ಆತಂಕದ ನಡುವೆಯೂ ಮೆಡಿಕಲ್‌ ಶಾಪ್‌, ಪೆಟ್ರೋಲ್‌ ಬಂಕ್‌, ಎಟಿಎಂ ಸಿಬಂದಿ ಸೇವೆ


Team Udayavani, May 26, 2020, 5:30 AM IST

ಆತಂಕದ ನಡುವೆಯೂ ಮೆಡಿಕಲ್‌ ಶಾಪ್‌, ಪೆಟ್ರೋಲ್‌ ಬಂಕ್‌, ಎಟಿಎಂ ಸಿಬಂದಿ ಸೇವೆ

ಸಾಂದರ್ಭಿಕ ಚಿತ್ರ.

ವಿಶೇಷ ವರದಿ- ಮಂಗಳೂರು: ಮೆಡಿಕಲ್‌ ಶಾಪ್‌, ಪೆಟ್ರೋಲ್‌ ಬಂಕ್‌ ಮತ್ತು ಎಟಿಎಂಗಳ ಭದ್ರತಾ ಸಿಬಂದಿ ಪ್ರತಿದಿನ, ಪ್ರತಿ ಕ್ಷಣವೆಂಬಂತೆ ನಿರಂತರ ಸಾರ್ವಜನಿಕ ಸಂಪರ್ಕದಲ್ಲಿದ್ದು, ಆತಂಕದ ನಡುವೆಯೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಬಹುತೇಕ ಕಡೆಗಳಲ್ಲಿ ಸಿಬಂದಿಯು ಗರಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಾದರಿ ಯೆನಿಸಿಕೊಂಡಿದ್ದರೆ ಕೆಲವೆಡೆ ಮಾತ್ರ ಇನ್ನೂ ಈ ಬಗ್ಗೆ ನಿರ್ಲಕ್ಷ್ಯ ಮುಂದುವರಿದಿರುವುದು ಗಂಭೀರ ವಿಚಾರ.

ಆರೋಗ್ಯ ಇಲಾಖೆ ಸೇರಿದಂತೆ ಆಡಳಿತದ ವಿವಿಧ ವಿಭಾಗಗಳ ಅಧಿಕಾರಿ, ಸಿಬಂದಿ, ಪೊಲೀಸ್‌ ಸಹಿತ ಕೋವಿಡ್-19 ವಾರಿಯರ್ ಗಳಾಗಿ ದುಡಿಯುತ್ತಿರುವವರಂತೆಯೇ ಮೆಡಿಕಲ್‌ ಶಾಪ್‌, ಪೆಟ್ರೋಲ್‌ಪಂಪ್‌ ಮತ್ತು ಎಟಿಎಂ ಕೇಂದ್ರಗಳ ಸಿಬಂದಿ ತಮ್ಮನ್ನು ಕೂಡ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ಜಾಗೃತಿ
ಎಲ್ಲ ಲಾಕ್‌ಡೌನ್‌ಗಳ ಸಂದರ್ಭದಲ್ಲಿಯೂ ಪೆಟ್ರೋಲ್‌ ಬಂಕ್‌ಗಳಿಗೆ ವಿನಾಯಿತಿ ಇತ್ತು. ಹಾಗಾಗಿ ಪೆಟ್ರೋಲ್‌ ಹಾಕುವ ಸಿಬಂದಿ (ಕಸ್ಟಮರ್‌ ಅಟೆಂಡರ್‌) ಎಲ್ಲ ದಿನಗಳಲ್ಲಿಯೂ ದುಡಿದಿದ್ದಾರೆ. ಈಗಲೂ ರಾತ್ರಿ ಹಗಲು ಅವರ ಸೇವೆ ಮುಂದುವರಿದಿದೆ.

ಹಲವು ಶಿಫ್ಟ್ ಗಳಲ್ಲಿ ಸಿಬಂದಿ ದುಡಿಯುತ್ತಾರಾದರೂ ಪ್ರತೀ ಕ್ಷಣವೂ ಎಚ್ಚರಿಕೆಯಿಂದ ಇರುವ ಅನಿವಾರ್ಯತೆ ಅವರದ್ದು. ಅವಿಭಜಿತ ದ.ಕ. ಜಿಲ್ಲೆಯಲ್ಲಿ 6,000 ಮಂದಿ ಪೆಟ್ರೋಲ್‌ ಬಂಕ್‌ ಸಿಬಂದಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಮಾಸ್ಕ್ ಇಲ್ಲದಿದ್ದರೆ ವಾಪಸ್‌
“ಮಾಸ್ಕ್ ಧರಿಸದೇ ಬರುವ ಗ್ರಾಹಕರ ವಾಹನಗಳಿಗೆ ಪೆಟ್ರೋಲ್‌ ಹಾಕಲು ನಿರಾಕರಿಸುತ್ತೇವೆ. ಉಳಿದಂತೆ ಯಾವ ರಾಜ್ಯಗಳ ಗ್ರಾಹಕರನ್ನು ಕೂಡ ವಾಪಸ್ಸು ಕಳುಹಿಸುವುದಿಲ್ಲ. ಸಾಧ್ಯವಾದಷ್ಟು ಡಿಜಿಟಲ್‌ ಪೇಮೆಂಟ್‌ಗೆ ಸೂಚಿಸುತ್ತೇವೆ. ನಮಗೆ ಅಗತ್ಯ ಗ್ಲೌಸ್‌, ಮಾಸ್ಕ್ ಗಳನ್ನು ಒದಗಿಸಲಾಗಿದೆ.ನಮ್ಮ ಎಚ್ಚರಿಕೆಯಲ್ಲಿ ನಾವಿದ್ದೇವೆ’ ಎನ್ನುತ್ತಾರೆ ಮಂಗಳೂರು ಭಾಗದ ಪೆಟ್ರೋಲ್‌ ಪಂಪ್‌ನ ಓರ್ವ ಸಿಬಂದಿ.

