ಮತ್ತೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬ್ರಿಟನ್ ಪ್ರಧಾನಿಯ ಮುಖ್ಯ ಸಲಹೆಗಾರ
Team Udayavani, May 25, 2020, 12:12 PM IST
ಲಂಡನ್: ಬ್ರಿಟನ್ ಪ್ರಧಾನಿಯವರ ಮುಖ್ಯ ಸಲಹೆಗಾರ ಡೊಮಿನಿಕ್ ಕಮ್ಮಿಂಗ್ಸ್ ಅವರು ಎರಡನೆ ಬಾರಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಮೊದಲ ಬಾರಿ ಅವರು ಲಾಕ್‌ಡೌನ್ ಉಲ್ಲಂಘನೆ ಆರೋಪಕ್ಕೆ ಒಳಗಾಗಿದ್ದ ವೇಳೆ ಸರಕಾರ ಅವರ ಸಮರ್ಥನೆಗೆ ನಿಂತಿತ್ತು. ಕಮ್ಮಿಂಗ್ಸ್ ಕೂಡ ತನ್ನ ಪತ್ನಿ ಕೋವಿಡ್‌ನ ಲಕ್ಷಣಗಳನ್ನು ತೋರಿಸಿದಾಗ ಕುಟುಂಬ ಸದಸ್ಯರ ಸಮೀಪವಿರುವುದಕ್ಕಾಗಿ ತಾನು ಪತ್ನಿ ಹಾಗೂ ಮಗುವಿನೊಂದಿಗೆ ಲಂಡನ್‌ನಿಂದ ಡರಾಮ್ ಕೌಂಟಿಗೆ ಕಾರಿನಲ್ಲಿ ತೆರಳಿದ್ದುದು ನಿಜವೆಂದು ಹೇಳಿದ್ದರಲ್ಲದೆ ಅದನ್ನು “ಕಾನೂನುಬದ್ಧ ಮತ್ತು ಸಮಂಜಸ’ ಎಂದು ಸಮರ್ಥಿಸಿಕೊಂಡಿದ್ದರು.
ಆದರೆ ಎ. 12ರಂದು ಕಮ್ಮಿಂಗ್ಸ್ ಅವರು ಡರಾಮ್‌ನಿಂದ 25 ಮೈಲು ದೂರದ ಬರ್ನಾರ್ಡ್ ಕ್ಯಾಸಲ್‌ನಲ್ಲಿ ಕಾಣಿಸಿಕೊಂಡಿದ್ದರೆಂದು ದ ಅಬ್ಸರ್ವರ್ ಮತ್ತು ಸಂಡೇ ಮಿರರ್ ಪತ್ರಿಕೆಗಳು ಈಗ ವರದಿ ಮಾಡಿವೆ. ಎ. 14ರಂದು ಅವರು ಲಂಡನ್‌ನಲ್ಲಿ ಪ್ರತ್ಯಕ್ಷರಾಗಿದ್ದರು ಮತ್ತು ಎ. 19ರಂದು ಮತ್ತೆ ಡರಾಮ್ ಸಮೀಪ ಕಂಡುಬಂದಿದ್ದರೆಂದು ಪತ್ರಿಕೆಗಳು ಹೇಳಿವೆ.
ಈ ಆರೋಪಗಳನ್ನು ಪ್ರಧಾನಿ ಕಚೇರಿ ಅಲ್ಲಗಳೆದಿದೆ, ಮಾತ್ರವಲ್ಲ ಘಟನೆ ಕುರಿತಾಗಿ ಪೊಲೀಸರು ಕಮ್ಮಿಂಗ್ಸ್ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾರೆಂಬ ವರದಿಗಳನ್ನು ಕೂಡ ತಳ್ಳಿಹಾಕಿದೆ. ಡರಾಮ್ ಪೊಲೀಸರು ತಾವು ಕಮ್ಮಿಂಗ್ಸ್ ಅವರ ತಂದೆಯೊಂದಿಗೆ ಮಾತನಾಡಿದ್ದೇವೆ ಮತ್ತು ಅವರು ತಮ್ಮ ಪುತ್ರ ಕುಟುಂಬದೊಂದಿಗೆ ಲಂಡನ್‌ನಿಂದ ಪ್ರಯಾಣಿಸಿರುವುದನ್ನು ದೃಢಪಡಿಸಿದ್ದಾರೆಂದು ಹೇಳಿದ್ದಾರೆ.
ತನಿಖೆಗೆ ಆಗ್ರಹ
ವಿಪಕ್ಷ ಲೇಬರ್ ಪಾರ್ಟಿಯ ನಾಯಕರು ಹೊಸ ಆರೋಪಗಳಿಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಿದ್ದಾರೆ. “ಜನರು ಸಕಾರಣಕ್ಕೆ ಆಕ್ರೋಶಿತರಾಗಿದ್ದಾರೆ. ತಮಗೆ ಒಂದು ನಿಯಮವೇ ಮತ್ತು ಉನ್ನತ ಸ್ಥಾನಗಳಲ್ಲಿರುವವರಿಗೆ ಒಂದು ನಿಯಮವೇ ಎಂದು ಅವರು ಕೇಳುತ್ತಿದ್ದಾರೆ’ ಎಂದು ಲೇಬರ್ ನಾಯಕಿ ಸಾರಾ ಜೋನ್ಸ್ ಹೇಳಿದರು.
ಕಮ್ಮಿಂಗ್ಸ್ ರಾಜೀನಾಮೆ ನೀಡಬೇಕೆಂದು ಸಂಸದ ಮತ್ತು ಐರೋಪ್ಯ ಸಂಶೋಧನಾ ಮಂಡಲಿ(ಆಆರ್‌ಜಿ)ಯ ಮಾಜಿ ಅಧ್ಯಕ್ಷ ಸ್ಟೀವ್ ಬೇಕರ್ ಆಗ್ರಹಿಸಿದ್ದಾರೆ. ಈ ಮೂರ್ಖತನವನ್ನು ದೇಶ ಸಹಿಸದು ಎಂದವರು ಹೇಳಿದ್ದಾರೆ. ಕಮ್ಮಿಂಗ್ಸ್ ತಮ್ಮದೇ ಸರಕಾರದ ನಿಯಮಗಳನ್ನು ಉಲ್ಲಂ ಸಿದ್ದಾರೆಂದು ಹೇಳಿರುವ ಲೇಬರ್ ಮತ್ತು ಎಸ್‌ಎನ್‌ಪಿ ಪಕ್ಷಗಳು, ಈ ಕುರಿತು ತುರ್ತು ತನಿಖೆಯೊಂದಕ್ಕೆ ಆದೇಶಿಸಬೇಕೆಂದು ಆಗ್ರಹಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.