ಮುಂಬೈ ನಂಜು: ಜಿಲ್ಲಾಡಳಿತ ಲೆಕ್ಕಾಚಾರ ಉಲ್ಟಾ!
Team Udayavani, May 25, 2020, 8:07 AM IST
ಚಿಕ್ಕಬಳ್ಳಾಪುರ: ಕೋವಿಡ್ 19 ಮುಕ್ತ ಜಿಲ್ಲೆಯ ಕನಸು ಕಾಣುತ್ತಿದ್ದ ಜಿಲ್ಲೆಗೆ ಕಂಟಕವಾದ ಮುಂಬೈ ವಲಸಿಗರು, ಹಸಿರು ವಲಯ ದತ್ತ ಸಾಗಿದ್ದ ಜಿಲ್ಲೆಗೆ ಈಗ ಕೆಂಪು ವಲಯದ ಕಪ್ಪು ಚುಕ್ಕೆ. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಖುದ್ದು ವಿರೋಧಿಸಿದರೂ ಜಿಲ್ಲೆಗೆ ತಂದು ಬಿಟ್ಟರು ಕೋವಿಡ್ 19 ಸೋಂಕಿತ ಮುಂಬೈ ವಲಸಿಗರನ್ನ. ಮಹಾಮಾರಿ ಕೋವಿಡ್ 19 ಜಿಲ್ಲಾಡಳಿತದ ಲೆಕ್ಕಚಾರವನ್ನೇ ತಲೆಕೆಳಗೆ ಮಾಡಿದೆ.
ಜಿಲ್ಲೆ ಯಲ್ಲಿ ಮೇ 22 ರವರೆಗೂ ಬರೀ 26 ಮಂದಿ ಯಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದ್ದು, ಆ ಪೈಕಿ ಇಬ್ಬರು ಮೃತಪಟ್ಟು 19 ಮಂದಿ ಚೇತ ರಿಕೆ ಕಂಡು ಐವರು ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೇನು ಜಿಲ್ಲೆಯಲ್ಲಿ ಸೋಂಕಿತರು ಗುಣ ಮುಖರಾಗಿ ಜಿಲ್ಲೆ ಹಸಿರು ವಲಯಕ್ಕೆ ಹೋಗ ಲಿದೆ ಎನ್ನುವಷ್ಟರಲ್ಲಿ ಜಿಲ್ಲೆಗೆ ಮುಂಬೈ ನಂಜು ಅಂಟಿಕೊಂಡಿದೆ.
3 ದಿನದಲ್ಲಿ ಶತಕ ಬಾರಿಸಿದ ಕೋವಿಡ್ 19: ಜಿಲ್ಲೆಗೆ ಮುಂಬೈ ನಿಂದ ವಲಸಿಗರನ್ನು ಕರೆ ತಂದಿದ್ದೆ ಈಗ ಜಿಲ್ಲೆಗೆ ಶಾಪವಾಗಿದೆ. ವಲಸಿಗರು ಬಂದ ಮೂರೇ ದಿನಕ್ಕೆ ಹಾಗೂ ಬಾಗೇಪಲ್ಲಿ ಗರ್ಭಿಣಿ ಸೋಂಕಿತೆ ಸೇರಿ ಜಿಲ್ಲೆಯಲ್ಲಿ ಶತಕ ಬಾರಿ ಸಿದೆ. ಕಳೆದ ಶುಕ್ರವಾರ 47 ಮಂದಿ ವಲಸಿಗ ರಲ್ಲಿ ಕಂಡು ಬಂದಿದ್ದ ಕೋವಿಡ್ 19, ಎರಡನೇ ದಿನ ಶನಿವಾರ 26 ಮಂದಿಯಲ್ಲಿ ಕಾಣಿಸಿ ಕೊಂಡರೆ, ಭಾನು ವಾರ 27ಕ್ಕೆ ಏರಿಕೆ ಕಂಡಿದೆ.
