ಮೇ 25: ಮಂಗಳೂರಿನಿಂದ 6ವಿಮಾನ ಸಂಚಾರ ; ಮುಂಬಯಿ, ಚೆನ್ನೈಗೆ ವಿಮಾನ
Team Udayavani, May 23, 2020, 6:03 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ದೇಶೀಯ ವಿಮಾನ ಸೇವೆ ಆರಂಭದ ಕುರಿತು ಕೇಂದ್ರ ವಿಮಾನಯಾನ ಸಚಿವಾಲಯ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇ 25ರಿಂದ ಬೆಂಗಳೂರು, ಮುಂಬಯಿ ಹಾಗೂ ಚೆನ್ನೈಗೆ ವಿಮಾನ ಹಾರಾಟ ಆರಂಭವಾಗಲಿದೆ.
ಸ್ಪೈಸ್ಜೆಟ್ನ 3 ವಿಮಾನ ಬೆಂಗಳೂರು, ಮುಂಬಯಿಗೆ ಹಾಗೂ 3 ಇಂಡಿಗೋ ವಿಮಾನವು ಮುಂಬಯಿ, ಚೆನ್ನೈ ಹಾಗೂ ಬೆಂಗಳೂರಿಗೆ ಸಂಚರಿಸಲಿದೆ. ಈ ಮೂಲಕ ಒಟ್ಟು 6 ವಿಮಾನ ದಿನದಲ್ಲಿ 12 ಸಲ ಪ್ರಯಾಣ ನಡೆಸಲಿದೆ. ಏರ್ಇಂಡಿಯಾ ವಿಮಾನದ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ.
ಸದ್ಯದ ಮಾಹಿತಿ ಪ್ರಕಾರ, ಮೇ 25ರಂದು ಬೆಂಗಳೂರಿನಿಂದ ಸ್ಪೈಸ್ಜೆಟ್ ವಿಮಾನ ಬೆಳಗ್ಗೆ 8.30, ರಾತ್ರಿ 7 ಗಂಟೆಗೆ ಹಾಗೂ ಇಂಡಿಗೋ ಸಂಜೆ 5.55ಕ್ಕೆ ಮಂಗಳೂರಿಗೆ ಆಗಮಿಸಲಿದೆ. ಬೆಂಗಳೂರಿಗೆ ಸ್ಪೈಸ್ಜೆಟ್ ಬೆಳಗ್ಗೆ 10.20, ರಾತ್ರಿ 9.35 ಹಾಗೂ ಇಂಡಿಗೋ ಸಂಜೆ 7.30ಕ್ಕೆ ಮಂಗಳೂರಿನಿಂದ ತೆರಳಲಿದೆ.
ಮುಂಬಯಿಯಿಂದ ಸ್ಪೈಸ್ಜೆಟ್ ವಿಮಾನ ಬೆಳಗ್ಗೆ 7.05ಕ್ಕೆ ಹಾಗೂ ಇಂಡಿಗೋ ಬೆಳಗ್ಗೆ 9.30ಕ್ಕೆ ಹೊರಟು ಮಂಗಳೂರಿಗೆ ಆಗಮಿಸಿದರೆ, ಇಲ್ಲಿಂದ ಸ್ಪೈಸ್ಜೆಟ್ ಬೆಳಗ್ಗೆ 9.05ಕ್ಕೆ ಹಾಗೂ ಇಂಡಿಗೋ 11.40ಕ್ಕೆ ಮುಂಬಯಿಗೆ ತೆರಳಲಿದೆ. ಇನ್ನು, ಚೆನ್ನೈಯಿಂದ ಸಂಜೆ 5.45ಕ್ಕೆ ಹಾಗೂ ಮಂಗಳೂರಿನಿಂದ ಚೆನ್ನೈಗೆ ರಾತ್ರಿ 8.05ಕ್ಕೆ ಇಂಡಿಗೋ ವಿಮಾನ ಸಂಚರಿಸಲಿದೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.
ಇಂದು ದುಬಾೖ ವಿಮಾನ ಬೆಂಗಳೂರಿಗೆ
ಮಂಗಳೂರು: ದುಬಾೖ ಯಿಂದ 166 ಪ್ರಯಾಣಿಕರೊಂದಿಗೆ ಮತ್ತೂಂದು ವಿಮಾನವು ಶನಿವಾರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಮೇ 23ರಂದು ಸಂಜೆ 4.30ಕ್ಕೆ ದುಬಾೖಯಿಂದ ಹೊರಡುವ ವಿಮಾನ ರಾತ್ರಿ 9.50ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಆ ಬಳಿಕ ಕರಾವಳಿ ಭಾಗದ ಪ್ರಯಾಣಿಕರೊಂದಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಬಗ್ಗೆ ಮಾಹಿತಿಯಿತ್ತು. ಆದರೆ, ಜಿಲ್ಲಾಡಳಿತದ ಸದ್ಯದ ಮಾಹಿತಿ ಪ್ರಕಾರ, ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ ಎಲ್ಲಾ ಪ್ರಯಾಣಿಕರು ಬೆಂಗಳೂರಿನಲ್ಲಿಯೇ ಇಳಿದ ಬಳಿಕ ವಿಮಾನ ಸಿಬಂದಿ ಜತೆಗೆ ವಿಮಾನವು ಮಂಗಳೂರಿಗೆ ಬರಲಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.