ಬಿರುಗಾಳಿ ಮಳೆ ಅಬ್ಬರ, ನಗರ ತತ್ತರ..!
Team Udayavani, May 25, 2020, 6:40 AM IST
ಬೆಂಗಳೂರು: ನಗರದಲ್ಲಿ ಭಾನುವಾರ ಮಳೆ ಕಡಿಮೆ. ಆದರೆ, ಅದರ ಅಬ್ಬರ ಹೆಚ್ಚಿತ್ತು. ಪರಿಣಾಮ 40ಕ್ಕೂ ಹೆಚ್ಚು ಮರಗಳು ನೆಲಕಚ್ಚಿದ್ದು, 150ಕ್ಕೂ ಅಧಿಕ ಮರದ ರೆಂಬೆ-ಕೊಂಬೆಗಳು ಧರೆಗುರುಳಿದವು. ವಿದ್ಯುತ್ ಕಂಬಗಳು ನೆಲಕ್ಕುರುಳಿ ಲೈಗಳು ಕಡಿತಗೊಂಡು ಕತ್ತಲೆ ಆವರಿಸಿತು. ಲಾಕ್‌ರಸ್ತೆಗಿಳಿಯುತ್ತಿದ್ದ ಜನರಸಹಿತ ಮಳೆ ಮನೆಗಳಲ್ಲಿ “ಮಾಡಿತು. ಜೆ.ಪಿ.ನಗರದ ಮೊದಲ ಹಂತದಲ್ಲಿ 3 ಮರಗಳು ಧರೆಗುರುಳಿದ್ದು, 2ಕಾರು ಗಳು ಜಖಂಗೊಂಡಿವೆ. ಜಯನಗರ ಸ್ಕೂಲ್ ಪಾಯಿಂಟ್ ಬಳಿ ವಿದ್ಯುತ್ ಕಂಬ ನೆಲಕ್ಕೆ ಉರುಳಿದ್ದು, ಕಾರುಗಳು ಜಖಂಗೊಂಡಿವೆ. ನಗರಪ್ರಮುಖ ಜಂಕ್ಷಮುಖ್ಯರಸ್ತೆಗಳಲ್ಲಿ 2-3 ಆವರಿಸಿತ್ತು. ಇದರಿಂದ ತೆರಳುತ್ತಿದ್ದ ವಾಹನಗಳಲ್ಲಿ ನೀರು ತುಂಬಿಕೊಂಡು ಪರದಾಡುವಂತಾಯಿತು.
ಎಲ್ಲೆಲ್ಲಿ ಮರಗಳು ಧರೆಗೆ?: ಗಂಟೆಗೆ 35-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ 40ಕ್ಕೂ ಅಧಿಕ ಮರಗಳು ಧರೆಗುರುಳಿರುವುದು ವರದಿಯಾಗಿದೆ. ನಗರದ ಬಿಟಿಎಂ ಬಡಾವಣೆಯಲ್ಲಿ 4 ಮರ, ರಾಜಾಜಿ ನಗರ, ವಿಲ್ಸನ್ ಗಾರ್ಡನ್, ಶೇಷಾದ್ರಿಪುರದಲ್ಲಿ ತಲಾ 1 ಮರ, ಮಹಾಲಕ್ಷಿ ಲೇಔಟ್‌ನಲ್ಲಿ 4 ಮರ, ಮರದ ರೆಂಬೆ, ಕೊಂಬೆ, ನಾಗಪುರ, ಇಬ್ಬಲೂರು, ಆಡುಗೋಡಿ, ಕೋರ ಮಂಗಲ, ಮಡಿವಾಳ, ಆರ್‌ಟಿ ನಗರ, ಜೆ.ಪಿ.ನಗರದಲ್ಲಿ 3 ಮರ, ರಾಗೀಗುಡ್ಡ, ಬಸವನಗುಡಿ, ಜಯನಗರ 4ನೇ ಬ್ಲಾಕ್‌ನಲ್ಲಿ 6 ಮರ, ಶೇಷಾದ್ರಿಪುರ ಇಸ್ಕಾನ್ ದೇವಸ್ಥಾನದ ಹಿಂಭಾಗ, ಬಸವನಗುಡಿ, ಹಲವು ಭಾಗದಲ್ಲಿ ಮರದ ರೆಂಬೆ, ಕೊಂಬೆಗಳು ಬಿದ್ದ ಬಗ್ಗೆ ದೂರು ದಾಖಲಾಗಿವೆ. ಕೆಲವೆಡೆ ಈ ಮರಗಳು ವಿದ್ಯುತ್ ಲೈನ್‌ಗಳ ಮೇಲೆ ಬಿದ್ದಿದ್ದರಿಂದ ಜಯನಗರ, ಕೆ.ಆರ್.ಪುರ, ರಾಜಾಜಿನಗರ, ಬಸವೇಶ್ವರ ನಗರ ಸೇರಿದಂತೆ ವಿವಿಧೆಡೆ 2-3 ತಾಸು ವಿದ್ಯುತ್ ಕೈಕೊಟ್ಟಿತು.
