ಬಾಲ್ಯವಿವಾಹ ಸಂಬಂಧ ಚೈಲ್ಡ್‌ಲೈನ್‌ಗೆ 525 ಕರೆಗಳು
Team Udayavani, May 24, 2020, 4:13 AM IST
ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ಜನತೆ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದರೆ ಮತ್ತೂಂದೆಡೆ ಬಾಲ್ಯ ವಿವಾಹ ನಡೆಸಲು ಮುಂದಾಗುತ್ತಿರುವ ಪ್ರಕರಣಗಳೂ ವರದಿಯಾಗಿವೆ. ರಾಜ್ಯದಲ್ಲಿ 60 ದಿನದಲ್ಲಿ ಬಾಲ್ಯವಿವಾಹ ಸಂಬಂಧ 1098 ಚೈಲ್ಡ್‌ಲೈನ್‌ಗೆ 525 ಕರೆಗಳು ಬಂದಿವೆ.
ಮಾ.24 ರಿಂದ ಮೇ 15ರವರೆಗೆ ಚೈಲ್ಡ್ ಲೈನ್ ಗೆ ಸಾವಿರಾರು ಕರೆಗಳು ಬಂದಿದ್ದು, ಅದರಲ್ಲಿ ಬಾಲ್ಯವಿವಾಹ ಸಂಬಂಧ 525 ಕರೆಗಳು ಬಂದಿವೆ. ಅಧಿಕಾರಿಗಳು ಸ್ಥಳಕ್ಕೆ ತಲು ಪುವುದರಲ್ಲಿ ಕೆಲವೆಡೆ ಮದುವೆಯಾಗಿದ್ದು, ವಧು, ವರನನ್ನು ವಶಕ್ಕೆ ಪಡೆದು ಪೋಷಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕೋವಿಡ್ 19 ಹಿನ್ನೆಲೆ ಸಭೆ ರದ್ದು: ಬಾಲ್ಯವಿವಾಹವನ್ನು ಪರಿ ಣಾಮಕಾರಿಯಾಗಿ ತಡೆಯಲು ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಸಮಿತಿ ರಚಿಸಲಾಗಿ ದ್ದು, 2 ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಆದರೆ, ಕೋವಿಡ್ 19 ಹಿನ್ನೆಲೆ ಸಭೆಗಳು ನಡೆದಿಲ್ಲ. ಬಾಲ್ಯವಿವಾ ಹಕ್ಕೆ ಸಂಬಂಧಿಸಿ ಕಲ್ಯಾಣ ಕರ್ನಾಟಕದಿಂದಲೇ 525 ಕರೆಗಳ ಪೈಕಿ ಅರ್ಧಕ್ಕಿಂತ ಅಧಿಕ ಕರೆಗಳು ಬಂದಿವೆ.
ಸಹಾಯವಾಣಿ ಸ್ಥಾಪನೆ: ಈ ಮಧ್ಯೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕೋವಿಡ್ ಅವಧಿ ಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣ ಗಳಿಗಾಗಿ ಸಹಾಯ ವಾಣಿಯನ್ನು ಆರಂಭಿಸಿದೆ. ಸೋಮವಾರ ದಿಂದ ಶನಿವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ 080-47181177 ಸಂಪರ್ಕಿಸಬಹುದು.
ಲಾಕ್‌ಡೌನ್ ಅವಧಿಯಲ್ಲಿ ಬಾಲ್ಯ ವಿವಾಹ ಪ್ರಕರಣ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅಪೌಷ್ಟಿಕತೆ ಯಿಂದ ನವಜಾತ ಶಿಶುಗಳ ಮರಣ ಸಂಖ್ಯೆ ಅಧಿಕವಾಗಿದೆ. ಇದರ ನಡುವೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗು ತ್ತಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ.
-ಡಾ. ಅಂತೋಣಿ ಸೆಬಾಸ್ಟಿಯನ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.