33 ವಿಮಾನ ಆಗಮನ, 43 ನಿರ್ಗಮನ
Team Udayavani, May 26, 2020, 7:23 AM IST
ದೇವನಹಳ್ಳಿ: ಕಳೆದ 2 ತಿಂಗಳಿಂದ ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ದೇಶ-ವಿದೇಶಗಳ ವಿಮಾನ ಹಾರಾಟ ಸೋಮವಾರದಿಂದ ಆರಂಭಗೊಂಡಿದ್ದು 33 ವಿಮಾನಗಳು ಆಗಮಿಸಿದರೆ, 43 ವಿಮಾನಗಳು ನಿರ್ಗಮಿಸಿವೆ. ಬೇರೆ ಬೇರೆ ರಾಜ್ಯಗಳಿಗೆ ತೆರಳಲು ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಸೋಮವಾರ ಬೆಳಗ್ಗೆಯಿಂದಲೇ ಆಗಮಿಸಿ ದರು. ಪ್ರ
ತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡಿ ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ ಡಿಪಾರ್ಚರ್‌ನಲ್ಲಿ ವಿಮಾನ ನಿಲ್ದಾಣದ ಆಡಳಿತ ಮಂಡಳಿ ವಿಶೇಷ ಉಪಕರಣ ಇಡಲಾಗಿದೆ. ಇನ್ನು ರೆಡ್‌ಜೋನ್ ರಾಜ್ಯ ಗಳಾದ ದೆಹಲಿ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಒಂದು ವಾರ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಆದೇಶಿಸಲಾಗಿದೆ.
ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳ ನೇತೃತ್ವ ತಂಡ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದೆ. ಪ್ರಯಾಣಿಕರನ್ನು ಕರೆದೊಯ್ಯಲು 10 ಆ್ಯಂಬುಲೆನ್ಸ್, 10 ಬಿಎಂಟಿಸಿ ಬಸ್ ನಿಯೋಜಿಸಲಾಗಿದೆ. ಚೆನ್ನೈನಿಂದ 7.30ಕ್ಕೆ 120 ಜನಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನ ಕೆಐಎಎಲ್‌ಗೆ ಆಗಮಿಸಿತು.
ಪ್ರಯಾಣಿಕರ ದಂಡು: ಪಿಇಪಿ ಕಿಟ್ ಧರಿಸಿದ ಯುವತಿಯರು, ಏರ್ಪೋರ್ಟ್‌ನಲ್ಲಿ ಸಾ ಮಾಜಿಕ ಅಂತರ, ಆರೋಗ್ಯ ಸೇತು, ಸ್ಯಾನಿಟೈ ಸಿಂಗ್ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಡಿವಿಎಸ್ ಆಗಮನ: ದೆಹಲಿಯಿಂದ ಬೆಂಗಳೂರಿಗೆ ಕೇಂದ್ರ ರಾಸಾಯನಿಕ ಸಚಿವ ಡಿ. ವಿ. ಸದಾನಂದಗೌಡ ವಿಮಾನದಲ್ಲಿ ಆಗ ಮಿಸಿ ಮಾಧ್ಯಮಗಳ ಜತೆ ಮಾತನಾಡದೆ ಬೆಂಗಳೂರಿನತ್ತ ಹೊರಟರು.
ಸಾಕಷ್ಟು ವಿಮಾನಗಳು ರದ್ದು: ರೆಡ್ ಝೋನ್ ಸಿಟಿಗಳಿಂದ ಪ್ರಯಾಣಿಕರು ಆಗ ಮಿಸುತ್ತಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಿದೆ. ಸಾಕಷ್ಟು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ,ಹಲವು ವಿಮಾನಗಳ ಹಾರಾಟ ರದ್ದು, ಚೆನ್ನೈ, ಮಂಗಳೂರು, ವಿಶಾಖಪಟ್ಟಣ, ತಿರುಪತಿ, ಕೋಲ್ಕತ್ತಾ, ಗೋವಾ, ಇಂದೂರ್ ಸೇರಿ 74 ವಿಮಾನಗಳ ರದ್ದಾಗಿವೆ. ಇನ್ನೂ ಹಲವು ವಿಮಾನಗಳು ರದ್ದಾಗುವ ಸಾಧ್ಯತೆ ಯಿದ್ದು ಹೊರಹೋಗುವ ವಿಮಾನಗಳು ಯಥಾಸ್ಥಿತಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.