ಖಾಸಗಿ “ಬಸ್‌’ಗಳಲ್ಲಿ ಇನ್ನು “ಕ್ಯಾಶ್‌ಲೆಸ್‌’ ಪ್ರಯಾಣ ಸೌಕರ್ಯ

ಮಂಗಳೂರು ಸಿಟಿ ಬಸ್‌ ಪ್ರಯಾಣಿಕರಿಗೆ ವಿನೂತನ ಸ್ಮಾರ್ಟ್‌ ಕಾರ್ಡ್‌; ಕಾರ್ಡ್‌ಗೆ ಹಣ ವರ್ಗಾಯಿಸಿ ಚಿಲ್ಲರೆ ಕಿರಿಕಿರಿಯಿಲ್ಲದೆ ಪ್ರಯಾಣ

Team Udayavani, May 28, 2020, 6:02 AM IST

ಖಾಸಗಿ “ಬಸ್‌’ಗಳಲ್ಲಿ ಇನ್ನು “ಕ್ಯಾಶ್‌ಲೆಸ್‌’ ಪ್ರಯಾಣ ಸೌಕರ್ಯ

ಮಂಗಳೂರು: ಮಂಗಳೂರು ನಗರದಲ್ಲಿ ಓಡಾಡುವ ಸಿಟಿ ಬಸ್‌ಗಳಲ್ಲಿ ಪ್ರಯಾಣಿಸಲು ಇನ್ನುಮುಂದೆ, ನಗದು ಹಣ ನೀಡಬೇಕಿಂದಿಲ್ಲ. ಬದಲಾಗಿ, ವಿನೂತನ ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದು, ಆ ಕಾರ್ಡ್‌ಗೆ ಹಣ ವರ್ಗಾಯಿಸಿಕೊಂಡು ಚಿಲ್ಲರೆ ಕಿರಿಕಿರಿಯಿಲ್ಲದೆ ಎಲ್ಲೆಡೆ ಸಂಚರಿಸಬಹುದಾಗಿದೆ.

ನಗರದಲ್ಲಿ ಕಾರ್ಯಾಚರಣೆ ನಡೆಸುವ ಎಳìಳ ಸಿಟಿ ಬಸ್‌ ಗಳಲ್ಲಿ ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆ ಜಾರಿಗೆ ತರಲು ಚಲೋ ಸಂಸ್ಥೆ ಸಹಯೋಗದೊಂದಿಗೆ ಸಿಟಿ ಬಸ್‌ ಮಾಲಕರ ಸಂಘ ನಿರ್ಧರಿಸಿದ್ದು, ಬಸ್‌ ಸಂಚಾರ ಆರಂಭಿಸಿದ ಬಳಿಕ ಕೆಲವೇ ದಿನಗಳಲ್ಲಿ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಮಂಗಳೂರು ನಗರದಲ್ಲಿ ಸುಮಾರು 350 ಸಿಟಿ ಬಸ್‌ಗಳು ವಿವಿಧ ರೂಟ್‌ಗಳಲ್ಲಿ ಸಂಚರಿಸುತ್ತಿದ್ದು, ಈ ಎಲ್ಲ ಬಸ್‌ಗಳಲ್ಲಿ ಈ ಸ್ಮಾರ್ಟ್‌ ಕಾರ್ಡ್‌ ಸದ್ಬಳಕೆ ಮಾಡಿಕೊಳ್ಳಬಹುದು.

ಈ ಹೊಸ ಸ್ಮಾರ್ಟ್‌ಕಾರ್ಡ್‌ ಪಡೆಯಲು ಪ್ರಯಾಣಿಕರು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಿಲ್ಲ. ನಗರದಲ್ಲಿ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ಔಟ್‌ಲೆಟ್‌ ಮಾಡಲಾಗಿದ್ದು, ಅಲ್ಲಿ, ಪ್ರಯಾಣಿಕರು ಆಧಾರ್‌ಕಾರ್ಡ್‌ ಮಾಹಿತಿ ನೀಡಿ ಉಚಿತವಾಗಿ ಈ ಕಾರ್ಡ್‌ ಪಡೆಯಬಹುದು. ಜೂನ್‌ 1ರಿಂದ ಬಸ್‌ ಸಂಚಾರ ಆರಂಭವಾದ ಬಳಿಕ ನಗರದ ವಿವಿಧ ಕಡೆಗಳಲ್ಲಿ ಸ್ಮಾರ್ಟ್‌ ಕಾರ್ಡ್‌ ಸೆಂಟರ್‌ ಆರಂಭಿಸಲು ಸಿಟಿ ಬಸ್‌ ಮಾಲಕರ ಸಂಘ ತೀರ್ಮಾನಿಸಿದೆ. ಈಗಾಗಲೇ 10 ಸಾವಿರಕ್ಕೂ ಮಿಕ್ಕಿ ಕಾರ್ಡ್‌ಗಳನ್ನು ಈಗಾಗಲೇ ಮುದ್ರಣ ಮಾಡಲಾಗಿದೆ.

