ಹಾಸನದ 2 ಪ್ರದೇಶಗಳು 28 ದಿನ ಸೀಲ್‌ಡೌನ್
Team Udayavani, May 25, 2020, 7:53 AM IST
ಹಾಸನ: ಬೆಂಗಳೂರು ಪ್ರಯಾಣದ ಹಿನ್ನೆಲೆಯಿಂದ ಹಾಸನ ನಗರದ ಇಬ್ಬರು ನಿವಾಸಿಗಳಲ್ಲಿ ಕೋವಿಡ್ 19 ಸೋಂಕು ಕಂಡುಬಂದಿದೆ. ಸೋಂಕಿತ ರಿಬ್ಬರು ವಾಸವಿದ್ದ ಎರಡು ಪ್ರದೇಶ ಗಳನ್ನು ಕಂಟೈನ್‌ಮೆಂಟ್ ಝೋನ್ ಗಳೆಂದು ಘೋಷಣೆ ಮಾಡಿದ್ದು, ಭಾನು ವಾರ ಸೀಲ್‌ಡೌನ್ ಮಾಡಲಾಗಿದೆ.
ಹಾಸನದ ಬಿ.ಕಾಟೀಹಳ್ಳಿ ನಿವಾಸಿ ಕೆಎಸ್‌ಆರ್‌ಪಿ ಪೇದೆ ಸರ್ಕಾರಿ ವಾಹನ ದಲ್ಲಿಯೇ ಬೆಂಗಳೂರಿಗೆ ಕರ್ತವ್ಯ ನಿಮಿತ್ತ ಹೋಗಿ ಬಂದಿದ್ದರು. ಅವರಲ್ಲಿ ಕೋವಿಡ್ 19 ಪಾಸಿಟಿವ್ ಕಂಡು ಬಂದಿದೆ. ಹಾಗಾಗಿ ಇಂದಿರಾ ನಗರ ಪ್ರದೇಶವನ್ನು ಸೀಲ್‌ಲ್‌ಡೌನ್ ಮಾಡ ಲಾಗಿದೆ. ಪೇದೆಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದ್ದು, ಪೇದೆಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದು ಕ್ವಾರಂಟೈನ್ ಮಾಡಲಾಗಿದೆ.
ಹಾಸನದ ಉತ್ತರ ಬಡಾವಣೆಯ ಮಹಿಳೆಯೊಬ್ಬರು ಬೆಂಗಳೂರಿಗೆ ಹೋಗಿ ಬಂದಿದ್ದು, ಅವರಲ್ಲಿಯೂ ಕೋವಿಡ್ 19 ಸೋಂಕು ಕಂಡು ಬಂದಿದೆ. ಹಾಗಾಗಿ ಆಕೆ ವಾಸಿಸುತ್ತಿದ್ದ ಸಾಲಗಾಮೆ ರಸ್ತೆ ಅರಳೀಕಟ್ಟೆ ಸರ್ಕಲ್‌ನಿಂದ ಉತ್ತರ ಬಡಾವಣೆಯನ್ನು ಸೀಲ್‌ಡೌನ್ ಮಾಡಿದ್ದು, ಆಕೆಯ ಪ್ರಥಮ ಹಾಗೂ ದ್ವೀತಿಯ ಸಂಪರ್ಕದಲ್ಲಿದ್ದವರನ್ನೂ ಆ್ಯಂಬುಲೆನ್ಸ್‌ನಲ್ಲಿ ಸುರಕ್ಷಿತವಾಗಿ ಕರೆ ದೊಯ್ದು ಕ್ವಾರಂಟೈನ್ ಮಾಡಲಾಯಿತು.
ಸೋಂಕಿತರು ಪತ್ತೆ ಆಗಿದ್ದೇಗೆ?: ಈ ಎರಡು ಪಾಸಿಟಿವ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು, ಶಂಕಿತರಿಬ್ಬರಲ್ಲಿ ಕೆಮ್ಮು, ಜ್ವರ ಇದ್ದುದರಿಂದ ಕೋವಿಡ್ 19 ಆಸ್ಪತ್ರೆಗೆ ಸೇರಿಸಲಾಗಿತ್ತು. ಪರೀಕ್ಷೆ ಮಾಡಿದಾಗ ಕೋವಿಡ್ 19 ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಅವರು ವಾಸವಿದ್ದ ಪ್ರದೇಶಗಳನ್ನು ಕಂಟೈನ್ ಮೆಂಟ್‌ಝೋನ್ ಗಳೆಂದು ಘೋಷಿಸಲಾಗಿದೆ. ಈ ನಿರ್ಬಂಧಿತ ವಲಯದ ಆದೇಶವು 28 ದಿನಗಳ ಕಾಲ ಜಾರಿಯಲ್ಲಿರುತ್ತದೆ ಎಂದರು.
ಸಾರ್ವಜನಿಕರ ಪ್ರವೇಶ ನಿಷೇಧ: ಕಂಟೈನ್‌ಮೆಂಟ್ ಝೋನ್‌ಗಳಿಗೆ ಸಾರ್ವಜನಿಕರು ಒಳಗೆ ಹೋಗುವು ದಾಗಲಿ, ಆ ಪ್ರದೇಶದಲ್ಲಿರುವವರು ಹೊರಗೆ ಬರುವುದಾಗಲಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಪ್ರತಿ ದಿನ ಆಶಾ ಕಾರ್ಯಕರ್ತೆಯರು ನಿರ್ಬಂಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಅಗತ್ಯ ವಸ್ತುಗಳನ್ನು ನಿಯೋಜಿತ ಸಿಬ್ಬಂದಿ ಪೂರೈಸಲಿದ್ದಾರೆ ಎಂದು ಹೇಳಿದರು.
ನಗರಸಭೆ ವ್ಯಾಪ್ತಿಯ 14ನೇ ವಾರ್ಡಿನ ಅರಳೀಕಟ್ಟೆ ವೃತ್ತದ ಬಳಿ ಇರುವ ಉತ್ತರ ಬಡಾವಣೆಯ ಸೀಲ್ ಡೌನ್ ಮಾಡಿರುವ ಭಾಗದ ಜನರು ಯಾವುದೇ ವಸ್ತುಗಳನ್ನು ಕೊಂಡು ಕೊಳ್ಳಲು ಮನೆಯಿಂದ ಹೊರ ಬರು ವಂತಿಲ್ಲ. ಅವಶ್ಯಕತೆ ಇದ್ದಲ್ಲಿ ದುಬ್ಬೇ ಗೌಡ ಮೊ. 9731504899 ಮತ್ತು ಜಗದಾಂಬ ಮೊ. 9606349246 ಇವರನ್ನು ಮೊಬೈಲ್ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
RSS ಮುಖ್ಯಸ್ಥರಿಗೆ ಹಿಂದೂಗಳ ನೋವು ಗೊತ್ತಾಗುತ್ತಿಲ್ಲ: ಶ್ರೀ
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್ ಆಸ್ಪತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.