ನೀರಿಗಾಗಿ ಗ್ರಾಪಂ ಕಚೇರಿ ಮುಂದೆ ಗ್ರಾಮಸ್ಥರ ಧರಣಿ
Team Udayavani, May 23, 2020, 5:49 AM IST
ಮಾಸ್ತಿ: ಟೇಕಲ್ ಹೋಬಳಿಯ ಕೋಟೆ ತಿಮ್ಮನಾಯಕನಹಳ್ಳಿಯಲ್ಲಿ 3 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಬಗೆಹರಿಸುವಂತೆ ಹುಳ ದೇನಹಳ್ಳಿ ಗ್ರಾಪಂ ಕಚೇರಿ ಮುಂದೆ ಗ್ರಾಮಸ್ಥರು ಧರಣಿ ನಡೆಸಿದರು.
ಧರಣಿ ನೇತೃತ್ವವಹಿಸಿದ್ದ ಮುಖಂಡ ಮುನಿರಾಜು ಮಾತನಾಡಿ, ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಇವೆ. ಮೂರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿರುವ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಗ್ರಾಪಂ ಪಿಡಿಒ ಅರ್ಚನಾ ಧರಣಿ ನಿರತರನ್ನು ಮನವೋಲಿಸಿ ಮಾತನಾಡಿ, ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ನೀರು ಸ್ಥಗಿತವಾಗಿದ್ದು, ಅದನ್ನು ರೀಬೋರ್ ಮಾಡಿಸಲಾಗಿದೆ. ಆದರೂ ನೀರು ಸಿಕ್ಕಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರತಿ ದಿನ 2 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾ ಗುತ್ತಿದೆ. ಆದರೂ ನೀರು ಸಾಕಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಸೋಮವಾರದೊಳಗೆ ಸಮಸ್ಯೆ ಬಗೆಹರಿ ಸಲಾಗುವುದು ಎಂದರು.ಧರಣಿಯಲ್ಲಿ ಮುನಿರಾಜು, ಚಂದ್ರಶೇಖರ್, ಹರೀಶ್, ಪುಟ್ಟಪ್ಪ, ತಿಮ್ಮರಾಯಪ್ಪ, ನಾರಾಯಣ ಸ್ವಾಮಿ, ಟಿ.ಪಿ. ಹರೀಶ್, ಬಾಬುರಾವ್, ಶಿವರಾಜ್, ವೆಂಕಟೇಶ್, ಗೋಪಾಲ್ ರಾವ್, ವೆಂಕಟರಾಮಪ್ಪ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.