ಬದಲಾಗುತ್ತಿದೆ ಕಚೇರಿಗಳ ಸ್ವರೂಪ
Team Udayavani, May 23, 2020, 11:16 AM IST
ಮಣಿಪಾಲ: ಕೋವಿಡ್ ವೈರಸ್ ಕಚೇರಿಗಳ ಕಾರ್ಯಶೈಲಿಯ ಮೇಲೆ ಅಗಾಧ ಪರಿಣಾಮ ಬೀರಿರುವುದು ಈಗ ಸರ್ವವಿಧಿತ. ಮನೆಯಿಂದಲೇ ಕೆಲಸ ಮಾಡುವ ಶೈಲಿಯನ್ನು ಹೆಚ್ಚಿನೆಲ್ಲ ಕಂಪೆನಿಗಳು ಅಳವಡಿಸಿಕೊಂಡಿವೆ. ಇದೀಗ ಹಲವು ಜಾಗತಿಕ ಕಂಪೆನಿಗಳು ವರ್ಕ್ ಫ್ರಂ ಹೋಮ್ ಪದ್ಧತಿಯನ್ನು ಖಾಯಂ ನೆಲೆಯಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಅಂತರ ಪಾಲನೆ ಹಾಗೂ ಇತರ ಸುರಕ್ಷಾ ವಿಧಾನಗಳ ಪಾಲನೆಗೆ ಅನುಕೂಲವಾಗುವ ಶೈಲಿಯನ್ನು ಕಚೇರಿಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಿವೆ. ಒಟ್ಟಾರೆಯಾಗಿ ಕೋವಿಡ್ ವೈರಸ್ ಭವಿಷ್ಯದಲ್ಲಿ ಕಚೇರಿಗಳ ಸ್ವರೂಪವನ್ನೇ ಬದಲಾಯಿಸಲಿದೆ.
ಫ್ಲೆಕ್ಸಿಬಲ್ ವರ್ಕಿಂಗ್
ಫ್ಲೆಕ್ಸಿಬಲ್ ವರ್ಕಿಂಗ್ ಅಂದರೆ ನೌಕರರು ಮಾನಸಿಕವಾಗಿ ತಾವು ಸುರಕ್ಷಿತ ಎಂದು ಭಾವಿಸುವ ಕೆಲಸದ ಶೈಲಿಯ ಬಗ್ಗೆ ಗಂಭೀರವಾದ ಚಿಂತನೆ ನಡೆಯುತ್ತಿದೆ. ಇದರ ಸಾಧಕಬಾಧಕಗಳನ್ನು ಅಳೆದಾಗ ಅನುಕೂಲಗಳೇ ಹೆಚ್ಚಿರುವುದು ತಿಳಿದು ಬಂದಿದೆ.
ಆಧುನಿಕ ಸಂವಹನ ಸೌಲಭ್ಯಗಳು ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಕುಳಿತು ಕಚೇರಿಯ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿವೆ. ಹೀಗಾಗಿ ನೌಕರರು ಕಚೇರಿಗೆ ಹೋಗಿಯೇ ಕೆಲಸ ಮಾಡಬೇಕೆಂಬ ಪದ್ಧತಿ ಸದ್ಯದಲ್ಲೇ ಇತಿಹಾಸಕ್ಕೆ ಸೇರಬಹುದು ಎನ್ನುತ್ತಾರೆ ನ್ಯೂಜಿಲ್ಯಾಂಡ್‌ನ ಪ್ರಧಾನಿ ಜಸಿಂಡಾ ಅರ್ಡೆರ್.
ನಾಲ್ಕು ದಿನದ ವಾರ
ನ್ಯೂಜಿಲ್ಯಾಂಡ್‌ನಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡುವ ಹೊಸ ಪದ್ಧತಿಯನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಹಿಂದಿನ ಉದ್ದೇಶವಾಗಿದ್ದರೂ ಜತೆಗೆ ಹೊಸ ಶೈಲಿಯ ಶ್ರಮ ಸಂಸ್ಕೃತಿಗೆ ನಾಂದಿ ಹಾಡುವ ಅಗತ್ಯ ಉಂಟಾಗಿದೆ ಎನ್ನುತ್ತಿದ್ದಾರೆ ಅರ್ಡೆರ್.