ಸುರಕ್ಷಾ ಕ್ರಮ ಪಾಲಿಸಿ
ಹೆಚ್ಚಿನ ಪೆಟ್ರೋಲ್‌ ಬಂಕ್‌ಗಳ ಸಿಬಂದಿ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಕೆಲವೆಡೆ ಸಿಬಂದಿ ಮಾಸ್ಕ್ ನ್ನುಸಮರ್ಪಕವಾಗಿ ಧರಿಸದಿರುವುದು ಕೂಡ ಗಮನಕ್ಕೆ ಬಂದಿದೆ. ಇಂತವರಲ್ಲಿಯೂ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ ಎನ್ನುತ್ತಾರೆ ಗ್ರಾಹಕರು.

ಎಟಿಎಂ ಸಿಬಂದಿಗೂ ಆತಂಕ
ಎಟಿಎಂಗಳ ಭದ್ರತಾ ಸಿಬಂದಿ ಕೂಡ ಆತಂಕದ ನಡುವೆ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ನಗರಗಳಲ್ಲಿ ಇರುವ ಎಟಿಎಂಗಳಿಗೆ ಕೆಲವೊಮ್ಮೆ ಬೇರೆ ರಾಜ್ಯಗಳ ವಾಹನಗಳ ಚಾಲಕರು ಕೂಡ ಬರುತ್ತಾರೆ. ಇದು ಎಟಿಎಂ ಭದ್ರತಾ ಸಿಬಂದಿಯ ಆತಂಕಕ್ಕೆ ಕಾರಣ. ಕೆಲವು ಎಟಿಎಂಗಳಲ್ಲಿ ಗ್ರಾಹಕರ ಬಳಕೆಗಾಗಿ ಸ್ಯಾನಿಟೈಸರ್‌ಗಳನ್ನು ಇಡಲಾಗಿದೆ. ಇನ್ನು ಕೆಲವೆಡೆ ಸ್ಯಾನಿಟೈಸರ್‌ಗಳಿಲ್ಲ. ಕೆಲವೆಡೆ ಎಟಿಎಂ ಭದ್ರತಾ ಸಿಬಂದಿ ಕೂಡ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರು ಕೂಡ ಹೆಚ್ಚು ಜಾಗರೂಕತೆ ವಹಿಸಬೇಕು ಎನ್ನುತ್ತಾರೆ ಸಾರ್ವಜನಿಕರು. ಫಾರ್ಮಸಿಸ್ಟ್‌ಗಳು ಸೇರಿದಂತೆ ಮೆಡಿಕಲ್‌ಗ‌ಳಿಗೆ ಸಂಬಂಧಿಸಿದ ಕೆಲಸಗಳಲ್ಲಿಯೂ ನೂರಾರು ಮಂದಿ ತೊಡಗಿಸಿಕೊಂಡಿದ್ದು ಅವರು ಕೂಡ ನಿರಂತರವಾಗಿ ತಮ್ಮ ಕರ್ತವ್ಯ ಮುಂದುವರೆಸಿದ್ದಾರೆ. ಇವರ ಸೇವೆಗೂ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಸುರಕ್ಷತಾ ಕ್ರಮ ಪಾಲನೆ
ಪೆಟ್ರೋಲ್‌ ಬಂಕ್‌ಗಳಲ್ಲಿ ದುಡಿಯುವವರಿಗೆ ಗ್ಲೌಸ್‌, ಮಾಸ್ಕ್ ಸೇರಿದಂತೆ ಎಲ್ಲ ಸುರಕ್ಷಾ ಪರಿಕರಗಳನ್ನು ಒದಗಿಸಿ ಮಾಹಿತಿ ನೀಡಲಾಗಿದೆ. ಅಗತ್ಯ ಸುರಕ್ಷತಾ ಕ್ರಮಗಳಿಂದಾಗಿ ಇದುವರೆಗೆ ಪೆಟ್ರೋಲ್‌ ಬಂಕ್‌ ಸಿಬಂದಿಗೆ ಕೋವಿಡ್-19 ಸೋಂಕು ಉಂಟಾಗಿಲ್ಲ. ಪೆಟ್ರೋಲ್‌ ಡೀಸೆಲ್‌ ಮಾರಾಟ ತೀವ್ರ ಕುಸಿತ ಕಂಡಿದ್ದರೂ ಸಿಬಂದಿ ಸಂಬಳ ಬಾಕಿ ಇಟ್ಟಿಲ್ಲ. ಸಿಬಂದಿಗೆ ಪೆಟ್ರೋಲಿಯಂ ಕಂಪೆನಿಗಳು ಕೋವಿಡ್‌ ಇನ್ಶೂರೆನ್ಸ್‌ ಎಂಬ ವಿಮೆ ಮಾಡಿದ್ದು ಒಂದು ವೇಳೆ ಕೋವಿಡ್-19 ದಿಂದ ಮೃತಪಟ್ಟರೆ 5 ಲ.ರೂ. ಪರಿಹಾರ ದೊರೆಯುತ್ತದೆ. ಪ್ರಸ್ತುತ ಡಿಜಿಟಲ್‌ ಪೇಮೆಂಟ್‌ ಪ್ರಮಾಣ ಹೆಚ್ಚಾಗಿದೆ.
 -ಪಿ.ವಾಮನ್‌ ಪೈ, ಅಧ್ಯಕ್ಷ, ಉಡುಪಿ ಮತ್ತು ದ.ಕ. ಜಿಲ್ಲಾ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್‌.

ಟಾಪ್ ನ್ಯೂಸ್

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.