ಪುನಾರಂಭಗೊಂಡ ಜ್ಯುಬಿಲಿಯಂಟ್‌ ಕಾರ್ಖಾನೆ

Team Udayavani, May 26, 2020, 6:34 AM IST

kharkane

ಮೈಸೂರು: ಇಡೀ ದೇಶದ ಗಮನ ಸೆಳೆದಿದ್ದ ಹಾಗೂ ಕೋವಿಡ್‌ 19 ಸೋಂಕು ವ್ಯಾಪಕವಾಗಿ ಹರಡಿ ಜಿಲ್ಲೆಯನ್ನೇ ಕೋವಿಡ್‌ 19 ಹಾಟ್‌ಸ್ಪಾಟ್‌ ಆಗಿಸಿದ್ದ ನಂಜನಗೂಡಿನ ಜ್ಯುಬಿಲಿಯಂಟ್‌ ಔಷಧ ಕಾರ್ಖಾನೆ ಸೋಮವಾರದಿಂದ ಪುನರಾರಂಭವಾಯಿತು.  ಕಾರ್ಖಾನೆ ನೌಕರರು ಹಾಗೂ ಅವರ ಸಂಪರ್ಕದಲ್ಲಿರುವವರು ಸೇರಿದಂತೆ 74 ಮಂದಿಗೆ ಸೋಂಕು ಹರಡಿತ್ತು. ಕಾರ್ಖಾನೆಯ ನೌಕರನಿಗೆ ಸೋಂಕು ಹರಡಿರುವುದು ದೃಢಪಡುತ್ತಿದ್ದಂತೆಯೇ ಜಿಲ್ಲಾಡಳಿತ  ಕಾರ್ಖಾನೆಯನ್ನು ಬಂದ್‌ ಮಾಡಿತ್ತು. ಕಳೆದ  ಎರಡು ತಿಂಗಳಿನಿಂದ ಸ್ಥಗಿತವಾಗಿದ್ದ ಕಾರ್ಖಾನೆ ಸರ್ಕಾರದ ಸೂಚನೆ ಮತ್ತು ಷರತ್ತುಗಳ ಮೇರೆಗೆ ಪುನಾರಂಭಗೊಂಡಿತು.

ಪುನಾರಂಭಕ್ಕೆ ಸಿದ್ಧತೆ: ಕಾರ್ಖಾನೆಯ ನೌಕರರೆಲ್ಲರೂ ಗುಣಮುಖವಾಗಿರುವುದರಿಂದ ಔಷಧ ತಯಾರಿಕೆಗೆ ಅನುಮತಿ ನೀಡುವಂತೆ ಕಾರ್ಖಾನೆ ಸರ್ಕಾರಕ್ಕೆ ಮನವಿ  ಸಲ್ಲಿಸಿತ್ತು. ಸರ್ಕಾರ ಷರತ್ತುಬದ್ಧ ಅನುಮತಿ ನೀಡಿರುವುದರಿಂದ  ಕಾರ್ಖಾನೆಯಲ್ಲಿ ಚಟುವಟಿಕೆ ಆರಂಭವಾಗಿದ್ದು, ಸೋಮವಾರವೇ ಕೆಲವು ನೌಕರರು ಕಾರ್ಖಾನೆಗೆ ತೆರಳಿ ಪುನಾರಂಭಕ್ಕೆ ಸಿದ್ಧತೆ ನಡೆಸಿದ್ದರು.

ಶೇ.25ರಷ್ಟು ಕಾರ್ಮಿಕರು ಹಾಜರು: ಸೋಮವಾರ ಕಾರ್ಖಾನೆಯ ಶೇ.25ರಷ್ಟು ಕಾರ್ಮಿಕರು ಕೆಲಸಕ್ಕೆ ಹಾಜರಾದರು. ಕಾರ್ಖಾ ನೆಯ ಗೇಟ್‌ ಮುಂದೆ ಎಲ್ಲಾ ನೌಕರರನ್ನು ತಪಾಸಣೆಗೆ ಒಳಪಡಿಸಿ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ,  ಸ್ಯಾನಿಟೈಸರ್‌ ಹಾಕಿ ಒಳಬಿಡಲಾಯಿತು. ಪಿಪಿಇ ಕಿಟ್‌ ಬಳಸಿ ನೌಕರರನ್ನು ತಪಾಸಣೆ ಮಾಡಲಾಯಿತು. ಕೋವಿಡ್‌ 19ಕ್ಕಾಗಿಯೇ ರೆಮಿxಸಿವಿರ್‌ ಔಷಧ ತಯಾರಿಕೆಯಲ್ಲಿ ಕಾರ್ಖಾನೆ ತೊಡಗಿಕೊಂಡಿದೆ.

