ಪುತ್ತೂರು: ಸಂತೆ ಇಲ್ಲದಿದ್ದರೂ ಜನ ಸಂಚಾರ ಅಧಿಕ
Team Udayavani, May 26, 2020, 5:53 AM IST
ಪುತ್ತೂರು: ಐತಿಹಾಸಿಕ ಹಿನ್ನೆಲೆ ಹೊಂದಿರುವ ಪುತ್ತೂರು ಕಿಲ್ಲೆ ಮೈದಾನದ ಸೋಮವಾರ ಸಂತೆ ಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿದ್ದರೂ ಸಂತೆ ನಡೆಯುವ ದಿನದಂದು ಜನರ ಸಂಚಾರ ಮಾತ್ರ ಕಡಿಮೆಯಾಗಿಲ್ಲ.
ಜನಸಂದಣಿ
ಸಂತೆ ಇಲ್ಲದಿದ್ದರೂ ಪುತ್ತೂರು ನಗರದಲ್ಲಿ ಸೋಮವಾರ ಜನರ ಓಡಾಟ ಹೆಚ್ಚಿದೆ. ಲಾಕ್‌ಡೌನ್‌ನ ಪ್ರಥಮ ಹಂತ ಹೊರತು ಪಡಿಸಿದರೆ ಉಳಿದ ಎರಡೂ ಲಾಕ್‌ಡೌನ್‌ಗಳ ಅವಧಿಯಲ್ಲಿಯೂ ನಗರದಲ್ಲಿ ಜನಸಂದಣಿ ಹೆಚ್ಚಿತ್ತು. ಗ್ರಾಮೀಣ ಜನರು ವಾರಕ್ಕೊಮ್ಮೆ ಪೇಟೆಗೆ ಬರುವ ರೂಢಿಯಿದ್ದು ಹೆಚ್ಚಾಗಿ ಸೋಮವಾರವೇ ಬರುತ್ತಾರೆ. ಇದರಿಂದ ಬಸ್ ಓಡಾಟ ಇಲ್ಲದಿದ್ದರೂ ಖಾಸಗಿ, ಬಾಡಿಗೆ ವಾಹನಗಳ ಓಡಾಟ ಅಧಿಕವಾಗಿತ್ತು.
ತರಕಾರಿ ಅಂಗಡಿಗೆ ಮಾರಾಟ
ಸಂತೆಗೆ ತಂದು ಕೃಷಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಗ್ರಾಮೀಣರು ಈಗ ಸಂತೆಯಿಲ್ಲದ್ದರಿಂದ ಅಂಗಡಿಗೆ ಕೊಡಬೇಕಾಗಿದೆ. ತರಕಾರಿ ಕೃಷಿ ನಡೆಸುವ ಕೃಷಿಕರಿಗೂ ಸಂತೆ ಹೆಚ್ಚು ಲಾಭದಾಯಕವಾಗಿತ್ತು. ಹೊರ ಜಿಲ್ಲೆಗಳಿಂದ ವ್ಯಾಪಾರಿಗಳು ಬರುವುದರಿಂದ ಗ್ರಾಹಕರಿಗೂ ಕಡಿಮೆ ದರದಲ್ಲಿ ತರಕಾರಿ ಮತ್ತಿತರ ವಸ್ತುಗಳನ್ನು ಖರೀದಿಸಲು ಅನುಕೂಲವಾಗುತ್ತಿತ್ತು.
ಎಪಿಎಂಸಿ ಸಂತೆ ಸಫಲವಾಗಿಲ್ಲ
ಸಂತೆಗೆ ಪರ್ಯಾಯವಾಗಿ ಎಪಿಎಂಸಿ ಪ್ರಾಂಗಣದಲ್ಲಿ ರೈತ ಸಂತೆಗೆ ಪ್ರಯತ್ನ ನಡೆಸ ಲಾಯಿತಾದರೂ ರೈತರ ಸ್ಪಂದನೆ ಸಿಕ್ಕಿಲ್ಲ. ನಗರದಿಂದ ತುಸು ದೂರವಿರುವ ಎಪಿಎಂಸಿ ಪ್ರಾಂಗಣಕ್ಕೆ ಬರುವುದಕ್ಕೆ ರೈತರಿಗೆ ಸಮಸ್ಯೆಯಾದ ಕಾರಣ ವಿಫಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.