![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 23, 2020, 5:37 AM IST
ದೇಲಂಪಾಡಿ: ಲಾಕ್‌ಡೌನ್ ಸಡಿಲಗೊಳಿಸಿ ದಿನನಿತ್ಯ ವ್ಯವಹಾರಕ್ಕೆ ಅನುವು ಮಾಡಿಕೊಟ್ಟಿದ್ದರೂ ಗಡಿಗ್ರಾಮಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಅಂತರ್‌ರಾಜ್ಯ ಸಂಪರ್ಕಕ್ಕೆ ಅನುಮತಿ ಇಲ್ಲದಿರುವುದರಿಂದ ಅಗತ್ಯವಸ್ತುಗಳಿಗೆ ಪಕ್ಕದ ಪೇಟೆಗೆ ತೆರಳಲಾಗದೆ ಗ್ರಾಮಸ್ಥರು ಪರದಾಡುವಂತಾಗಿದೆ.
ಲಾಕ್‌ಡೌನ್ ಆರಂಭವಾದ ದಿನದಿಂದ ಕೇರಳ – ಕರ್ನಾಟಕ ಗಡಿ ಪ್ರದೇಶಗಳ ಸಂಪರ್ಕ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ದೇಲಂಪಾಡಿಯ ಪಂಜಿಕಲ್ಲು, ಮೆಣಸಿನಕಾನ, ಪಂಚೋಡಿ ಭಾಗದಲ್ಲಿ ರಸ್ತೆಗಳಿಗೆ ಮಣ್ಣು ಹಾಕಿ ವಾಹನ ಸಂಚಾರ ನಿಷೇಧಿಸಲಾಗಿದೆ. ಸ್ಥಳೀ ಯರು ಕರ್ನಾಟಕವನ್ನು ಅವಲಂಬಿಸಿದ್ದು, ಈಗ ಪರ್ಯಾಯ ವ್ಯವಸ್ಥೆಯಿಲ್ಲದೆ ಸಂಕಷ್ಟಪಡುವಂತಾಗಿದೆ.
ಪಕ್ಕದ ಪೇಟೆ ಅವಲಂಬನೆ
ದೇಲಂಪಾಡಿಯ ಪರಿಸರದಲ್ಲಿ ಸುಮಾರು 1,457 ಕುಟುಂಬಗಳಿದ್ದು, ಸುಮಾರು 6,000 ಜನರು ವಾಸಿಸುತ್ತಿದ್ದಾರೆ. ದಿನ ನಿತ್ಯ ಕಾರ್ಯಗಳಿಗೆ ಹಾಗೂ ಅಗತ್ಯ ಸಾಮಗ್ರಿಗಳಿಗೆ ಈ ಭಾಗದ ಜನರು ಪಕ್ಕದ ಈಶ್ವರಮಂಗಲ ಹಾಗೂ ಜಾಲೂÕರು ಪೇಟೆಯನ್ನು ಅವಲಂಬಿಸಿದ್ದಾರೆ. ದೇಲಂಪಾಡಿಯ ಮೆಣಸಿಕಾನ ಸೇತುವೆಯ ಒಂದು ಭಾಗಕ್ಕೆ ಮಣ್ಣು ಹಾಕಿ ಮುಚ್ಚಿದ್ದರಿಂದ, ಗ್ರಾಮಸ್ಥರು ಪೇಟೆಗೆ ಬರಲು ಎರಡು ವಾಹನಗಳನ್ನು ಬದಲಾಯಿಸಬೇಕಿದೆ.
