ವಚ್ಛತಾ ಸೇವಕರಿಗೆ ಆತ್ಮವಿಶ್ವಾಸ ತುಂಬಿಸುವ ಅಗತ್ಯವಿದೆ. ಹೋಟೆಲ್‌ನಲ್ಲಿ ಇರುವವರಿಗೆ ಹೊರಗಡೆಯಿಂದ ಊಟ ನೀಡುವುದಾದರೆ ಪಾರ್ಸೆಲ್ ನೀಡಲು ಮಾತ್ರ ಅವಕಾಶ. ಮರುಬಳಕೆಯ ಪಾತ್ರೆ ಇತ್ಯಾದಿಗಳಲ್ಲಿ ಅವಕಾಶ ಇಲ್ಲ. ಹಾಗೊಂದು ವೇಳೆ ಪ್ರಯತ್ನಿಸಿದರೆ, ಹೊಟೇಲ್ ಬಿಟ್ಟು ಊರು ತಿರುಗಿದರೆ ಅಂತಹವರ ಮೇಲೆ ಕೇಸು ದಾಖಲಿಸಲು ಅವಕಾಶ ಇದೆ ಎಂದರು.
ತಹಶೀಲ್ದಾರ್ ತಿಪ್ಪೇಸ್ವಾಮಿ ಕ್ವಾರಂಟೈನ್ ಕೇಂದ್ರಗಳಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ವಿವರ ನೀಡಿದರು. ವಿವಿಧೆಡೆಯ ಹೋಟೆಲ್ ಮಾಲಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.