ಕಾಸರಗೋಡು: 14 ಮಂದಿಗೆ ಸೋಂಕು
Team Udayavani, May 26, 2020, 8:42 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಜಿಲ್ಲೆಯಲ್ಲಿ 14 ಮಂದಿ ಸಹಿತ ಕೇರಳ ರಾಜ್ಯದಲ್ಲಿ ಸೋಮವಾರ 49 ಮಂದಿಗೆ ಕೋವಿಡ್ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇವರಲ್ಲಿ 18 ಮಂದಿ ವಿದೇಶ, 25 ಮಂದಿ ಇತರ ರಾಜ್ಯಗಳಿಂದ ಮತ್ತು ಆರು ಮಂದಿಗೆ ಸಂಪರ್ಕದಿಂದ ಕೊರೊನಾ ಸೋಂಕು ಬಂದಿದೆ. ಇದೇ ಸಂದರ್ಭಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ ರೋಗಮುಕ್ತರಾಗಿದ್ದಾರೆ.
ಕಾಸರಗೋಡು: 6 ಗುಣಮುಖ
ಜಿಲ್ಲೆಯಲ್ಲಿ ಸೋಮವಾರ 14 ಮಂದಿಗೆ ಕೋವಿಡ್ 19 ಸೋಂಕು ಖಚಿತವಾಗಿದ್ದು 6 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಸೋಂಕು ಖಚಿತಗೊಂಡವರಲ್ಲಿ 13 ಮಂದಿ ಮಹಾರಾಷ್ಟ್ರ ಮತ್ತು ಇನ್ನೊಬ್ಬರು ಕೊಲ್ಲಿ ರಾಷ್ಟ್ರದಿಂದ ಬಂದವರು. ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ 38 ವರ್ಷ ಪ್ರಾಯದ ಉದುಮ ನಿವಾಸಿಗೆ ಸೋಂಕು ಖಚಿತವಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ 8 ಮಂದಿ ಕುಂಬಳೆ, ಇಬ್ಬರು ವರ್ಕಾಡಿ ನಿವಾಸಿಗಳು, ವರ್ಕಾಡಿ, ಮೀಂಜ, ಉದುಮ, ಕುಂಬಾxಜೆ ನಿವಾಸಿಗಳಾದ ತಲಾ ಒಬ್ಬರಿಗೆ ರೋಗ ತಗಲಿದೆ. ಜಿಲ್ಲೆಯಲ್ಲಿ ಸೋಮವಾರ 6 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.