ದ.ಕ.: ಕೋವಿಡ್ ಹೊಸ ಪ್ರಕರಣ ಇಲ್ಲ ; ಕಾಸರಗೋಡು: 3 ಮಂದಿಗೆ ಸೋಂಕು

Team Udayavani, May 27, 2020, 6:26 AM IST

ದ.ಕ.: ಕೋವಿಡ್ ಹೊಸ ಪ್ರಕರಣ ಇಲ್ಲ ; ಕಾಸರಗೋಡು: 3 ಮಂದಿಗೆ ಸೋಂಕು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಯಾವುದೇ ಕೋವಿಡ್ ಪ್ರಕರಣ ದೃಢಪಟ್ಟಿಲ್ಲ.

ಆದರೆ ಕತಾರ್‌ನಿಂದ ಆಗಮಿಸಿದ ಮೂಲತಃ ದ.ಕ. ಜಿಲ್ಲೆಯವರಾದ ಮೂವರಿಗೆ ಬೆಂಗಳೂರಿನಲ್ಲಿ ಕೋವಿಡ್ ದೃಢಪಟ್ಟು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ 417 ಮಂದಿಯ ಗಂಟಲು ದ್ರವ ಮಾದರಿ ಸ್ವೀಕೃತವಾಗಿದ್ದು, ಎಲ್ಲವೂ ನೆಗೆಟಿವ್‌ ಆಗಿವೆೆ. 505 ಮಂದಿಯ ಗಂಟಲ ದ್ರವ ಮಾದರಿಯನ್ನು ಹೊಸದಾಗಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 698 ವರದಿಗಳು ಬರಲು ಬಾಕಿ ಇವೆ.

7 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ಹಾಗೂ 8 ಮಂದಿ ಜ್ವರದಂತಹ ಸಾಮಾನ್ಯ ಕಾಯಿಲೆಗಳಿಗಾಗಿ ಹೊಸದಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. 23 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. 47 ಮಂದಿ ಎನ್‌ಐಟಿಕೆಯಲ್ಲಿ, 27 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ.

ಕತಾರ್‌ನಿಂದ ಬಂದವರಿಗೆ ಕೋವಿಡ್
ಕತಾರ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಮೂವರು ವ್ಯಕ್ತಿಗಳಿಗೆ ಬೆಂಗಳೂರಿನಲ್ಲಿ ತಪಾಸಣೆ ವೇಳೆ ಕೋವಿಡ್ ಪತ್ತೆಯಾಗಿದ್ದು, ಅವರನ್ನು ಬೆಂಗಳೂರಿನಲ್ಲೇ ಚಿಕಿತ್ಸೆಗೆ ದಾಖಲಿಸಲಾಗಿದೆ. 30 ವರ್ಷದ ಇಬ್ಬರು ಮತ್ತು 37 ವರ್ಷದ ಓರ್ವ ಕೋವಿಡ್ ದೃಢಪಟ್ಟವರು. ಮೂವರೂ ಬೆಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿ ಇದ್ದರು.

ಕಾಸರಗೋಡು: 3 ಮಂದಿಗೆ ಸೋಂಕು
ಜಿಲ್ಲೆಯಲ್ಲಿ ಮೂವರ ಸಹಿತ ಕೇರಳದಲ್ಲಿ ಮಂಗಳವಾರ ಒಂದೇ ದಿನ 67 ಕೋವಿಡ್ ಪ್ರಕರಣಗಳು ದೃಢಗೊಂಡಿದ್ದು 10 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಇಬ್ಬರು ಗುಣಮುಖ
ಜಿಲ್ಲೆಯಲ್ಲಿ ಮಂಗಳವಾರ ಮೂವರಿಗೆ ಸೋಂಕು ಖಚಿತಗೊಂಡಿದೆ. ಇಬ್ಬರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿದ ಮಧೂರು ನಿವಾಸಿಗಳಾದ 28 ವರ್ಷದ ಪುರುಷ, 25 ವರ್ಷದ ಮಹಿಳೆ, ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ಮಡಿಕೈ ನಿವಾಸಿಗೂ ರೋಗ ಖಚಿತವಾಗಿದೆ.

ಉಲ್ಲಂಘನೆ: ಬಂಧನ
ಲಾಕ್‌ಡೌನ್‌ ಉಲ್ಲಂಘಿಸಿ ಕಾರಿನಲ್ಲಿ ಸುತ್ತಾಡುತ್ತಿದ್ದ ಪತ್ವಾಡಿ ನಿವಾಸಿ ಮೊಹಮ್ಮದ್‌ ಶಮೀರ್‌ ನನ್ನು(40) ಮಂಜೇಶ್ವರ ಪೊಲೀಸರು ಬಂಧಿಸಿ ಕ್ವಾರಂಟೈನ್‌ಗೆ ಕಳುಹಿಸಿದ್ದಾರೆ. ಆಂಧ್ರದಿಂದ ಮರಳಿದ ಈತ ಕ್ವಾರಂಟೈನ್‌ನಲ್ಲಿರದೆ ಸುತ್ತಾಡುತ್ತಿದ್ದ ಕಾರಣ ಬಂಧಿಸಲಾಗಿದೆ.

ಟಾಪ್ ನ್ಯೂಸ್

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

11

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್‌ ವಿವಾಹ?

Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್‌ ವಿವಾಹ?

5-belthangady

Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರಿಗೆ ಬೆಂಕಿ…

Surathkal: ಅಂಗನವಾಡಿ ಎದುರು ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

Arrest

Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

missing

Mangaluru: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನಾಪತ್ತೆ

15

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ

6-uv-fusion

Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

ಹರಗಾಪುರ ಕೇಸ್‌ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!

ಹರಗಾಪುರ ಕೇಸ್‌ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.