ಒಡಿಶಾ: ಕ್ವಾರಂಟೈನ್ ಕೇಂದ್ರಗಳಲ್ಲಿ ಸಂಬಳ, ಸರ್ಟಿಫಿಕೆಟು
ವಲಸೆ ಕಾರ್ಮಿಕರಿಗೆ ಅಂತರ ಕಾಪಾಡಿಕೊಂಡು ಕೆಲಸ ನೀಡಲು ಕ್ರಮ
Team Udayavani, May 23, 2020, 8:33 AM IST
ಸಾಂದರ್ಭಿಕ ಚಿತ್ರ
ಭುವನೇಶ್ವರ: ಯೋಗ, ಧ್ಯಾನ, ಕೆಲಸ… 21 ದಿನಗಳ ನಂತರ ಮನೆಗೆ ಮರಳುವಾಗ ಸರ್ಟಿಫಿಕೆಟ್! ಒಡಿಶಾದ ಕ್ವಾರಂಟೈನ್ ಕೇಂದ್ರಗಳ ವೈಶಿಷ್ಟ್ಯ ಇದು. ವಿವಿಧ ರಾಜ್ಯಗಳಲ್ಲಿ ಅತಂತ್ರರಾಗಿದ್ದ ಲಕ್ಷಾಂತರ ಕಾರ್ಮಿಕರು ಈಗಾಗಲೇ ಒಡಿಶಾ ತಲುಪಿದ್ದಾರೆ. 21 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಅವರ ಕಾರ್ಯ ಕ್ಷಮತೆ ಕಾಪಾಡುವ ದೃಷ್ಟಿಯಿಂದ ಸರಕಾರ ವಿಭಿನ್ನ ಚಟುವಟಿಕೆಗಳನ್ನು ಆಯೋಜಿಸಿದೆ.
ಏನೇನು ಚಟುವಟಿಕೆ?: ಒಟ್ಟು 15 ಸಾವಿರ ಕೇಂದ್ರಗಳಲ್ಲಿನ ವಲಸೆ ಕಾರ್ಮಿಕರಿಗೆ ಯೋಗ, ಧ್ಯಾನ, ಆರೋಗ್ಯ ಸಂಬಂಧಿತ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಮಿಕರಿಗೆ ಯಾವುದೇ ರೀತಿಯ ಖನ್ನತೆ ಬಾಧಿಸದೇ ಇರಲು, ಯೋಗ- ಧ್ಯಾನಗಳ ತರಬೇತಿ ನೀಡಲಾಗುತ್ತದೆ. ಆನ್‌ಲೈನ್ ತರಗತಿಗಳ ಮೂಲಕ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಕ್ವಾರಂಟೈನ್ ಮುಗಿಸಿ, ಮನೆಗೆ ಮರಳುವಾಗ ಅವರಲ್ಲಿ ಯಾವುದೇ ಕೀಳರಿಮೆ ಇರಬಾರದು ಎನ್ನುವುದು ಸರಕಾರದ ಉದ್ದೇಶ.
ನರೇಗಾ ಕೆಲಸ: ಕ್ವಾರಂಟೈನ್ ಅವಧಿಯನ್ನು ವಲಸೆ ಕಾರ್ಮಿಕರಿಗೆ ಲಾಭದಾಯಕವಾಗಿ ಪರಿವರ್ತಿಸಲೂ ಸರಕಾರ ತೀರ್ಮಾನಿಸಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ನರೇಗಾ ಯೋಜನೆಗಳ ಮೂಲಕ ವಿವಿಧ ಕೆಲಸಗಳನ್ನು ಮಾಡಿಸಲು ಸಕಲ ಸಿದ್ಧತೆ ನಡೆದಿದೆ. “ನರೇಗಾ ಕೆಲಸದಿಂದ ಪ್ರತಿ ಕಾರ್ಮಿಕನೂ ನಿತ್ಯ 207 ರೂ. ಕೂಲಿ ಪಡೆಯಯುವಂತಾಗುತ್ತದೆ. ಮಾಸ್ಕ್, ಸ್ಯಾನಿಟೈಸರ್ ತಯಾರಿಕೆಯ ತರಬೇತಿಯನ್ನೂ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು’ ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಅನು ಗಾರ್ಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.