ಮಲ್ಲಾಡಿಹಳ್ಳಿ ಸಾಧಕ ರಾಘವೇಂದ್ರ ಸ್ವಾಮಿಗಳ ಕುರಿತು ಸಿನಿಮಾ
ತಿರುಕ ಹೆಸರಿನ ಚಿತ್ರಕ್ಕೆ ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶನ
Team Udayavani, May 26, 2020, 3:57 AM IST
ಕನ್ನಡದಲ್ಲಿ ಈಗಾಗಲೇ ಅನೇಕ ಸಾಧಕರ ಕುರಿತು ಸಿನಿಮಾಗಳು ಮೂಡಿಬಂದಿವೆ. ಆ ಸಾಲಿಗೆ ಈಗ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತಾದ “ತಿರುಕ ‘ ಶೀರ್ಷಿಕೆಯ ಚಿತ್ರವೂ ಸೇರಿದೆ. ಹೌದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡ ಮಹತ್ವ ಪಡೆದಿದೆ. ನಾಡಿನ ದೊಡ್ಡ ಸಾಧಕರ ಪೈಕಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು ಕೂಡ ದೊಡ್ಡ ಸಾಧಕರು. ಅವರ ಜೀವನ ಚರಿತ್ರೆ ಕುರಿತಂತೆ ಈಗ ಸಿನಿಮಾ ಆಗುತ್ತಿದೆ.
ಅಂದಹಾಗೆ, ಈ ಚಿತ್ರವನ್ನು ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. ತಿರುಕರ ಜೋಳಿಗೆ ಪವಾಡವನ್ನು ಸಿನಿಮಾ ಮೂಲಕ ಅಳವಡಿಸಿ ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ಪಲ್ಲಕ್ಕಿ. ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ಮಾಡಿದ ಸಾಧನೆ ಅಪಾರ. ಆ ಕುರಿತು ಸಿನಿಮಾ ಮೂಲಕ ಹೇಳುವ ಪ್ರಯತ್ನ ಮಾಡಿರುವ ನಿರ್ದೇಶಕರು, ಇದಕ್ಕೂ ಮುನ್ನ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.
ಕಳೆದ ಫೆಬ್ರವರಿಯಲ್ಲೇ ಶ್ರೀಗಳ ಕುರಿತು ಒಂದಷ್ಟು ಅಧ್ಯಯನ ನಡೆಸಿದ್ದಾರೆ. ಇನ್ನು, ಈ ತಿರುಕರ ಜೊತೆ ಕೆಲಸ ಮಾಡಿದ ಕವಿಗಳು, ಅಧಿಕಾರಿಗಳು,ಯೋಗಪಟುಗಳು, ಕುಸ್ತಿ ಪಟುಗಳು, ಆಯುರ್ವೇದ ಚಿಕಿತ್ಸೆಯಲ್ಲಿ ವೃತ್ತಿ ನಿರತ ವೈದ್ಯರು, ಇನ್ನೂ ಅನೇಕರ ವಿಡಿಯೋ ಸಂದರ್ಶನಗಳು ಹಾಗೂ ತಿರುಕ ಮೂಲವಾಗಿರುವ ಬಾಕೂರು, ಕುಂದಾಪುರ, ಭಟ್ಕಳ, ರಾಯಚೂರು, ಬಳ್ಳಾರಿ ಜಿಲ್ಲೆಯ ಶಿಷ್ಯರನ್ನೂ ನಿರ್ದೇಶಕರು ಭೇಟಿ ಮಾಡಿ ಅವರ ಹೇಳಿಕೆಗಳನ್ನು ದಾಖಲಿಸಿ ಕಥೆ ಮಾಡಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಸಂಯೋಜನೆ ಕೂಡ ಆರಂಭಗೊಂಡಿದೆ.
ಲಾಕ್‌ಡೌನ್ ಮುಗಿದ ಬಳಿಕ ಈ ಕುರಿತು ಇನ್ನಷ್ಟು ಮಾಹಿತಿಗಳು ಹೊರಬರಲಿವೆ. ನಿರ್ದೇಶಕರು ಈಗಾಗಲೇ ಎರಡು ಚಿತ್ರಗಳನ್ನು ನಿರ್ದೇಶಿಸಿ, ಬಿಡುಗಡೆಗೆ ಸಜ್ಜು ಮಾಡಿದ್ದಾರೆ. ಆ ಪೈಕಿ “ಬರಗೂರು’ ಮತ್ತ “ಮದಕರಿಪುರ’ ಚಿತ್ರಗಳು ಪೂರ್ಣಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿವೆ. ಸದ್ಯಕ್ಕೆ ರಾಧಾಕೃಷ್ಣ ಪಲ್ಲಕ್ಕಿ ಅವರು ಈ “ತಿರುಕ ‘ ಜೋಳಿಗೆಯ ಪವಾಡ ಸಿನಿಮಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.