ರೈಸ್‌ಮಿಲ್‌ಗಳ ಮೇಲೆ ಗಧಾಪ್ರಹಾರ
ಸರಕಾರದ ಭತ್ತ ಕ್ರಷಿಂಗ್ ಮಾಡಲು ಬ್ಯಾಂಕ್ ಗ್ಯಾರಂಟಿಗೆ ಒತ್ತಡ
Team Udayavani, May 27, 2020, 5:06 PM IST
ಸಾಂದರ್ಭಿಕ ಚಿತ್ರ
ಗಂಗಾವತಿ: ರೈಸ್‌ಮಿಲ್‌ಗಳ ಮೇಲೆ ರಾಜ್ಯ ಆಹಾರ ಮತ್ತು ನಾಗರಿಕ ಇಲಾಖೆ ಗಧಾ ಪ್ರಹಾರಕ್ಕೆ ಮುಂದಾಗಿದ್ದು, ರೈಸ್‌ಮಿಲ್‌ಗಳ ಮಾಲೀಕರಿಗೆ ಕಿರಿಕಿರಿಯಾಗಿದೆ.
ಭತ್ತದ ದರ ಸರಕಾರದ ಬೆಂಬಲ ಬೆಲೆಗಿಂತ ಕಡಿಮೆಯಾಗಿದೆ. ಸರಕಾರ ಮಧ್ಯೆ ಪ್ರವೇಶಿಸಿ ಬೆಂಬಲ ಬೆಲೆಯಡಿ ಭತ್ತ ಖರೀದಿಸಿದೆ. ಖರೀದಿಸಿದ ಭತ್ತವನ್ನು ಗಂಗಾವತಿ, ಕಂಪ್ಲಿ, ಸಿರಗುಪ್ಪಾ, ದಾವಣಗೆರೆ ಮತ್ತು ತುಮಕೂರು ಸೇರಿ ರಾಜ್ಯದ ರೈಸ್‌ಮಿಲ್‌ಗಳಲ್ಲಿ ಕ್ರಷಿಂಗ್ ಮಾಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರ್ಧರಿಸಿದೆ. ಇಲಾಖೆಯ ನಿಯಮದಂತೆ ಭತ್ತವನ್ನು ಕ್ರಷಿಂಗ್ ಮಾಡಲು ಸರಕಾರ ಮಿಲ್ ಮಾಲೀಕರಿಗೆ ಹಣ ಪಾವತಿಸುತ್ತದೆ.
ಕೋವಿಡ್ ಕಷ್ಟ ಕಾಲದಲ್ಲಿ ರೈಸ್ ಮಿಲ್ ಮಾಲೀಕರು ಕೂಲಿಕಾರರ ಮನವೊಲಿಸಿ ಕೆಲಸ ಆರಂಭಿಸಿದ್ದಾರೆ. ಈ ಮಧ್ಯೆ ಬೆಂಬಲ ಬೆಲೆಯಲ್ಲಿ ಖರೀದಿಸಿದ ಭತ್ತವನ್ನು ರೈಸ್ ಮಿಲ್‌ಗಳಲ್ಲಿ ಸಂಗ್ರಹಿಸಿ ಕ್ರಷಿಂಗ್ ಮಾಡಲು ಭತ್ತದ ಮೌಲ್ಯವನ್ನು ಬ್ಯಾಂಕ್ ಗ್ಯಾರಂಟಿ ನೀಡಬೇಕು. ಇಲ್ಲದಿದ್ದರೆ ರೈತರಿಂದ ಕಡಿಮೆ ದರಕ್ಕೆ ಭತ್ತ ಖರೀದಿಸಿ ಅಕ್ರಮವಾಗಿ ರೈಸ್ ಮಿಲ್‌ಗಳಲ್ಲಿ ಭತ್ತ ಸಂಗ್ರಹ ಮಾಡಿದ ಆರೋಪದಡಿ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಇದರಿಂದ ರೈಸ್ ಮಿಲ್ ಮಾಲೀಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಈಗಾಗಲೇ ರೈಸ್‌ಮಿಲ್‌ಗಳ ಮೇಲೆ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದು ಕಂತು ಪಾವತಿಸಲಾಗದೆ ತೊಂದರೆಯಲ್ಲಿರುವ ಮಾಲೀಕರನ್ನು ಈ ಅಲಿಖೀತ ನಿಯಮ ಸಂಕಷ್ಟಕ್ಕೀಡು ಮಾಡಿದೆ. ಆಹಾರ ಇಲಾಖೆ ಭತ್ತವನ್ನು ಮಿಲ್‌ಗಳಲ್ಲಿ ಕ್ರಷಿಂಗ್ ಮಾಡಲು ರೈಸ್‌ಮಿಲ್ ಮಾಲೀಕರು ಸಿದ್ಧರಿದ್ದು, ಬ್ಯಾಂಕ್ ಗ್ಯಾರಂಟಿ ಬದಲು ವೈಯಕ್ತಿಕ ಬಾಂಡ್ ಪಡೆಯುವಂತೆ ಮಾಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸದೆ ಬ್ಯಾಂಕ್ ಗ್ಯಾರಂಟಿ ಕೊಡದ ಹೊರತು ಅನ್ಯ ಮಾರ್ಗವಿಲ್ಲ ಎಂದು ಹಠ ಮಾಡುತ್ತಿದ್ದಾರೆನ್ನಲಾಗಿದೆ.
