ಎಂಜಲು ಬಳಕೆ ನಿಷೇಧ ಕ್ರಮ ಅಸಮರ್ಪಕ
ಐಸಿಸಿ ಕ್ರಿಕೆಟ್ ಸಲಹಾ ಸಮಿತಿಯ ವಿರುದ್ಧ ಹೇಡನ್ ಆರೋಪ
Team Udayavani, May 22, 2020, 6:26 AM IST
ಸಿಡ್ನಿ: ಅನಿಲ್ ಕುಂಬ್ಳೆ ಸಾರಥ್ಯದ ಐಸಿಸಿ ಕ್ರಿಕೆಟ್ ಸಲಹಾ ಸಮಿತಿಯು ಕೋವಿಡ್ 19 ವೈರಸ್ ಭೀತಿ ಹಿನ್ನೆಲೆಯಲ್ಲಿ ಚೆಂಡಿನ ಹೊಳಪಿ ಗಾಗಿ ಎಂಜಲು ಬಳಕೆ ಮಾಡುವುದನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯ ತಂಡದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಆಟಗಾರರಿಗೆ ಕೋವಿಡ್ 19 ಸೋಂಕು ಇಲ್ಲ ಎಂದಾದರೆ ಎಂಜಲು ಮತ್ತು ಬೆವರು ಎರಡನ್ನೂ ಬಳಕೆ ಮಾಡಲು ಅನುಮತಿ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಯೊಬ್ಬ ಆಟಗಾರನನ್ನು ಕೋವಿಡ್- 19 ತಪಾಸಣೆಗೆ ಒಳಪಡಿಸಿ ಅಗತ್ಯವಿರುವ 15 ದಿನಗಳ ಕ್ವಾರಂಟೈನ್ ಬಳಿಕವಷ್ಟೇ ಪಂದ್ಯಗಳನ್ನು ಆಡಲು ಅನುವು ಮಾಡಿಕೊಡುವ ಬಗ್ಗೆ ಆಲೋಚನೆ ನಡೆದಿದೆ. ಹೀಗಿರುವಾಗ ವೈರಸ್ ಇಲ್ಲದ ಆಟಗಾರರು ಎಂಜಲು ಮತ್ತು ಬೆವರು ಬಳಕೆ ಮಾಡಬಹುದಲ್ಲವೆ ಎಂಬುದು ಹೇಡನ್ ವಾದವಾಗಿದೆ.
ಎಂಜಲು ಹಚ್ಚುವುದು ಬೇಡ ಬೆವರು ಬಳಕೆ ಮಾಡಬಹುದು ಎಂದು ಐಸಿಸಿ ಕ್ರಿಕೆಟ್ ಸಲಹಾ ಸಮಿತಿ ನೀಡಿರುವ ಶಿಫಾರಸು ವಿಚಿತ್ರವಾಗಿದೆ. ಸೋಂಕು ಬೆವರಿನಿಂದಲೂ ಹರಡಬಹುದು. ಹೀಗಿರುವಾಗ ಈ ನಿಯಮ ಪರಿಪೂರ್ಣವಾಗಿಲ್ಲ ಎಂದು ಹೇಡನ್ ಹೇಳಿದ್ದಾರೆ.
ಧೋನಿ ಕಂಬ್ಯಾಕ್ ಕಷ್ಟಕರ
ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡುವುದು ಕಷ್ಟ. ಕೋವಿಡ್ 19 ವೈರಸ್ ಧೋನಿ ಭವಿಷ್ಯವನ್ನು ಅಂತ್ಯಗೊಳಿಸಿದೆ ಎಂದಿದ್ದಾರೆ.
ಇಲ್ಲಿ ಸಾಮರ್ಥ್ಯದ ಪ್ರಶ್ನೆಯಿಲ್ಲ. ಟಿ20 ವಿಶ್ವಕಪ್ ಟೂರ್ನಿ ಯಾವಾಗ ಆರಂಭವಾಗುತ್ತದೆ ಎಂಬುದು ಇಲ್ಲಿ ಮುಖ್ಯ. ಟೂರ್ನಿ ಆಯೋಜನೆ ತಡವಾದಷ್ಟು ಧೋನಿ ಭವಿಷ್ಯ ಕ್ಷೀಣಿಸಲಿದೆ. ಅಂದಹಾಗೆ ಧೋನಿ ನಿವೃತ್ತಿ ಹೊಂದುವುದಾದರೆ ಐಪಿಎಲ್ ಅಥವಾ ಅಂತಾರಾಷ್ಟ್ರೀಯ ಟೂರ್ನಿ ಯಾವುದರÇÉಾದರೂ ಆಗಬಹುದು. ಇದು ಅವರಿಗೆ ಬಿಟ್ಟಿದ್ದು. ಕ್ರೀಡೆಗೆ ಅವರ ಕೊಡುಗೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಮಾತ್ರ ಅವರಿಗೆ ಕಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.