ಯಾವ ರೀತಿ ನಿರ್ವಹಣೆ?
ಪ್ರಯಾಣಿಕರು ಉಚಿತವಾಗಿ ಪಡೆದ ಕಾರ್ಡಿಗೆ ಟಾಪ್‌ಅಪ್‌ ರೀಚಾರ್ಜ್‌ ಮಾಡಿಸಿಕೊಳ್ಳಬೇಕಾಗುತ್ತದೆ. ಅದಕ್ಕೆಂದು ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಸೆಂಟರ್‌ ತೆರಯಲು ತೀರ್ಮಾನಿಸಲಾಗಿದೆ. ಅಲ್ಲದೆ, ಮೊಬೈಲ್‌ ರೀಚಾರ್ಜ್‌ ಅಂಗಡಿಗಳಲ್ಲೂ ಈ ವ್ಯವಸ್ಥೆ ಒದಗಿಸಲು ಚಿಂತನೆ ನಡೆಸಲಾಗಿದೆ. ಈ ಕಾರ್ಡ್‌ಗೆ ಕಡಿಮೆ ಎಂದು ಎಷ್ಟು ರೀಚಾರ್ಜ್‌ ಮಾಡಬೇಕು ಎಂಬುವುದರ ಬಗ್ಗೆ ಸದ್ಯದಲ್ಲಿಯೇ ನಿರ್ಧಾರವಾಗಲಿದೆ. ಖಾತೆಯಲ್ಲಿದ್ದ ಹಣಕ್ಕೆ ವ್ಯಾಲಿಡಿಟಿ ಇರುವುದಿಲ್ಲ.

ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸುವಾಗ ನಿರ್ವಾಹಕನಿಗೆ ಹಣದ ಬದಲು ಈ ಕಾರ್ಡ್‌ ನೀಡಿದರಾಯಿತು. ಪ್ರಯಾಣಿಕ ಹತ್ತಿದ ಮತ್ತು ಇಳಿಯುವ ಸ್ಥಳವನ್ನು ನಿರ್ವಾಹಕ ಇಟಿಎಂನಲ್ಲಿ ನಮೂದು ಮಾಡಿ ಈ ಯಂತ್ರಕ್ಕೆ ಈ ಕಾರ್ಡ್‌ ಮುಟ್ಟಿಸಿದರೆ ಕಾರ್ಡ್‌ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ.
ಇದರಿಂದಾಗಿ ಪ್ರಯಾಣಿಕರಿಗೆ ನಗದು ಅಥವಾ ಚಿಲ್ಲರೆ ಸಮಸ್ಯೆ ಉದ್ಭವಿಸುವುದಿಲ್ಲ. ಅಲ್ಲದೆ, ಕೊರೊನಾ ಸಮಯದಲ್ಲಿ ಡಿಜಿಟಲ್‌ ವ್ಯವಸ್ಥೆಗೆ ಒತ್ತು ನೀಡಿದಂತಾಗುತ್ತದೆ.

ಏನಿದು ವ್ಯವಸ್ಥೆ?
ಇದೊಂದು ಡಿಜಿಟಲ್‌ ಪಾವತಿ ವ್ಯವಸ್ಥೆ. ಪ್ರಯಾಣಿಕರಿಗೆ ಉಚಿತವಾಗಿ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತದೆ. ಸದ್ಯ ಸಿಟಿ ಬಸ್‌ನ ಎಲ್ಲ ನಿರ್ವಾಹಕರಲ್ಲಿ ಇಟಿಎಂ ಟಿಕೆಟ್‌ ಮೆಶಿನ್‌ ಇದ್ದು, ಸ್ಮಾರ್ಟ್‌ ಕಾರ್ಡ್‌ ಜಾರಿಯಾದ ಬಳಿಕ ಅದನ್ನು ಇಟಿಎಂನಲ್ಲಿ ಮುಟ್ಟಿಸಿದರಾಯಿತು. ಆಗ ಪ್ರಯಾಣ ದರವು ಪ್ರಯಾಣಿಕನ ಕಾರ್ಡ್‌ ನಿಂದ ಕಡಿತವಾಗುತ್ತದೆ.