ರೈಸ್‌ಮಿಲ್‌ಗಳಿಂದ ಸಾವಿರಾರು ಹಮಾಲಿ ಕೂಲಿಕಾರರಿಗೆ ಮತ್ತು ರೈತರಿಗೆ ಅನುಕೂಲವಾಗುತ್ತಿದೆ. ಆಹಾರ ಇಲಾಖೆ ರೈತರಿಂದ ಖರೀದಿಸಿದ ಭತ್ತ ಕ್ರಷಿಂಗ್ ಮಾಡಲು ರೈಸ್‌ಮಿಲ್ ಮಾಲೀಕರಿಂದ ವೈಯಕ್ತಿಕ ಬಾಂಡ್ ಪಡೆಯಬೇಕು. ಇದನ್ನು ಹೊರತುಪಡಿಸಿ ಬೆದರಿಕೆಯಂತಹ ಕ್ರಮ ಜರುಗಿಸಿದರೆ ಮಾಲೀಕರ ಜತೆ ಸೇರಿ ಹಮಾಲಿ-ಕಾರ್ಮಿಕರು ಹೋರಾಟ ಮಾಡಬೇಕಾಗುತ್ತದೆ.-ಜೆ. ಭಾರದ್ವಾಜ್, ಮುಖಂಡರು ರಾಜ್ಯ ಪ್ರಗತಿಪರ ರೈಸ್‌ಮಿಲ್ ಕಾರ್ಮಿಕರ ಸಂಘ
ಆಹಾರ ಇಲಾಖೆ ಖರೀದಿಸಿದ ಭತ್ತವನ್ನು ಕ್ರಷಿಂಗ್ ಮಾಡಲು ಬ್ಯಾಂಕ್ ಗ್ಯಾರಂಟಿ ಕೊಡುವುದು ಅಸಾಧ್ಯ. ಈಗಾಗಲೇ ರೈಸ್‌ಮಿಲ್ ಮಾಲೀಕರ ಕಷ್ಟಗಳನ್ನು ಆಹಾರ ಇಲಾಖೆ ಸಚಿವರ ಗಮನಕ್ಕೆ ತರಲಾಗಿದೆ. ಬ್ಯಾಂಕ್ ಗ್ಯಾರಂಟಿ ಬದಲು ವೈಯಕ್ತಿಕ ಬಾಂಡ್ ಮೇಲೆ ಕ್ರಷಿಂಗ್ ಮಾಡಲು ಅವಕಾಶ ಕಲ್ಪಿಸಬೇಕು. ಅಲಿಖೀತವಾಗಿ ರೈಸ್‌ಮಿಲ್ ಮಾಲೀಕರ ಮೇಲೆ ಕೇಸ್ ದಾಖಲಿಸುವಂತಹ ಸಾಹಸವನ್ನು ಅಧಿಕಾರಿಗಳು ಮಾಡಬಾರದು. -ಪರಣ್ಣ ಮುನವಳ್ಳಿ, ಶಾಸಕರು-ರಾಜ್ಯಾಧ್ಯಕ್ಷರು ರೈಸ್‌ಮಿಲ್ ಮಾಲೀಕರ ಸಂಘ
– ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.