ಇಂಟರ್‌ನೆಟ್ ಸ್ಪೀಡ್‌ಗೆ ಸಾಕ್ಷಿಯಾದ ಆಸ್ಟ್ರೇಲಿಯಾ
Team Udayavani, May 24, 2020, 6:55 AM IST
ಸಾಂದರ್ಭಿಕ ಚಿತ್ರ.
ಜಗತ್ತಿನ ಅತ್ಯಂತ ವೇಗದ ಇಂಟರ್‌ನೆಟ್ ಸ್ಪೀಡ್ ಸಾಧನೆ ಮಾಡುವ ಮೂಲಕ ಆಸ್ಟ್ರೇಲಿಯಾ ದಾಖಲೆ ಬರೆದಿದೆ. ಪ್ರಸ್ತುತ ಪರೀಕ್ಷಿಸಲಾಗಿರುವ ಇಂಟರ್ನೆಟ್ ಪ್ರತಿ ಸೆಕೆಂಡಿಗೆ 44.2 ಟೆರಾಬೈಟ್ ವೇಗವಾಗಿತ್ತು ಎಂದು ಹೇಳಲಾಗಿದೆ. ಹಾಲಿ ಇರುವ ಬ್ರಾಡ್‌ಬ್ಯಾಂಡ್‌ಗೆ ಹೋಲಿಸಿದರೆ ಈ ವೇಗವು ಮಿಲಿಯನ್ ಪಟ್ಟು ಹೆಚ್ಚಾಗಿದೆ. ಈ ಮೂಲಕ ಬಳಕೆದಾರರು ಕೇವಲ ಒಂದು ಸೆಕೆಂಡ್ ಸಮಯದಲ್ಲಿ ಎಚ್‌ಡಿ ಗುಣಮಟ್ಟದ 1,000 ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡ ಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಅಂದಹಾಗೆ ಈ ಅಸಾಮಾನ್ಯ ವೇಗವನ್ನು ಸಾಧಿಸಿ ತೋರಿಸಿರುವ ಮೋನಶ್, ಸ್ವಿಂಡ್‌ಬರ್ನ್ ಮತ್ತು ಆರ್‌ಎಂಐಟಿ ವಿಶ್ವವಿದ್ಯಾಲಯಗಳ ಸಂಶೋಧಕ ರನ್ನು ಒಳಗೊಂಡ ತಂಡ, ಮೆಲ್ಬೋರ್ನ್ ನಲ್ಲಿ ಡಾಟಾ ವರ್ಗಾವಣೆ ಮಾಡಲು ನೂರಾರು ಇನ್ಫ್ರಾರೆಡ್ ಲೇಸರ್‌ಗಳನ್ನು ಒಳಗೊಂಡಿರುವ ಮೈಕ್ರೊ- ಕೋಂಬ್ ಆಪ್ಟಿಕಲ್ ಚಿಪ್ ಅನ್ನು ಬಳಸಿರುವುದು ವಿಶೇಷ. ಪ್ರಸ್ತುತ ಸಿಂಗಾಪುರವು ಜಗತ್ತಿನ ಅತ್ಯಂತ ವೇಗದ ಇಂಟರ್‌ನೆಟ್ ಸೇವೆಯನ್ನು ಹೊಂದಿದ್ದು, ಅಲ್ಲಿನ ಡೌನ್‌ಲೋಡ್ ವೇಗವು ಪ್ರತಿ ಸೆಕೆಂಡಿಗೆ 197.3 ಮೆಗಾಬೈಟ್ಸ್ (ಎಂಬಿಪಿಎಸ್) ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.