ಹೀಗಾಗಿ ಮೂರು ದಿನದಲ್ಲಿ ವಲಸಿ ಗರ ಆಗಮನದ ಪರಿಣಾಮ ಜಿಲ್ಲೆಯಲ್ಲಿ ಸೋಂಕಿ ತರ ಸಂಖ್ಯೆ 126ಕ್ಕೆ ಏರಿಕೆ ಕಂಡಿದೆ. ಆರಂಭ ದಲ್ಲಿ ಜಿಲ್ಲೆಯಲ್ಲಿ ಕೋವಿಡ್ 19 ಆರ್ಭಟ ನಿಯಂತ್ರಣದಲ್ಲಿತ್ತು. ಜಿಲ್ಲಾಡಳಿತ ಕೂಡ ಸೋಂಕಿತರ ಹಾಗೂ ಅವರ ಸಂಪರ್ಕದಲ್ಲಿದ್ದವರನ್ನು ಸಮರ್ಪಕವಾಗಿ ಕ್ವಾರಂಟೈನ್ ಮಾಡಿ ಸೋಂಕಿ ತರ ಪ್ರಮಾಣ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು.
ಆದರೆ, ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ ವಲಸಿಗರ ಆಗಮಕ್ಕೆ ಅವಕಾಶ ನೀಡಿದ್ದೆ ತಡ ಜಿಲ್ಲೆಯಲ್ಲೀಗ ಕೋವಿಡ್ 19 ನಾಗಲೋಟ ಬ್ರೇಕ್ ಇಲ್ಲದೇ ಸಾಗಿದ್ದು, ಜಿಲ್ಲಾಡ ಳಿತಕ್ಕೆ ಮುಂಬೈ ವಲಸಿಗರು ಸಂಕಷ್ಟ, ಸಂಕಟ ತಂದಿದ್ದು, ಸಾರ್ವ ಜನಿಕರಲ್ಲಿ ಆತಂಕ ಉಂಟು ಮಾಡಿದೆ. ಸದ್ಯಕ್ಕೆ ವಲಸಿಗರು ಆಗ ಮನಕ್ಕೆ ರಾಜ್ಯ ಸರ್ಕಾರವೇ ಬ್ರೇಕ್ ಹಾಕಿದೆ. ಆದರೆ ಜಿಲ್ಲೆಗೆ ಆಗ ಮಿಸಿರುವ ಸುಮಾರು 253 ಮುಂಬೈ ವಲಸಿಗರ ಪೈಕಿ ಇದುವರೆಗೂ 99 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ 37 ಮಂದಿ ವರದಿ ಬಾಕಿ ಇದೆ.
ಮಹಾರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಆಗ ಮಿಸಿರುವ ಕಾರ್ಮಿಕರಿಗೆ ನನ್ನ ಕಡೆಯಿಂದ ಅನುಮತಿ ಕೊಟ್ಟಿರಲಿಲ್ಲ. ಆದರೆ ಸರ್ಕಾರದ ಮಟ್ಟದಲ್ಲಿ ಮಾನವೀಯತೆಯ ದೃಷ್ಟಿಯಲ್ಲಿ ಅವರನ್ನು ಜಿಲ್ಲೆಗೆ ಕರೆಸಿಕೊಳ್ಳಬೇಕೆಂಬ ಆದೇಶದ ಮೇರೆಗೆ ನಾವು ಅವರನ್ನು ಸಾರ್ವಜನಿಕರ ಸಂಪರ್ಕಕ್ಕೆ ಬಿಡದೇ ಎಲ್ಲರನ್ನು ಕ್ವಾರಂಟೈನ್ ಮಾಡಿದ್ದೇವೆ.
-ಆರ್.ಲತಾ, ಜಿಲ್ಲಾಧಿಕಾರಿ, ಮಾಧ್ಯಮ ಹೇಳಿಕೆ
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.