ರಂಗಿತರಂಗ ಪ್ರಕಾಶ್ ಹೊಸ ಚಿತ್ರಕ್ಕೆ ತಯಾರಿ
Team Udayavani, May 26, 2020, 4:00 AM IST
ರಂಗಿತರಂಗ ಚಿತ್ರದ ನಿರ್ಮಾಪಕ ಅವನೇ ಶ್ರೀಮನ್ನಾರಾಯಣ ಚಿತ್ರದ ಸಹ ನಿರ್ಮಾಪಕ ಕೆ.ಎಚ್ ಪ್ರಕಾಶ್ ಶ್ರೀದೇವಿ ಎಂಟರ್ ಟೈನರ್ಸ್ ಬ್ಯಾನರ್ ಅಡಿ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಜಿ. ಭರತ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ರೇಡಿಯೋ ಮತ್ತು ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಭರತ್ ಅದರ ಆಧಾರದ ಮೇಲೆ ಈ ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ಇದೊಂದು ಕಾಮಿಡಿ ಹಾರರ್ ಚಿತ್ರವಾಗಿದ್ದು, ಸದ್ಯ ಇದರ ಪ್ರೀ-ಪ್ರೊಡಕ್ಷನ್ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಕಾಡಿನಲ್ಲಿರುವ 103 ವರ್ಷದ ಹಳೆಯ ಬ್ರಿಟಿಷ್ ಪ್ರಾಚ್ಯ ಸಂಶೋಧನಾ ಕಟ್ಟಡದಲ್ಲಿ ನಡೆಯುವ ರಹಸ್ಯ ಘಟನಾವಳಿಗಳ ಕುರಿತ ಕಥೆ ಇದಾಗಿದೆ. ಭಯ ಮತ್ತು ಹಾಸ್ಯ ಮಿಶ್ರಿತ ಚಿತ್ರ ಇದಾಗಿದೆ, ದೆವ್ವದ ಇರುವಿಕೆ ಕುರಿತಂತೆ ಪ್ರಶ್ನೆಗಳನ್ನು ಹುಟ್ಟುಹಾಕಲಿದೆ. ಚಿತ್ರದ ಶೂಟಿಂಗ್‌ಗಾಗಿ ಈಗಾಗಲೇ ಊಟಿ ಸೇರಿದಂತೆ ಕೆಲ ಲೋಕೇಶನ್ ಗುರುತಿಸಲಾಗಿದ್ದು, ಲಾಕ್ ಡೌನ್ ಮುಗಿದ ಬಳಿಕ ಶೂಟಿಂಗ್ ಶುರು ಮಾಡುವ ಯೋಚನೆಯಲ್ಲಿದ್ದೇವೆ ಎನ್ನುತ್ತಾರೆ ನಿರ್ದೇಶಕ ಭರತ್.
ಇನ್ನು ಚಿತ್ರಕ್ಕಾಗಿ ಅಗತ್ಯವಿರುವ ಗ್ರೌಂಡ್ ವರ್ಕ್ ಮಾಡುತ್ತಿದ್ದೇವೆ, ಸದ್ಯ ತಂತ್ರಜ್ಞರು ಮತ್ತು ಕಲಾವಿದರ ಆಯ್ಕೆ ಮಾಡಬೇಕಾಗಿದೆ. ಶೀಘ್ರದಲ್ಲಿಯೇ ಸಿನಿಮಾಗಾಗಿ ಆಡಿಶನ್ ಆರಂಭವಾಗಲಿದೆ. ಆದಷ್ಟು ಬೇಗ ಸಿನಿಮಾದ ಶೂಟಿಂಗ್ ಶುರು ಮಾಡಲಿದ್ದೇವೆ ಎಂದಿದ್ದಾರೆ ನಿರ್ಮಾಪಕ ಪ್ರಕಾಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.