ಮುಂಗಾರು ಪೂರ್ವ ಮಳೆ: ನಗರದಲ್ಲಿ ಮಳೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ರೆಡ್ಡಿ, ನಗರದಲ್ಲಿ 12. ಸರಾಸರಿ ಮಳೆಯಾಗಿದೆ. ಗಾಳಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಅವಾಂತರ ಸೃಷ್ಟಿಯಾಗಿದೆ. ಅರಬ್ಬಿ ಸಮುದ್ರದ ಮೇಲ್ಮೆ„ ಸುಳಿಗಾಳಿ ಪ್ರಭಾವ ತೀವ್ರವಾದರೆ, ರಾಜ್ಯದ ಕರಾವಳಿ ಭಾಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಲಾಕ್‌ಡೌನ್‌ನಿಂದ ತಪ್ಪಿದ ಅನಾಹುತ!: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಬಹುತೇಕ ಜನ ಸಂಚಾರ ಸ್ಥಗಿತವಾಗಿತ್ತು. ವಾಹನ ಸಂಚಾರವೂ ಶೇ.90 ಇರಲಿಲ್ಲ. ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಮಾತ್ರ ರಸ್ತೆಗಿಳಿದಿದ್ದರು. ಹೀಗಾಗಿ, ಅದೃಷ್ಟವಶಾತ್ ಗಾಳಿ ಸಹಿತ ಮಳೆಯಿಂದ ಆಗಬಹುದಾದ ಅನಾಹುತ ತಪ್ಪಿತು ಎನ್ನಲಾಗಿದೆ.
ಪಾಲಿಕೆ ಎಷ್ಟು ಸಿದ್ಧವಾಗಿದೆ?: ನಗರದಲ್ಲಿ ಸಣ್ಣ ಮಳೆಗೂ ರಸ್ತೆಗಳು ಜಲಾವೃತಗೊಂಡು ಜಂಕ್ಷನ್‌ಗಳಲ್ಲಿ ನೀರು ನಿಲ್ಲುತ್ತದೆ. ಭಾನುವಾರ ಸರಾಸರಿ 12 ಮಿ.ಮೀ. ಮಳೆಗೇ ಹಲವು ಭಾಗದಲ್ಲಿ ನೀರು ನಿಂತಿರುವುದು ವರದಿಯಾಗಿದೆ. ಲಾಕ್‌ಡೌನ್ ಇದ್ದ ಹಿನ್ನೆಲೆಯಲ್ಲಿ ಇದರ ವಾಸ್ತವ ಚಿತ್ರಣ ಅನಾವರಣಗೊಂಡಿಲ್ಲ. ಆದರೆ, ಸಣ್ಣ ಮಳೆಗೂ ಪಾಲಿಕೆ ಸಿದವಾಗಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾದಂತಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ?: ಸಾರಕ್ಕಿ 40 ಮಿ.ಮೀ., ಕೆಂಗೇರಿ 20.5, ಆರ್‌ಹೆಮ್ಮಿಗೆಪುರ 33, ಗೋಣಿಪುರ 20.5, ಆರ್.ಆರ್.ನಗರ 18.5, ನಾಯಂಡಹಳ್ಳಿ 21.5, ಬಿಟಿಎಂ ಲೇಔಟ್ 35.5, ವಿಶ್ವೇಶ್ವರಪುರ 48, ವಿದ್ಯಾಪೀಠ 41, ಪಟ್ಟಾಭಿರಾಮನಗರ 41, ಕುಮಾರಸ್ವಾಮಿ ಲೇಔಟ್31.5, ಬಸವನಗುಡಿ 37.5, ಉತ್ತರಹಳ್ಳಿ 20.5, ಕೋಣನಕುಂಟೆ 37.5, ಪುಲಿಕೇಶಿನಗರ 10.5, ಆವಲಹಳ್ಳಿ 27, ಪುಲಿಕೇಶಿನಗರ 10.5, ಕುಶಾಲನಗರ 7.5, ಸಂಪಂಗಿ ರಾಮನಗರ 7, ಬಸವನಪುರ 12, ಬೆಳ್ಳಂದೂರು 16, ಅತ್ತಿಬೆಲೆ 9.5, ಬಸವನಹಳ್ಳಿ 10, ವಿದ್ಯಾರಣ್ಯಪುರ 26, ಮಾದವಾರ 12.5, ಚಿಕ್ಕಬಿದರಕಲ್ಲು 12, ದೊಡ್ಡಬೊಮ್ಮಸಂದ್ರ 20, ಜಕ್ಕೂರು 22, ಬಸವೇಶ್ವರನಗರ 29, ಪೀಣ್ಯ ಕೈಗಾರಿಕಾ ಪ್ರದೇಶ 16.5, ದಾಸರಹಳ್ಳಿ 16, ಹೆಗ್ಗನಹಳ್ಳಿ 15, ಶೆಟ್ಟಿಹಳ್ಳಿ 19.5, ನಾಗವಾರ 26.5, ಕಾಟನ್‌ಪೇಟೆ 32.5, ದೊಡ್ಡಬಿದರಕಲ್ಲು 19, ನಂದಿನಿ ಲೇಔಟ್ 23, ಹಂಪಿನಗರ 22, ಚಾಮರಾಜಪೇಟೆ 38, ಮಾರಪ್ಪನಪಾಳ್ಯ 13, ದೊರೆಸಾನಿಪಾಳ್ಯ 27.5, ಎಚ್.ಗೊಲ್ಲಹಳ್ಳಿ 17, ಬೊಮ್ಮನಹಳ್ಳಿ 24, ಕೋರಮಂಗಲ 31.5, ಅರಕೆರೆ 15, ಮಾಚೋಹಳ್ಳಿ 28.5 ಹಾಗೂ ಎಚ್‌ಎಸ್ ಆರ್ ಲೇಔಟ್‌ನಲ್ಲಿ 18.5 ಮಿ.ಮೀ. ಮಳೆ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.