ಈಗಾಗಲೇ ಆ್ಯಪ್‌ ವ್ಯವಸ್ಥೆ ಜಾರಿ
ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ “ಚಲೋ’ ಎಂಬ ಹೆಸರಿನ ಆ್ಯಪ್‌ ಮೂಲಕ ಬಸ್‌ನ ಲೈವ್‌ ಟ್ರಾÂಕಿಂಗ್‌ ವ್ಯವಸ್ಥೆ ಇದ್ದು, ಮೊಬೈಲ್‌ ಜಿಪಿಎಸ್‌ ಆಧಾರದ ಮೇಲೆ ಬಸ್‌ಗಳ ನಿಖರ ಮಾಹಿತಿ ಮೊಬೈಲ್‌ನಲ್ಲಿ ತಿಳಿಯಬಹುದಾಗಿದೆ. ಮ್ಯಾಪ್‌ನಲ್ಲಿ ಟ್ಯಾಪ್‌ ಮಾಡಿ ಸದ್ಯ ಬಸ್‌ ಎಲ್ಲಿದೆ ಎಂಬುವುದನ್ನು ತಿಳಿಯಲು ಸಾಧ್ಯ. ಅಷ್ಟೇಅಲ್ಲ, ಒಂದು ಕಡೆಯಿಂದ ಮತ್ತೂಂದೆಡೆ ಚಲಿಸಲು ಎಷ್ಟು ಸಮಯ ಬೇಕು? ಮುಂದಿನ ನಿಲ್ದಾಣ ಸೇರಿದಂತೆ ಹಲವು ಮಾಹಿತಿ ಆ್ಯಪ್‌ನಲ್ಲಿ ಲಭ್ಯವಿದೆ.

 ಡಿಜಿಟಲ್‌ ವ್ಯವಸ್ಥೆಗೆ ಒಲವು
ಡಿಜಿಟಿಲ್‌ ವ್ಯವಸ್ಥೆಗೆ ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಸ್ಮಾರ್ಟ್‌ಕಾರ್ಡ್‌ ವ್ಯವಸ್ಥೆಯನ್ನು ಜಾರಿಗೆ ತರಲಿದ್ದೇವೆ. ಬಸ್‌ ಸಂಚಾರ ಆರಂಭಗೊಂಡ ವಾರದಲ್ಲಿಯೇ ಈ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಪರಿಚಯಿಸಲಿದ್ದೇವೆ. ಪ್ರಯಾಣಿಕರಿಗೆ ಕಾರ್ಡ್‌ ಪಡೆಯಲು ನಗರದ ಕೆಲವು ಕಡೆಗಳಲ್ಲಿ ಸೆಂಟರ್‌ ಆರಂಭಿಸುತ್ತೇವೆ.
-ದಿಲ್‌ರಾಜ್‌ ಆಳ್ವ, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ .

 ಚಲೋ ಆ್ಯಪ್‌ ಸಹಯೋಗ
ಸ್ಮಾರ್ಟ್‌ಕಾರ್ಡ್‌ ಪಡೆಯುವ ನಿಟ್ಟಿನಲ್ಲಿ ನಗರದ ಕೆಲವು ಕಡೆಗಳಲ್ಲಿ ಔಟ್‌ಲೆಟ್‌ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಇದರಿಂದ ಚಿಲ್ಲರೆ ಸಮಸ್ಯೆ ತಪ್ಪಲಿದೆ. ಆರ್‌ಬಿಐ ನಿರ್ದೇಶನದಂತೆ ಚಲೋ ಆ್ಯಪ್‌ ಸಹಯೋಗದೊಂದಿಗೆ ಈ ಕಾರ್ಡ್‌ ಮುದ್ರಿಸಲಾಗಿದೆ.
 -ಅಮೃತ್‌ ಮಯ್ಯ, ಚಲೋ ಆಪರೇಷನ್‌ ಮ್ಯಾನೇಜರ್‌.

ಟಾಪ್ ನ್ಯೂಸ್

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.