ದೇಲಂಪಾಡಿ – ಊಜಂಪಾಡಿ – ಶಾಂತಿಮಲೆ- ಮಯ್ನಾಳ ಭಾಗದ ಜನರು ಈಶ್ವರಮಂಗಲಕ್ಕೂ, ಬೆಳ್ಳಿಪ್ಪಾಡಿ- ಕಲ್ಲಡ್ಕ -ಪಂಜಿಕಲ್ಲು ಭಾಗದ ಜನರು ಜಾಲೂÕರು ಪೇಟೆಗೆ ತೆರೆಳುತ್ತಿದ್ದಾರೆ. ಎಂದಿನಂತೆ ವಾಹನ ಸಂಚಾರವಿಲ್ಲದೆ ಹಾಗೂ ಎರಡೆರಡು ಕಡೆ ವಾಹನ ಬದಲಿಸುವುದರಿಂದ ದುಬಾರಿ ವೆಚ್ಚ ಭರಿಸಿ ಪ್ರಯಾಣ ಮಾಡ ಬೇ ಕಿದೆ. ಲಾಕ್ ಡೌನ್ ಸಡಿಲಿಕೆ ಮಾಡಿರುವುದರಿಂದ ರಸ್ತೆಗೆ ಹಾಕಲಾಗಿರುವ ಮಣ್ಣನ್ನು ತೆರವುಗೊಳಿಸಿದರೆ ಅನುಕೂಲ ಎನ್ನುತ್ತಾರೆ ಸ್ಥಳೀಯರಾದ ನಾರಾಯಣ ಮಣಿಯೂರು.
ಬದಲಿ ಮಾರ್ಗ ಶಿಥಿಲ
ದೇಲಂಪಾಡಿಯಿಂದ ಪರಪ್ಪ ಮಾರ್ಗವಾಗಿ ಮುಳ್ಳೇರಿಯ ಕಡೆಗೆ ತಲುಪುವ ರಸ್ತೆ ಸಂಚಾರ ಯೋಗ್ಯವಲ್ಲ. ಜೀಪಿನಂತಹ ವಾಹನಗಳು ಮಾತ್ರ ಸಂಚರಿಸಬಹುದಾಗಿದೆ. ಬಾಹ್ಯ ಸಂಪರ್ಕವಿಲ್ಲದೆ ದ್ವೀಪವಾಗಿರುವ ಗ್ರಾಮಕ್ಕೆ ದೇಲಂಪಾಡಿ ಗ್ರಾ.ಪಂ. ವತಿಯಿಂದ ಊಜಂಪಾಡಿಯಲ್ಲಿ ತಾತ್ಕಾಲಿಕ ಆಸ್ಪತ್ರೆ ಆರಂಭಿಸಲಾಗಿದೆ. ಚಿಕಿತ್ಸೆಗೆ ಸಂಬಂಧಿಸಿದ ಔಷಧಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಈ ರಸ್ತೆ ಮೂಲಕ ತರಿಸಲಾಗಿದೆ. ಶಿಥಿಲಗೊಂಡಿರುವ ರಸ್ತೆಯಾದ್ದರಿಂದ ಗ್ರಾಮಸ್ಥರು ಈ ಮಾರ್ಗವನ್ನು ಅಷ್ಟಾಗಿ ಆಶ್ರಯಿಸಿಲ್ಲ. ದುರಸ್ತಿಯಾದರೆ ಈ ಮಾರ್ಗವನ್ನು ಬದಲಿ ರಸ್ತೆಯಾಗಿ ಉಪಯೋಗಿಸಬಹುದು ಎನ್ನುತ್ತಾರೆ ಸ್ಥಳೀಯರು.
ಗಡಿ ತೆರವು ಆದೇಶ ಬಂದಿಲ್ಲ
ಜಿಲ್ಲಾಡಳಿತದ ಆದೇಶದ ಮೇರೆಗೆ ಗಡಿ ಪ್ರದೇಶಗಳ ರಸ್ತೆಯನ್ನು ಮುಚ್ಚಲಾಗಿದೆ. ಮೇ 31 ರ ವರೆಗೆ ಮುಂದುವರಿಯಲಿದೆ. ತೆರವುಗೊಳಿಸಲು ಯಾವುದೇ ಆದೇಶ ಬಂದಿಲ್ಲ.
- ಸುನೀಲ್ ಪಿ.ಡಿ.ಒ,ನೆಟ್ಟಣಿಗೆ ಮೂಟ್ನೂರು ಗ್ರಾ.ಪಂ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.