ಕೋಡಿಬೆಂಗ್ರೆ-ಹಂಗಾರಕಟ್ಟೆ ಮಿನಿ ಬಾರ್ಜ್ ಸ್ಥಗಿತ
Team Udayavani, May 23, 2020, 5:55 AM IST
ಕೋಟ: ಕೋಡಿಬೆಂಗ್ರೆ ಯಿಂದ ಹಂಗಾರಕಟ್ಟೆಯನ್ನು ಸಂಪರ್ಕಿ ಸುವ ಮಿನಿ ಬಾರ್ಜ್ ಸೇವೆ ಲಾಕ್‌ಡೌನ್‌ನ ಕಾರಣಕ್ಕೆ ಸ್ಥಗಿತಗೊಂಡಿದ್ದು ಇದೀಗ ಲಾಕ್‌ಡೌನ್ ಸಡಿಲಗೊಂಡು ಬಸ್ಸು ಮುಂತಾದ ಸಾಮೂಹಿಕ ಸೇವೆಗಳು ಪುನರಾರಂಭಗೊಂಡರೂ ಪುನರಾರಂಭಗೊಂಡಿಲ್ಲ. ಇದರಿಂದಾಗಿ ಎರಡು ಪ್ರದೇಶಗಳ ನೂರಾರು ಮಂದಿ ಕಾರ್ಮಿಕರು, ಸ್ಥಳೀಯರಿಗೆ ಪ್ರತಿ ದಿನ ಸಮಸ್ಯೆಯಾಗುತ್ತಿದೆ.
ಸ್ಥಳೀಯರಿಗೆ ಸಮಸ್ಯೆ
ಅರಬ್ಬಿ ಸಮುದ್ರವನ್ನು ಸೇರುವ ಸೀತಾನದಿಯ ಅಳಿವೆ ಹಾಗೂ ಸುತ್ತಲೂ ಸಮುದ್ರದಿಂದ ಆವೃತ್ತವಾದ ದ್ವೀಪ ಪ್ರದೇಶ ಕೋಡಿ ಬೆಂಗ್ರೆ. ಇಲ್ಲಿ ನೂರಾರು ಮನೆಗಳಿದ್ದು ಇಲ್ಲಿನ ನಿವಾಸಿಗಳು ಮೀನುಗಾರಿಕೆ, ಗ್ರಾ.ಪಂ. ಕಚೇರಿ, ಬ್ಯಾಂಕ್‌ಗಳಿಗೆ ಭೇಟಿ ಮುಂತಾದ ನಿತ್ಯ ಕೆಲಸಗಳಿಗೆ ಮಿನಿ ಬಾರ್ಜ್ ಮೂಲಕ ಹಂಗಾರಕಟ್ಟೆ, ಮಾಬುಕಳ, ಸಾಸ್ತಾನಕ್ಕೆ ಭೇಟಿ ನೀಡುತ್ತಾರೆ. ಇವರು ಬಾರ್ಜ್ ಹೊರತುಪಡಿಸಿ ಹಂಗಾರಕಟ್ಟೆ-ಕೋಡಿ ಕನ್ಯಾಣವನ್ನು ಸಂಪರ್ಕಿಸ ಬೇಕಾದರೆ ಕೆಮ್ಮಣ್ಣು, ನೇಜಾರು,ಸಂತೆಕಟ್ಟೆ ಬ್ರಹ್ಮಾವರ ಮೂಲಕ ಸುಮಾರು25 ಕಿ.ಮೀ ಸುತ್ತುವರಿದು ಪ್ರಯಾಣಿಸಬೇಕು ಮತ್ತು ರಿಕ್ಷಾದವರಿಗೆ 300-400ರೂ ನೀಡಬೇಕು. ಆದರೆ ಬಾರ್ಜ್ ಮೂಲಕ 4-5 ಕಿ.ಮೀ ಪ್ರಯಾಣದಲ್ಲೆ ತಲುಪಬಹುದು. ಇದೀಗ ಸೇವೆ ಸ್ಥಗಿತಗೊಂಡಿರುವುದರಿಂದ ಕೆಲವರು ಸ್ವಂತ ದೋಣಿಯ ಮೂಲಕ ಸಂಚರಿಸುತ್ತಿದ್ದಾರೆ ಹಾಗೂ ಮತ್ತೆ ಕೆಲವರಿಗೆ ಸಂಪರ್ಕ ಸಾಧ್ಯವಾಗದೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಬಸ್ಸು ಸೇವೆ
ರೀತಿಯಲ್ಲೇ ಆರಂಭಿಸಿ
ಮಿನಿ ಬಾರ್ಜ್ ಪುನರಾರಂಭದ ಕುರಿತು ಸ್ಥಳೀಯರು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಇದೇ ಕಾರಣಕ್ಕೆ ಸೇವೆ ಪುನರಾರಂಭಗೊಂಡಿಲ್ಲ ಎನ್ನುತ್ತಿದ್ದಾರೆ. ಆದರೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ ಬಸ್ಸು ಸೇವೆ ಅವಕಾಶ ನೀಡಿದಂತೆ ಬಾರ್ಜ್ ಸೇವೆಯನ್ನು ಆರಂಭಿಸಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ.
ಶೀಘ್ರ ಕ್ರಮಕೈಗೊಳ್ಳಲಿ
ಮಿನಿ ಬಾರ್ಜ್ ಸೇವೆ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ನೂರಾರು ಮಂದಿಗೆ ಪ್ರತಿದಿನ ಸಮಸ್ಯೆಯಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಪೂರಕ ಪ್ರತಿಕ್ರಿಯೆ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು.
-ನವೀನ್ ಕುಂದರ್, ಸ್ಥಳೀಯ ಗ್ರಾ.ಪಂ. ಸದಸ್ಯ
ಸೂಚನೆ ನೀಡಿದರೆ ಸಿದ್ಧ
ಕೋವಿಡ್-19 ವೈರಸ್ ಸಮಸ್ಯೆಯ ಕಾರಣಕ್ಕೆ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲ ಬಾರ್ಜ್‌ಗಳ ಸೇವೆಯನ್ನು ಮೇ 31ರ ತನಕ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಆದರೆ ಹಂಗಾರಕಟ್ಟೆಯಲ್ಲಿ ಪುನರಾರಂಭಕ್ಕೆ ಸ್ಥಳೀಯರಿಂದ ಬೇಡಿಕೆ ಇದೆ. ಜಿಲ್ಲಾಡಳಿತ ಸೂಚನೆ ನೀಡಿದರೆ ಕ್ರಮಕೈಗೊಳ್ಳಲಾಗುವುದು.
-ಥೋಮಸ್, ಫೆರ್ರಿ ತಪಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.