ಹೈಡ್ರೋಕ್ಸಿಕ್ಲೋರೋಕ್ವಿನ್‌ ಮೇಲೆ ಅಧ್ಯಯನ ಆರಂಭ

ಕ್ಲೋರೋಕ್ವಿನ್‌, ಹೈಡ್ರೋಕ್ಸಿಕ್ಲೋ ರೋಕ್ವಿನ್‌ ಅಥವಾ ಪ್ಲೇಸ್‌ಬೊ ಸಂಯೋಜನೆ

Team Udayavani, May 22, 2020, 10:44 AM IST

ಹೈಡ್ರೋಕ್ಸಿಕ್ಲೋರೋಕ್ವಿನ್‌ ಮೇಲೆ ಅಧ್ಯಯನ ಆರಂಭ

ಸಾಂದರ್ಭಿಕ ಚಿತ್ರ

ಲಂಡನ್‌: ಮಲೇರಿಯ ಚಿಕಿತ್ಸೆಗೆ ಬಳಸಲಾಗುವ ಎರಡು ಔಷಧಿಗಳು ಕೋವಿಡ್‌-19ನ್ನು ತಡೆಗಟ್ಟಬಲ್ಲುದೇ ಎಂಬುದನ್ನು ತಿಳಿಯುವುದಕ್ಕಾಗಿ ಬ್ರೈಟನ್‌ ಮತ್ತು ಆಕ್ಸ್‌ಫ‌ರ್ಡ್‌ನಲ್ಲಿ ಅಧ್ಯಯನವೊಂದು ಆರಂಭವಾಗಿದೆ. ಕ್ಲೋರೋಕ್ವಿನ್‌, ಹೈಡ್ರೋಕ್ಸಿಕ್ಲೋರೋಕ್ವಿನ್‌ ಅಥವಾ ಪ್ಲೇಸ್‌ಬೊ (ನಿಷ್ಕ್ರಿಯ ಔಷಧಿ) ಔಷಧಿಯೊಂದನ್ನು ಯೂರೋಪ್‌, ಆಫ್ರಿಕ, ಏಶ್ಯ ಮತ್ತು ದಕ್ಷಿಣ ಅಮೆರಿಕದ 40,000ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವುದು. ಇವರೆಲ್ಲ ಕೋವಿಡ್‌-19 ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದವರಾಗಿದ್ದಾರೆ.

ಅಧ್ಯಯನಕ್ಕೊಳಪಡುವವರಲ್ಲಿ ಬ್ರಿಟನಿನವರನ್ನು ಬ್ರೈಟನ್‌ ಮತ್ತು ಸಸೆಕ್ಸ್‌ ಯೂನಿವರ್ಸಿಟಿ ಆಸ್ಪತ್ರೆಗಳಲ್ಲಿ ಹಾಗೂ ಜಾನ್‌ ರಾಡ್‌ಕ್ಲಿಫ್ ಆಸ್ಪತ್ರೆಯಲ್ಲಿ ಗುರುವಾರದಿಂದ ನೋಂದಾಯಿಸಲಾಗುತ್ತಿದೆ. ಅವರಿಗೆ ಮೂರು ತಿಂಗಳ ಕಾಲ ಹೈಡ್ರೋಕ್ಸಿಕ್ಲೋರೋಕ್ವಿನ್‌ ಅಥವಾ ಪ್ಲೇಸ್‌ಬೊವೊಂದನ್ನು ನೀಡಲಾಗುವುದು. ಏಶ್ಯದ ತಾಣಗಳಲ್ಲಿ ಅಧ್ಯಯನದಲ್ಲಿ ಪಾಲ್ಗೊಳ್ಳುವವರಿಗೆ ಕ್ಲೋರೋಕ್ವಿನ್‌ ಅಥವಾ ಪ್ಲೇಸ್‌ಬೋವೊಂದನ್ನು ನೀಡಲಾಗುವುದು. ಬ್ರಿಟನಿನ 25 ತಾಣಗಳಲ್ಲಿ ಇಂಥ ಅಧ್ಯಯನಗಳನ್ನು ನಡೆಸಲು ಉದ್ದೇಶಿಸಲಾಗಿದ್ದು ಈ ವರ್ಷಾಂತ್ಯ ವೇಳೆ ಇದರ ಫ‌ಲಿತಾಂಶವನ್ನು ನಿರೀಕ್ಷಿಸಲಾಗಿದೆ. ಇಂಗ್ಲೆಂಡ್‌ನ‌ಲ್ಲಿ ಕೋವಿಡ್‌ ರೋಗಿಗಳ ನೇರ ಉಪಚಾರದಲ್ಲಿ ತೊಡಗಿರುವ ಯಾರು ಬೇಕಿದ್ದರೂ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಆದರೆ ಅವರಿಗೆ ಕೋವಿಡ್‌-19 ಸೋಂಕು ತಗಲಿರಬಾರದು. ವೈರಸ್‌ ಅಪಾಯ ಎದುರಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಈ ಔಷಧಿ ರಕ್ಷಣೆ ಒದಗಿಸಬಲ್ಲುದೇ ಎಂಬುದು ಇದರಿಂದ ಸ್ಪಷ್ಟವಾಗಲಿದೆ.

