ವಾಟರ್ ಸ್ಪ್ರೇ ಗನ್
Team Udayavani, May 25, 2020, 4:43 AM IST
ಗಿಡಗಳಿಗೆ ನೀರು ಹಾಕುವಾಗ, ಬುಡಕ್ಕೆ ನೀರು ಬಿಡುವುದರ ಜೊತೆಗೆ, ಕೆಲವೊಮ್ಮೆ ಎತ್ತರದ ಸ್ಥಳಗಳನ್ನು ತಲುಪಬೇಕಾಗುತ್ತದೆ. ಈ ಸಂದರ್ಭಕ್ಕೆ ಸರಿಹೊಂದುವ ಹಾಗೆ, ಹೈಪ್ರಷರ್ ವಾಟರ್ ಸ್ಪ್ರೇ ಗನ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹೆಚ್ಚಿನ ಶ್ರಮವಿಲ್ಲದೆ, ಎತ್ತರದ ಸ್ಥಳಗಳಿಗೆ ನೀರನ್ನು ಸ್ಪ್ರೇ ಮಾಡಲು ಇದು ಸಹಕಾರಿ. ಹ್ಯಾಂಡಲ್ ಮಾದರಿಯ ಈ ವಸ್ತುವನ್ನು, ನೀರಿನ ಕೊಳವೆಯ ಒಳಗೆ ತೂರಿಸಬೇಕು. ನೀರಿನ ಪ್ರಷರ್ ಅನ್ನು ತಮಗೆ ಬೇಕಾದಂತೆ ಅಡ್ಜಸ್ಟ್ ಮಾಡಿಕೊಳ್ಳುವ ಸಲುವಾಗಿ, ತಿರುವು ಸ್ಲೆಡರ್ ಅನ್ನು ನೀಡಲಾಗಿದೆ. ಅದನ್ನು ತಿರುಗಿಸುವ ಮೂಲಕ ಪ್ರಷರ್ ಅನ್ನು ನಿಯಂತ್ರಿಸಬಹುದು.
ನಾಝಲ್ ಅನ್ನು ಟೈಟ್ ಮಾಡಿ ಹೆಚ್ಚಿನ ಪ್ರಷರ್‌ಗೆ ಅಡ್ಜಸ್ಟ್ ಮಾಡಿದರೆ, ಕಡಿಮೆ ಪ್ರಮಾಣದ ನೀರು ಹೊರಕ್ಕೆ ಹರಿಯುವುದು. ಇದರಿಂದ ನೀರಿನ ಉಳಿತಾಯ ಸಾಧ್ಯ. ಚಿತ್ರದಲ್ಲಿ ಕಾಣುವ ಹ್ಯಾಂಡಲ್ ಒತ್ತಿದರೆ ಮಾತ್ರ, ನೀರು ಸ್ಪ್ರೇ ಆಗುತ್ತದೆ. ದೀರ್ಘ ಕಾಲ ದವರೆಗೆ ನೀರು ಹಾಯಿಸಬೇಕಾದಾಗ, ಅದರಲ್ಲಿನ ಲಾಕ್ ಅನ್ನು ಒತ್ತಬಹುದು. ಹ್ಯಾಂಡಲ್ ಪ್ರಸ್ ಮಾಡಿದ ನಂತರ ಲಾಕ್ ಒತ್ತಿದರೆ, ಹ್ಯಾಂಡಲ್ ಪ್ರಸ್ ಆದ ಸ್ಥಿತಿಯಲ್ಲಿಯೇ ಲಾಕ್ ಆಗುತ್ತದೆ. ಹ್ಯಾಂಡಲ್ ಸಡಿಲಿಸಿದರೂ ಒತ್ತಿದಂತೆಯೇ ಇರುವುದರಿಂದ, ನೀರು ಹರಿಯುತ್ತಲೇ ಇರುತ್ತದೆ. ಕೈದೋಟ, ಉದ್ಯಾನವನ, ಹುಲ್ಲು ಹಾಸು- ಇತ್ಯಾದಿ ಸ್ಥಳಗಳಲ್ಲಿ ನೀರು ಬಿಡಲು ಈ ಉತ್ಪನ್ನ ಸೂಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.