ಕೋವಿಡ್: ಅಪಾಯ ಇನ್ನೂ ಹೆಚ್ಚಾಗಲಿದೆಯೇ?


Team Udayavani, May 26, 2020, 1:51 PM IST

ಕೋವಿಡ್: ಅಪಾಯ ಇನ್ನೂ ಹೆಚ್ಚಾಗಲಿದೆಯೇ?

ಕೋವಿಡ್ ವೈರಸ್‌ ತಡೆಗೆ ಅತ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡಿದ ದೇಶಗಳಲ್ಲಿ ಭಾರತವೂ ಒಂದು. ಆದರೆ ಲಾಕ್‌ಡೌನ್‌ನ ನಾಲ್ಕನೇ ಚರಣದಿಂದ ನಿರ್ಬಂಧಗಳನ್ನು ಸಡಿಲಿಸುತ್ತಾ ಹೋಗುತ್ತಿದ್ದಂತೆಯೇ, ಹಠಾತ್ತನೆ ದೇಶದಲ್ಲಿ ಸೋಂಕಿತರ ಸಂಖ್ಯೆ ಏರುತ್ತಾ ಸಾಗಿದೆ. ಈಗ ಪ್ರಪಂಚದ ಟಾಪ್‌ ಟೆನ್‌ ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಭಾರತವೂ ಒಂದು. ಮೇ 2ನೇ ವಾರದಿಂದೀಚೆಗೆ ನಮ್ಮ ದೇಶವು ಅತಿಹೆಚ್ಚು ನಿತ್ಯ ಸೋಂಕು ಪ್ರಕರಣಗಳನ್ನು ದಾಖಲಿಸುತ್ತಿರುವ 5 ದೇಶಗಳಲ್ಲಿ ಒಂದಾಗಿದೆ! ರವಿವಾರದಿಂದ ಸೋಮವಾರದೊಳಗೆ ದೇಶದಲ್ಲಿ 7 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿ ಕಳವಳ ಹುಟ್ಟಿಸುತ್ತಿದೆ. ದೇಶದ ಕೊರೊನಾ ಹಾಟ್‌ಸ್ಪಾಟ್‌ ಆಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯೀಗ 50 ಸಾವಿರದ ಗಡಿ ದಾಟಿದೆ. ಸದ್ಯಕ್ಕಂತೂ ದೇಶಾದ್ಯಂತ ಕೊರೊನಾ ಹಾವಳಿ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲ…

ಅಧಿಕವಿದೆ ಭಾರತದ R-Naught
R-Naught or R-Zero ಎನ್ನುವುದು ರೋಗ ಪತ್ತೆಯ ಒಂದು ಮಾಪನ. ಇದನ್ನು ” R0′ ಎಂದು ಬರೆಯಲಾಗುತ್ತದೆ. ಒಂದು ಸಾಂಕ್ರಾಮಿಕದ ತೀವ್ರತೆ ಎಷ್ಟಿದೆ ಎನ್ನುವುದನ್ನು R0 ದಿಂದ ಅಳೆಯಲಾಗುತ್ತದೆ. ಉದಾಹರಣೆಗೆ R0 ತೀವ್ರತೆ 2 ಇದ್ದರೆ, ಒಬ್ಬ ಸೋಂಕಿತ ಸರಾಸರಿ ಇಬ್ಬರಿಗೆ ಸೋಂಕು ಹರಡಬಲ್ಲ ಎಂದರ್ಥ. R0 ಪ್ರಮಾಣ 1ಕ್ಕಿಂತಲೂ ಕಡಿಮೆಯಾದರೆ, ಸೋಂಕು ಹರಡುವುದಿಲ್ಲ ಎಂದರ್ಥ. ಭಾರತದಲ್ಲಿ R0 ಈಗ 1ಕ್ಕಿಂತಲೂ ಅಧಿಕವಿದೆ.

ಲಾಕ್‌ಡೌನ್‌ಗೂ ಮುನ್ನ ಎಷ್ಟಿತ್ತು?
ಮಾರ್ಚ್‌ 23ಕ್ಕೆ, ಅಂದರೆ ದೇಶವು ಲಾಕ್‌ಡೌನ್‌ಗೆ ಒಳಗಾಗುವ ಮುನ್ನ R0 3.36 ರಷ್ಟಿತ್ತು. ಅಂದರೆ ಒಬ್ಬ ಸೋಂಕಿತನಲ್ಲಿ ಸಾಂಕ್ರಾಮಿಕದ ತೀವ್ರತೆ, ಆತ ಮೂರಕ್ಕಿಂತ ಹೆಚ್ಚು ಜನರಿಗೆ ಸೋಂಕು ಹರಡುವಷ್ಟಿತ್ತು ಮೊದಲ ಲಾಕ್‌ಡೌನ್‌ ಅಂತ್ಯವಾಗುವ ವೇಳೆಗೆ, ಅಂದರೆ ಎ.14ರ ವೇಳೆಗೆ R0 1.71ಕ್ಕೆ ಇಳಿಯಿತು. ಎರಡನೇ ಲಾಕ್‌ಡೌನ್‌ ಚರಣ ಅಂತ್ಯವಾಗುವ ವೇಳೆಗೆ, ಅಂದರೆ ಮೇ 3ಕ್ಕೆ R0 1.46ಕ್ಕೆ ಇಳಿಯಿತು. ಮೇ 16ಕ್ಕೆ R0 1.27ಕ್ಕೆ ಇಳಿಯಿತು.