ಲಾಭವೇ ? ಹಾನಿಯೇ ?
“ಕ್ಲೋರೋಕ್ವಿನ್‌ ಅಥವಾ ಹೈಡ್ರೋಕ್ಸಿಕ್ಲೋರೋಕ್ವಿನ್‌ ಕೋವಿಡ್‌-19ರ ವಿರುದ್ಧ ಹೋರಾಟದಲ್ಲಿ ಲಾಭದಾಯಕವೇ ಅಥವಾ ಹಾನಿಕಾರಿಯೇ ಎಂಬುದು ನಮಗೆ ಗೊತ್ತಿಲ್ಲ. ಆದರೆ ಈ ಅಧ್ಯಯನ ಅದನ್ನು ಕಂಡುಕೊಳ್ಳುವುದಕ್ಕೆ ಅತ್ಯುತ್ತಮ ವಿಧಾನ’ ಎಂದು ಅಧ್ಯಯನದ ನೇತೃತ್ವ ವಹಿಸಿರುವ ಪ್ರೊ| ನಿಕೋಲಸ್‌ ವೈಟ್‌ ಹೇಳುತ್ತಾರೆ.ಅಧ್ಯಯನದಲ್ಲಿ ಬ್ರಿಟನ್‌ ಅಲ್ಲದೆ ಥಾಯ್‌ಲ್ಯಾಂಡ್‌, ವಿಯೆಟ್ನಾಂ ,ಲಾವೋಸ್‌, ಕಾಂಬೋಡಿಯ ಮತ್ತು ಇಟಲಿಯ ಸಂಶೋಧಕರು ಪಾಲ್ಗೊಂಡಿದ್ದಾರೆ.

ವ್ಯಾಪಕವಾಗಿ ಲಭ್ಯವಿರುವ ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಸಿದ್ಧಗೊಳ್ಳಲು ಬಹಳಷ್ಟು ಸಮಯ ಕಾಯಬೇಕಾಗಬಹುದು. ಕ್ಲೋರೊಕ್ವಿನ್‌ ಮತ್ತು ಹೈಡ್ರೋಕ್ಸಿಕ್ಲೋರೋಕ್ವಿನ್‌ನಂಥ ಮಾತ್ರೆ ಕೋವಿಡ್‌-19 ಸೋಂಕನ್ನು ತಡೆಗಟ್ಟಬಲ್ಲುದಾದರೆ ಅದು ಅತ್ಯಮೂಲ್ಯವೆನಿಸಲಿದೆ ಎಂದು ಬ್ರೈಟನ್‌ ಆ್ಯಂಡ್‌ ಸಸೆಕ್ಸ್‌ ಮೆಡಿಕಲ್‌ ಸ್ಕೂಲ್‌ನ ಪ್ರೊ| ಮಾರ್ಟಿನ್‌ ಲ್ಯೂವ್‌ಲಿನ್‌ ಹೇಳುತ್ತಾರೆ.

ಈ ಔಷಧಿಗಳು ಜ್ವರ ಮತ್ತು ಉರಿಯೂತವನ್ನು ಕಡಿಮೆಗೊಳಿಬಲ್ಲುವು ಮತ್ತು ಮಲೇರಿಯ ತಡೆಗಟ್ಟುವಲ್ಲಿ ಹಾಗೂ ಚಿಕಿತ್ಸೆಯಲ್ಲಿ ಬಳಸಲ್ಪಡುತ್ತಿವೆ.
ಕೋವಿಡ್‌ ಚಿಕಿತ್ಸೆಯಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್‌ ಲಾಭದಾಯಕವಾಗಬಲ್ಲುದೆಂದು ಟ್ರಂಪ್‌ ಹೇಳಿದ ಬಳಿಕ ವಿಶ್ವದ ಗಮನ ಅದರತ್ತ ಸೆಳೆದಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಹೈಡ್ರೋಕ್ಸಿಕ್ಲೋರೋಕ್ವಿನ್‌ ಸುರಕ್ಷಿತ ಮತ್ತು ಪರಿಣಾಮಕಾರಿಯೆಂದು ಸಾಬೀತಾಗಿಲ್ಲ ಮತ್ತು ಅದರ ಸೇವನೆಯಿಂದ ಹೃದಯಕ್ಕೆ ಅಪಾಯವುಂಟಾಗಬಹುದೆಂದು ಎಚ್ಚರಿಸಿತ್ತು.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.