ಲಸಿಕೆಗೆ ಇನ್ನೂ 1 ವರ್ಷ ಕಾಯಬೇಕು!
Team Udayavani, May 24, 2020, 7:00 AM IST
ಸಾಂದರ್ಭಿಕ ಚಿತ್ರ.
ದೇಶದಲ್ಲಿ ಕೋವಿಡ್-19 ಲಸಿಕೆ ಸಂಶೋಧನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ಇವುಗಳು ಫಲ ನೀಡಬೇಕೆಂದರೆ ಇನ್ನೂ ಕನಿಷ್ಠಪಕ್ಷ ಒಂದು ವರ್ಷವಾದರೂ ಬೇಕು ಎಂದು ಭಾರತೀಯ ತಜ್ಞರು ಅಂದಾಜಿಸಿದ್ದಾರೆ. ದೇಶದ ಹಲವು ಸಂಸ್ಥೆಗಳು ಕೋವಿಡ್-19 ವೈರಸ್‌ಗೆ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿರುವ ನಡುವೆಯೇ ತಜ್ಞರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ.
ಸದ್ಯ ದೇಶದಲ್ಲಿ ಝೈಡಸ್ ಕ್ಯಾಡಿಲಾ, ಸೇರಮ್ ಇನ್ ಸ್ಟಿಟ್ಯೂಟ್, ಬಯಾಲಾಜಿಕಲ್ ಇ, ಭಾರತ್ ಬಯೋಟೆಕ್, ಇಂಡಿಯನ್ ಇಮ್ಯುನಾಲಾಜಿಕಲ್ಸ್ ಮತ್ತು ಮಿನ್‌ವ್ಯಾಕ್ಸ್ ಎಂಬ ಸಂಸ್ಥೆಗಳು ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ನಿರತವಾಗಿವೆ. ಈ ಪೈಕಿ ಕೆಲವು ಸಂಸ್ಥೆಗಳು ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂಶೋಧನೆ ಆರಂಭಿಸಿವೆ. ಲಸಿಕೆ ಅಭಿವೃದ್ಧಿಪಡಿಸಿ, ಅವುಗಳನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುವ ಪ್ರಕ್ರಿಯೆಯು ವರ್ಸಾಂತ್ಯದಲ್ಲಿ ಆರಂಭವಾಗಲಿದೆ. ನಂತರವೂ ಹಲವು ಪ್ರಕ್ರಿಯೆಗಳಿದ್ದು, ಕೋವಿಡ್-19 ಗೆ ಅತಿ ಶೀಘ್ರದಲ್ಲಿ ಲಸಿಕೆ ಸಿಗಲಿದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ ತಜ್ಞರು.
ರೆಮ್ ಡೆಸಿವಿಯರ್ ನಿರೀಕ್ಷೆ
ಕೋವಿಡ್-19 ಲಸಿಕೆ ಕೈಗೆಟಕದೇ ಇರುವ ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಇತರೆ ಕಾಯಿಲೆಗಳಿಗೆ ಬಳಸಲಾಗುವ ವಿವಿಧ ಔಷಧಗಳನ್ನೇ ಕೋವಿಡ್-19 ಗೆ ಚಿಕಿತ್ಸೆಯಾಗಿ ಬಳಸಲಾ ಗುತ್ತಿದೆ. ಇಂಥ ಔಷಧಗಳ ಪೈಕಿ ಸದ್ಯಕ್ಕೆ ಸ್ವಲ್ಪಮಟ್ಟಿಗೆ ನಿರೀಕ್ಷೆ ಹುಟ್ಟಿಸಿರುವುದು ಆಂಟಿ ವೈರಲ್ ಔಷಧ ರೆಮ್ ಡೆಸಿವಿಯರ್. ಹೀಗೆಂದು ಆರೋಗ್ಯ ತಜ್ಞರೇ ಅಭಿಪ್ರಾಯಪ ಟ್ಟಿದ್ದಾರೆ. 5 ವರ್‌ಷಗಳ ಹಿಂದೆ ಮಾರಣಾಂತಿಕ ಎಬೊಲಾ ವೈರಸ್ ಪತ್ತೆಯಾದಾಗ, ಅಭಿವೃದ್ಧಿಪಡಿಸಲಾದ ರೆಮ್ ಡಿಸಿವಿಯರ್ ಔಷಧವನ್ನೇ ಈಗ ಕೋವಿಡ್-19 ಸೋಂಕಿಗೂ ಬಳಸಲಾಗುತ್ತಿದ್ದು, ಸೋಂಕಿತರು ಬೇಗನೆ ಗುಣಮುಖರಾಗು ತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ 130ಕ್ಕೂ ಹೆಚ್ಚು ಔಷಧಗಳನ್ನು ಕೋವಿಡ್-19 ಸೋಂಕಿತರ ಮೇಲೆ ಪ್ರಯೋಗಿಸಲಾಗುತ್ತಿದೆ. ಈ ಪೈಕಿ ಅತಿ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದಿರುವುದು, ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಿರುವುದು ಮತ್ತು ಮರಣ ಪ್ರಮಾಣ ಕಡಿಮೆಯಾಗಲು ಸಹಾಯಕವಾಗಿ ರುವುದು ರೆಮ್ ಡೆಸಿವಿಯರ್ ಔಷಧದ ಬಳಕೆಯಿಂದ ಎಂದಿದ್ದಾರೆ ಜಮ್ಮುವಿನ ಸಿಎಸ್‌ಐಆರ್ ನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇಂಟಗ್ರೇಟಿವ್ ಮೆಡಿಸಿನ್ ನಿರ್ದೇಶಕ ರಾಮ್ ವಿಶ್ವಕರ್ಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.