ಭಾರತದಲ್ಲಿ ಎಷ್ಟಿದೆ?
ಕೋವಿಡ್‌-19 ಸ್ಟಡಿ ಗ್ರೂಪ್‌, ಯೂನಿವರ್ಸಿಟಿ ಆಫ್ ಮಿಚಿಗನ್‌ ಭಾರತದಲ್ಲಿ ವೈರಸ್‌ನ R0 ಲೆಕ್ಕ ಹಾಕಿದ್ದು, ಭಾರತದಲ್ಲಿ R0 ದರ ಈಗ 1ಪ್ರತಿಶತಕ್ಕೂ ಅಧಿಕವಿದೆ ಎನ್ನುವುದು ಪತ್ತೆಯಾಗಿದೆ. ಇಲ್ಲಿ ನೆನಪಿಡಲೇಬೇಕಾದ ಅಂಶವೆಂದರೆ, ಒಂದು ರಾಜ್ಯದಲ್ಲಿ R0 ದರ ಅಧಿಕವಿದೆ ಎಂದಾಕ್ಷಣ ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಿರುತ್ತದೆ ಎಂದಲ್ಲ. ಬದಲಾಗಿ, ಸಾಂಕ್ರಾಮಿಕದ ಅಪಾಯ ಅಧಿಕವಿರುತ್ತದೆ ಎಂದಷ್ಟೇ ಅರ್ಥ. ಮೇ 17ರ ವೇಳೆಗೆ ಕರ್ನಾಟಕದ ಸರಾಸರಿ R0 1.60ರಷ್ಟಿದ್ದರೆ, ಮಹಾರಾಷ್ಟ್ರದ ಸರಾಸರಿ R0 1.34 ದಾಖಲಾಗಿದೆ.

ಇಪ್ಪತ್ತು ಲಕ್ಷವಿರುತ್ತಿತ್ತೇ?
ಕೇಂದ್ರ ಸರ್ಕಾರದ ಕಾರ್ಯಕ್ರಮ ಅನುಷ್ಠಾನ ಹಾಗೂ ಸಾಂಖೀಕ ಸಚಿವಾಲಯದ ಅಧ್ಯಯನವು ಲಾಕ್‌ಡೌನ್‌ ಅನುಷ್ಠಾನದಿಂದಾಗಿ 20 ಲಕ್ಷಕ್ಕೂ ಅಧಿಕ ಪ್ರಕರಣಗಳು ಮತ್ತು 54,000ಕ್ಕೂ ಅಧಿಕ ಮರಣಗಳನ್ನು ತಪ್ಪಿಸಿದಂತಾಗಿದೆ ಎಂದು ಹೇಳುತ್ತಿದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಒಂದು ವೇಳೆ ಭಾರತದಲ್ಲಿ ಲಾಕ್‌ಡೌನ್‌ಗೂ ಮುನ್ನ ಇದ್ದಷ್ಟೇ ಆರ್‌ ಝೀರೋ(R0) ಇದ್ದರೆ ದೇಶದಲ್ಲಿನ ಮರಣ ಹಾಗೂ ಸೋಂಕಿತರ ಪ್ರಮಾಣ ಅಪಾರವಾಗಿ ಇರುತ್ತಿತ್ತು. ಅದಾಗ್ಯೂ, ಈಗಲೂ R0 ಸರಾಸರಿ 1ಕ್ಕಿಂತಲೂ ಅಧಿಕವಿರುವುದು ಅಪಾಯಕಾರಿಯೇ ಸರಿ. ಎಲ್ಲಕ್ಕಿಂತ ಲಾಕ್‌ಡೌನ್‌ನ ನಾಲ್ಕನೇ ಚರಣದಲ್ಲಿ ನಿರ್ಬಂಧಗಳ ಸಡಿಲಿಕೆ ಯಿಂದಾಗಿ ಸೋಂಕಿತರ ಕಳೆದೊಂದು ವಾರದಿಂದ ನಿತ್ಯ ಸರಾಸರಿ 5 ಸಾವಿರಕ್ಕೂ ಅಧಿಕ ದಾಖಲಾಗುತ್ತಿದ್ದು, ಆರ್‌ಝೀರೋ ಸರಾಸರಿ ಮತ್ತೆ ಏರಿಕೆಯಾಗುವ ಅಪಾಯವೂ ಇದೆ

ಟಾಪ್ ನ್ಯೂಸ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.