ನೌಕರರು ರೆಡಿ
ಕ್ರಮೇಣ ಕಚೇರಿಗಳು ಪ್ರಾರಂಭವಾಗುತ್ತಿದ್ದರೂ ನೌಕರರು ಮನೆಯಿಂದಲೇ ಕೆಲಸ ಮಾಡುವ ಪದ್ಧತಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ತಿಳಿಸುತ್ತದೆ ಒಂದು ಸಮೀಕ್ಷೆ. ಕಚೇರಿಯಲ್ಲಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಅಲ್ಲದೆ ಪ್ರಯಾಣಿಸುವಾಗಲೂ ಸೋಂಕಿಗೆ ತುತ್ತಾಗಬಹುದು ಎಂಬ ಭೀತಿ ನೌಕರರಿಗಿದೆ. ಈ ಹಿನ್ನೆಲೆಯಲ್ಲಿ ವರ್ಕ್ ಫ್ರಂ ಹೋಮ್ ಸುರಕ್ಷಿತ ಎನ್ನುತ್ತಿದ್ದಾರೆ ನೌಕರರು.
ರಿಮೋಟ್ ಹೈರಿಂಗ್
ಫೇಸ್‌ಬುಕ್ “ರಿಮೋಟ್ ಹೈರಿಂಗ್’ ಎಂದರೆ ದೂರದಿಂದಲೇ ಕೆಲಸ ಮಾಡುವ ನೌಕರರ ನೇಮಕಾತಿಗೆ ಆದ್ಯತೆ ನೀಡಲು ನಿರ್ಧರಿಸಿದೆ. ಜುಲೈಯಲ್ಲಿ ರಿಮೋಟ್ ಹೈರಿಂಗ್ ಪ್ರಾರಂಭಿಸುತ್ತೇವೆ. ಮುಂದಿನ 5-10 ವರ್ಷಗಳಲ್ಲಿ ಫೇಸ್‌ಬುಕ್‌ನ ಶೇ. 50 ಸಿಬಂದಿ ಕಚೇರಿಗೆ ಹೋಗದೆಯೇ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್.
ಇದರ ಬೆನ್ನಿಗೆ ಟ್ವಿಟ್ಟರ್ ಸೇರಿದಂತೆ ಸಿಲಿಕಾನ್ ವ್ಯಾಲಿಯ ಇತರ ಕೆಲವು ದೈತ್ಯ ಕಂಪೆನಿಗಳು ಕೂಡ ನೌಕರರು ಬಯಸಿದರೆ ಖಾಯಂ ಆಗಿ ವರ್ಕ್ ಫ್ರಂ ಹೋಮ್ ಮಾಡಬಹುದು ಎಂದಿವೆ.
ಕಂಪೆನಿಗಳಿಗೂ ಲಾಭ
ವರ್ಕ್ ಪ್ರಂ ಹೋಮ್‌ನಿಂದ ಕಂಪೆನಿಗಳಿಗೂ ಲಾಭಗಳಿವೆ. ಮುಖ್ಯವಾಗಿ ನೌಕರರ ಆರೋಗ್ಯದ ಸುರಕ್ಷೆಗಾಗಿ ಮಾಡುವ ಖರ್ಚು ಉಳಿತಾಯವಾಗುತ್ತದೆ. ಜತೆಗೆ ವಿದ್ಯುತ್, ಆಹಾರ ಇತ್ಯಾದಿ ಖರ್ಚುಗಳು ಗಣನೀಯವಾಗಿ ಕಡಿತವಾಗುತ್ತವೆ. ಸಾಮಾಜಿಕ ಅಂತರ ಪಾಲನೆ ನಿಯಮಗಳಿಂದಾಗಿ ಕಚೇರಿಗಳಲ್ಲಿ ಹೆಚ್ಚು ಸ್ಥಳವಕಾಶ ಸೃಷ್ಟಿಸುವ ಅಗತ್ಯವಿತ್ತು. ವರ್ಕ್ ಫ್ರಂ ಹೋದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.