ಸೀಮಿತ ಬಸ್‌ ಓಡಾಟವಿದ್ದರೂ ಪ್ರಯಾಣಿಕರ ಕೊರತೆ

Team Udayavani, May 23, 2020, 6:00 AM IST

ಸೀಮಿತ ಬಸ್‌ ಓಡಾಟವಿದ್ದರೂ ಪ್ರಯಾಣಿಕರ ಕೊರತೆ

ಉಡುಪಿ: ರಾಜ್ಯ ಸರಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿ ಸಾರ್ವಜನಿಕರಿಗೆ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ನಗರದಲ್ಲಿ ಸೀಮಿತ ಸಂಖ್ಯೆಯ ಕೆಎಸ್‌ಆರ್‌ಟಿಸಿ ಮತ್ತು ಒಂದು ಸಂಸ್ಥೆಗೆ ಸೇರಿದ ಖಾಸಗಿ ಬಸ್‌ಗಳು ಬೇಡಿಕೆಯಿರುವ ಮಾರ್ಗಗಳಲ್ಲಿ ಓಡುತ್ತಿವೆ. ಅವುಗಳಿಗೆ ಪ್ರಯಾಣಿಕರ ಕೊರತೆ ಎದುರಾಗಿದೆ. ಸೀಮಿತ ಬಸ್‌ಗಳಿಗೂ ಪ್ರಯಾಣಿಕರ ಸ್ಪಂದನೆಯಿಲ್ಲ. ನಗರ ಇನ್ನು ಹಿಂದಿನ ಶೈಲಿಗೆ ಮರಳದೇ ಇರುವುದು ಇದರಿಂದ ಸ್ಪಷ್ಟವಾಗುತ್ತದೆ.

ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಸಂಸ್ಥೆಯಾದ ಭಾರತಿ ಸಂಸ್ಥೆಗೆ ಸೇರಿದ ಬಸ್‌ಗಳು ಮಾತ್ರ ಈಗ ಓಡಾಟ ನಡೆಸುತ್ತಿವೆ. ಉಡುಪಿ ಕುಂದಾಪುರ ಮಧ್ಯೆ ದಿನವೊಂದಕ್ಕೆ ತಲಾ ಮೂರು ಬಾರಿಯಂತೆ ಆರು ಟ್ರಿಪ್ ‌ಗಳಲ್ಲಿ ಭಾರತಿ ಬಸ್‌ ಓಡಾಟ ನಡೆಸುತ್ತಿದೆ. ಬೆಳಗ್ಗೆ 11ರಿಂದ ಸಂಜೆ 4ರ ತನಕ ಬಸ್‌ಗಳಲ್ಲಿ 7ರಿಂದ 8 ಮಂದಿಯಷ್ಟು ಪ್ರಯಾಣಿಕರು ಮಾತ್ರ ಇರುತ್ತಾರೆ. ಬೆಳಗ್ಗೆ ಹಾಗೂ ಸಂಜೆ ಹೊತ್ತಿನ ಟ್ರಪ್‌ಗಳ ಬಸ್‌ಗಳಲ್ಲಿ 20ರಿಂದ 25ರಷ್ಟು ಮಂದಿ ಪ್ರಯಾಣಿಕರು ಇರುತ್ತಾರೆ. ನಗರದ ಜನತೆ ಹೆಚ್ಚಾಗಿ ಬಳಸುವುದು ಖಾಸಗಿ ಬಸ್‌ಗಳನ್ನು ಜನ ಎಲ್ಲ ಚಟುವಟಿಕೆಗಳಿಗೂ ಖಾಸಗಿ ಬಸ್‌ಗಳನ್ನೇ ಅವಲಂಬಿಸಿಕೊಂಡಿದ್ದಾರೆ.

ಜನರ ಪ್ರಮಾಣ ವಿರಳ
ಉಡುಪಿ ಘಟಕದಿಂದ ಕಾರ್ಕಳಕ್ಕೆ 2, ಹೆಬ್ರಿ 1, ಹೆಜಮಾಡಿ 1, ಕುಂದಾಪುರ 1, ಮಣಿಪಾಲದಿಂದ ಕುಂದಾಪುರಕ್ಕೆ 3 ಸರಕಾರಿ ಬಸ್ಸುಗಳು ಮಾತ್ರ ಈಗ ಸಂಚರಿಸುತ್ತಿವೆ. ಕುಂದಾಪುರ ಘಟಕದಿಂದಲೂ ಐದಾರು ಸರಕಾರಿ ಬಸ್ಸುಗಳು ಓಡಾಟ ನಡೆಸುತ್ತಿವೆ. ಈ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಈ ಎರಡು ಹೊತ್ತು ಹೊರತುಪಡಿಸಿ ಇತರೆ ಅವಧಿಯಲ್ಲಿ ಪ್ರಯಾಣಿಕರ ಕೊರತೆ ಇರುತ್ತದೆ. ಜಿಲ್ಲೆಯಿಂದ ಅಂತರ್‌ ಜಿಲ್ಲೆಗಳಿಗೆ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುತ್ತಿವೆ. ಇತರೆ ಖಾಸಗಿ ಬಸ್‌ಗಳು ಇನ್ನು ರಸ್ತೆಗಿಳಿದಿಲ್ಲ. ಪೂರ್ಣ ಪ್ರಮಾಣದಲ್ಲಿ ಖಾಸಗಿ ಬಸ್‌ಗಳು ಓಡಾಟ ಆರಂಭಿಸದೆ ಇರುವುದು ಹಾಗೂ ಇನ್ನು ಅನೇಕ ಕಾರಣಗಳಿಂದ ನಗರದ ಜನಜೀವನ ಹಿಂದಿನ ಹಿಂದಿನ ಸ್ಥಿತಿಗೆ ಮರಳಿಲ್ಲ.ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಕೂಡ ಜನರ ಪ್ರಮಾಣ ವಿರಳವಾಗಿ ಕಂಡುಬರುತ್ತಿದೆ.

ಟಾಪ್ ನ್ಯೂಸ್

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Road Mishap: ಕಾರು-ಮೊಪೆಡ್‌ ಪರಸ್ಪರ ಢಿಕ್ಕಿ: ಗಾಯ

Road Mishap: ಕಾರು-ಮೊಪೆಡ್‌ ಪರಸ್ಪರ ಢಿಕ್ಕಿ: ಗಾಯ

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BCCI

BCCI; ಜ.12ಕ್ಕೆ ನೂತನ ಕಾರ್ಯದರ್ಶಿ, ಖಜಾಂಚಿ ಆಯ್ಕೆ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

football

Football Ranking: ಭಾರತ ಒಂದು ಸ್ಥಾನ ಪ್ರಗತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.