ಸೋಂಕಿನ ಮೂಲ ಪತ್ತೆಯಾಗಿಲ್ಲ: ತಾಲೂಕಿನ 10 ಗ್ರಾಮಗಳ ದತ್ತು, 50 ಸಾವಿರ ಕಿಟ್‌, ಭವಿಷ್ಯದಲ್ಲಿ ದೋಷ ಎಸಗಲ್ಲ ಎಂಬ ಸರ್ಕಾರದ ಷರತ್ತುಗಳನ್ನು ಒಪ್ಪಿ ಕಾರ್ಖಾನೆ ಆರಂಭಿಸಿದೆ. ಕಾರ್ಖಾನೆಯ 74 ಮಂದಿ ಕಾರ್ಮಿಕರಿಗೆ  ಕೊರೋನಾ ಸೋಂಕು ತಗುಲಿತ್ತು. ಆದರೆ ಸೋಂಕಿನ ಮೂಲವೇ ಇಂದಿಗೂ ಪತ್ತೆಯಾಗಲಿಲ್ಲ.

ಸ್ವಯಂ ಘೋಷಣಾ ಪತ್ರ: ನಾನು ಫಿಟ್‌ ಇದ್ದೇನೆ, ನೀವು ಅನುಮತಿ ಕೊಟ್ಟರೆ ಕೆಲಸ ಮಾಡುತ್ತೇನೆ ಎಂದು ಜ್ಯುಬಿಲಿಯಂಟ್‌ ಕಾರ್ಖಾನೆಗೆ ಕಾರ್ಮಿಕರು ಸ್ವಯಂ ಘೋಷಣ ಪತ್ರಕ್ಕೆ ಸಹಿ ಹಾಕಿ ಕೊಡಲು ನೌಕರರಿಗೆ ಸೂಚಿಸಲಾಗಿತ್ತು.  ಸ್ವಯಂ ಘೋಷಣಾ ಪತ್ರ ಸಲ್ಲಿಸದ ಕಾರ್ಮಿಕರಿಗೆ ಪ್ರವೇಶ ಅವಕಾಶ ನಿರಾಕರಿಸಲಾಗಿತ್ತು ಎನ್ನಲಾಗಿದೆ. ಪ್ರತಿ ಕಾರ್ಮಿಕನ ಹೆಸರು,  ವಿಳಾಸ, ಪ್ರವಾಸ, ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಯಿತು.

ನೌಕರರು ಮನೆಯಲ್ಲಿದ್ದರು ಅವರು ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವವರು  ಯಾರು, ಕಂಟೈನ್ಮೆಂಟ್‌ ವಲಯ ಬಿಟ್ಟು ಆಚೆ ಹೋಗಿದ್ದರೆ? ಸಾರ್ವಜನಿಕ ವಾಹನದಲ್ಲಿ ಕೆಲಸಕ್ಕೆ ಬಂದಿದ್ದಾರಾ? ಕೋವಿಡ್‌ 19 ಟೆಸ್ಟ್‌ ಆಗಿದೆಯಾ? ಮುಂತಾದ ಪ್ರಶ್ನೆಗಳನ್ನು ಒಳಗೊಂಡ ಸ್ವ  ಘೋಷಣಾ ಪತ್ರ ಪಡೆದಿರುವುದಾಗಿ ತಿಳಿದು ಬಂದಿದೆ.

ಟಾಪ್ ನ್ಯೂಸ್

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Missing Case: ಪಡುಬಿದ್ರಿ: ಗೃಹಿಣಿ ನಾಪತ್ತೆ; ದೂರು ದಾಖಲು

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

Padubidri; ಖಾಸಗಿ ಬಸ್‌ ಢಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.