ಉಡುಪಿ ಜಿ.ಪಂ. ಸಿಬಂದಿಗೆ ಸೋಂಕು ದೃಢ
Team Udayavani, May 26, 2020, 8:22 AM IST
ಕಟಪಾಡಿ ಸರಕಾರಿ ಗುಡ್ಡೆಯ ರಸ್ತೆ ಸೀಲ್‌ಡೌನ್
ಉಡುಪಿ: ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಯೋಜನೆಯ ಓರ್ವ ಸಿಬಂದಿಗೆ ಸೋಮವಾರ ಕೊರೊನಾ ಸೋಂಕು ತಗುಲಿದೆ. ಇವರು ಮೇ 19ರ ಬಳಿಕ ಕಚೇರಿಗೆ ಬಂದಿರಲಿಲ್ಲ. ಜ್ವರ ಬಂದ ತತ್‌ಕ್ಷಣ ಇವರನ್ನು ವಾಪಸು ಕಳುಹಿಸಿ ಗಂಟಲು ದ್ರವವನ್ನು ಸಂಗ್ರಹಿಸಲಾಯಿತು. ಮೇ 19ರಂದು ಇವರು ಇದ್ದ ಸ್ಥಳವನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಇವರಿಗೆ ನಾಲ್ವರು ಪ್ರಾಥಮಿಕ ಸಂಪರ್ಕದವರಿದ್ದು ಇತರ ಸಂಪರ್ಕವಿದ್ದವರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
ಇಂದು ಸ್ಯಾನಿಟೈಸ್
ವರದಿ ಸೋಮವಾರ ಬಂದ ಕಾರಣ ಇಡೀ ಕಚೇರಿಯನ್ನು ಸ್ಯಾನಿಟೈಸ್ ಅಥವಾ ಸೀಲ್ ಡೌನ್ ಮಾಡಿಲ್ಲ. ಮಂಗಳವಾರ ಜಿಲ್ಲಾ ಪಂಚಾಯತ್‌ನ ಕಚೇರಿ ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್ ತ್ ಅವರು ತಿಳಿಸಿದ್ದಾರೆ. ಸಿಬಂದಿಯ ಮನೆ ಇರುವುದು ಕಟಪಾಡಿಯ ಸರಕಾರಿಗುಡ್ಡೆಯಲ್ಲಿ. ಈ ಪ್ರದೇಶದ 1ರಿಂದ 5ನೆಯ ಕ್ರಾಸ್ ತನಕ 15 ದಿನದವರೆಗೆ ಸೀಲ್‌ಡೌನ್ ಮಾಡಲಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಈ ವೇಳೆ ಅಗತ್ಯ ಸಾಮಗ್ರಿ ತರಲು 8 ಗಂಟೆಯ ತನಕ ಅನುಮತಿ ನೀಡಲಾಗಿದೆ. ಜಿ.ಪಂ. ಸಿಬಂದಿ ಮತ್ತು ಡಿಎಆರ್ ಸಿಬಂದಿಯ ಸಂಪರ್ಕದ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಒಬ್ಬರಿಗೆ ಜ್ವರ ಲಕ್ಷಣ ಕಂಡುಬಂದು ಇವರನ್ನು ಪರೀಕ್ಷಿಸಿದಾಗ ಕೋವಿಡ್ ಸೋಂಕು ಇರುವುದು ಪತ್ತೆಯಾಗಿರುವುದರಿಂದ ಇನ್ನೊಂದು ರೀತಿಯ ಭೀತಿಯನ್ನು ಹುಟ್ಟು ಹಾಕಿದೆ. ರವಿವಾರದಂತೆ ಇನ್ನೊಬ್ಬ ಪೊಲೀಸ್ ಸಿಬಂದಿಗೂ ಸೋಂಕು ತಗಲಿರುವುದೂ ಕಳವಳ ಉಂಟು ಮಾಡಿದೆ. ಸೋಮವಾರದ ಪ್ರಕರಣ ವಿವರ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 38 ಪ್ರಕರಣಗಳು ಪತ್ತೆಯಾಗಿದೆ.
4,540 ವರದಿ ಬಾಕಿ, ಕಳವಳ
ಸೋಮವಾರದ ಅಂಕಿ ಅಂಶ ಪ್ರಕಾರ 4,540 ವರದಿಗಳು ಬರಲು ಬಾಕಿ ಇವೆ. ಸೋಮವಾರ 1,202 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ನಾಲ್ವರು ಉಸಿರಾಟದ ಸಮಸ್ಯೆಯವರು, 41 ಕೋವಿಡ್ ಸಂಪರ್ಕಿತರು, ಮೂವರು ಜ್ವರ ಬಾಧೆಯವರು, 1,154 ಹಾಟ್‌ಸ್ಪಾಟ್ ಸಂಪರ್ಕದವರಾಗಿದ್ದಾರೆ. ಶನಿವಾರ 392 ನೆಗೆಟಿವ್ ಪ್ರಕರಣ, 32 ಪಾಸಿಟಿವ್ ಪ್ರಕರಣಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.