ಆರೋಗ್ಯವೇ ಮೊದಲು: ಐಸಿಸಿ
Team Udayavani, May 24, 2020, 6:15 AM IST
ದುಬಾೖ: ಕೋವಿಡ್-19 ನಿಯಂತ್ರಿಸುವಲ್ಲಿ ಬಹಳಷ್ಟು ದೇಶಗಳು ವಿಫಲವಾಗಿರುವ ಕಾರಣ ಕ್ರಿಕೆಟ್ ಚಟುವಟಿಕೆಯನ್ನು ಮುಂದುವರಿ ಸಲು ಸೂಕ್ತ ಮುನ್ನೆಚ್ಚರಿಕೆ ಅಗತ್ಯ ಎಂಬುದಾಗಿ ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ಹೇಳಿದೆ.
ಈ ಹಿನ್ನೆಲೆಯಲ್ಲಿ ಕೆಲವು ಮಾರ್ಗ ದರ್ಶಿ ಸೂತ್ರಗಳನ್ನೂ ರೂಪಿಸಿದೆ. “ಆರೋಗ್ಯವೇ ಮೊದಲು’ ಎಂಬುದು ಇದರಲ್ಲಿ ಪ್ರಮುಖವಾ ದುದು. ಇದಕ್ಕಾಗಿ ಪ್ರಧಾನ
ವೈದ್ಯಾ ಧಿಕಾರಿ ಅಥವಾ ಜೈವಿಕ ಸುರಕ್ಷಾ ಅಧಿಕಾರಿಯನ್ನು ನೇಮಿಸಬೇಕು ಎಂಬುದಾಗಿ ಹೇಳಿದೆ.
“ಕ್ರಿಕೆಟ್ ಪುನರಾರಂಭಿಸಲು ಭಾರೀ ಮುನ್ನೆಚ್ಚರಿಕೆ ವಹಿಸಬೇಕಿದೆ. ಸ್ಥಳೀಯವಾಗಿ ಕೋವಿಡ್-19 ಹಬ್ಬುವುದು ನಿಲ್ಲಬೇಕಾದುದು ಅತ್ಯಗತ್ಯ. ಆರೋಗ್ಯಕ್ಕೆ ನಮ್ಮ ಮೊದಲ ಆದ್ಯತೆ’ ಎಂಬುದಾಗಿ ಐಸಿಸಿ ತಿಳಿಸಿದೆ.
“ಅಭ್ಯಾಸಕ್ಕೆ ಇಳಿಯುವ ಮುನ್ನ ಕ್ರಿಕೆಟ್ ಪರಿಸರ, ತರಬೇತಿ ಸ್ಥಳ, ಚೇಂಜಿಂಗ್ ರೂಮ್ಸ್, ಅಲ್ಲಿನ ಪರಿಕರ, ಪ್ರಯಾಣ ನಿರ್ಬಂಧ… ಇವನ್ನೆಲ್ಲ ಗಮಿಸಬೇಕಾದುದು ಅಗತ್ಯ. ಸ್ಥಳೀಯ ಕ್ರಿಕೆಟ್ ಆಡಳಿತ ಸಂಸ್ಥೆಗಳು ಸರಕಾರದ ಆದೇಶವನ್ನು ಸ್ಪಷ್ಟವಾಗಿ ಪಾಲಿಸಬೇಕಿದೆ’ ಎಂದು ಐಸಿಸಿ ಹೇಳಿದೆ.
ಮಾರ್ಗದರ್ಶಿ ಸೂತ್ರಗಳು
ಪ್ರಯಾಣಕ್ಕೂ 14 ದಿನ ಮೊದಲು ನಿರಂತರ ದೇಹದ ಉಷ್ಣಾಂಶ ಪರೀಕ್ಷೆ ನಡೆಸುವುದು, ಅಭ್ಯಾಸದ ವೇಳೆ ಆಟಗಾರರ ನಡುವೆ ಕನಿಷ್ಠ ಒಂದೂವರೆ ಮೀ. ಅಂತರ ಕಾಯ್ದು ಕೊಳ್ಳುವುದು, ಚೆಂಡನ್ನು ಮುಟ್ಟುವ ಮೊದಲು ಕೈಯನ್ನು ಸ್ಯಾನಿಟೈಸ್ ಮಾಡುವುದು, ಬೌಲಿಂಗಿಗೂ ಮೊದಲು ತಮ್ಮ ಕ್ಯಾಪ್, ಜರ್ಕಿನ್, ಇತರ ಪರಿಕರಗಳನ್ನು ಅಂಪಾಯರ್‌ಗೆ ನೀಡದಿರುವುದು, ಅಂಗಳದಲ್ಲಿ ಸಂಭ್ರಮಾಚರಣೆ ನಡೆಸಲು ಗುಂಪುಗೂಡದಿರುವುದು, ಪ್ರಯಾಣಕ್ಕೆ ಬಾಡಿಗೆ ವಿಮಾನ ಬಳಕೆ… ಇವೆಲ್ಲ ಐಸಿಸಿಯ ನೂತನ ಮಾರ್ಗದರ್ಶಿ ಸೂತ್ರಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.