ಬೆಲೆ ಇಲ್ಲದೇ ಈರುಳ್ಳಿ ಬೆಳೆಗಾರರು ಕಂಗಾಲು
Team Udayavani, May 25, 2020, 6:17 AM IST
ಲಿಂಗಸುಗೂರು: ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಈರುಳ್ಳಿಗೆ ಉತ್ತಮ ಬೆಲೆ ದೊರೆತು ಬೆಳೆಗಾರರು ಲಕ್ಷಾಧಿಪತಿಗಳಾಗಿದ್ದರು. ಆದರೆ ಈಗ ಕೋವಿಡ್ ಹೊಡೆತಕ್ಕೆ ಸಿಲುಕಿದ ಈರುಳ್ಳಿ ಬೆಳೆದ ರೈತರು ಉತ್ತಮ ಬೆಲೆ ಸಿಗದೇ ಕಣ್ಣೀರು ಸುರಿಸುವಂತಾಗಿದೆ.
ಕೋವಿಡ್ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ಸಕಾಲದಲ್ಲಿ ಈರುಳ್ಳಿ ಮಾರುಕಟ್ಟೆಗೆ ಸಾಗಿಸಲಾಗದೇ ಕೊಳೆತಿದ್ದು, ತಿಪ್ಪೆ ಪಾಲಾಗುತ್ತಿವೆ. ಇನ್ನೊಂದೆಡೆ ಸೂಕ್ತ ಬೆಲೆ ಇಲ್ಲದೇ ರೈತರು ಕಂಗಾಲಾಗುವಂತಾಗಿದೆ. ತಾಲೂಕಿನ ಹಿರೇಉಪ್ಪೇರಿ, ಚಿಕ್ಕ ಉಪ್ಪೇರಿ, ಭೂಪುರ, ನೀರಲಕೇರಾ, ಈಚನಾಳ ತಾಂಡಾ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ನೂರಾರು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಯಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ರೈತರು ಹೊಲದಲ್ಲೇ ರಾಶಿ ಹಾಕಿದ್ದಾರೆ. ಖರೀದಿದಾರರು ಮುಂದೆ ಬಂದರೂ ಕಡಿಮೆ ದರದಲ್ಲಿ ಕೇಳುತ್ತಿದ್ದು, ಸೂಕ್ತ ಬೆಲೆಗಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸೂಕ್ತ ಬೆಲೆಯಿಲ್ಲದ ಚಿಂತೆ ಒಂದಡೆಯಾದರೆ ಇದೀಗ ಮಳೆಗಾಲ ಆರಂಭವಾಗುತ್ತಿದ್ದರಿಂದ ಇತ್ತ ಹೊಲದಲ್ಲಿನ ಈರುಳ್ಳಿ ರಕ್ಷಣೆ ಮಾಡುವುದೇ ದೊಡ್ಡ ಸವಾಲಾಗಿದೆ.
ಒಂದು ಎಕರೆ ಈರುಳ್ಳಿ ಬೆಳೆಯಲು ಸುಮಾರು 50 ಸಾವಿರ ರೂಪಾಯಿ ಖರ್ಚಾಗುತ್ತಿದೆ. ಆದರೆ ಈಗ 500 ರೂ.ಗೂ ಕೇಳದಂತೆ ಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ಬೆಳೆಯಲು ಖರ್ಚು ಮಾಡಿದ ಹಣ ಕೈ ಸೇರುತ್ತಿಲ್ಲ, ಸರ್ಕಾರ ಈರುಳ್ಳಿ ಖರೀದಿಸಬೇಕು. – ದೇವಮ್ಮ, ರೈತ ಮಹಿಳೆ, ಹಿರೇಉಪ್ಪೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.