ಅನುದಾನ ಸದ್ಬಳಕೆ: ಕ್ರಿಯಾಯೋಜನೆಗೆ ಗ್ರಾ.ಪಂ.ಗಳಿಗೆ ಸೂಚನೆ

ಪುತ್ತೂರು ತಾ.ಪಂ. ವಿಶೇಷ ಸಾಮಾನ್ಯ ಸಭೆ

Team Udayavani, May 27, 2020, 9:17 PM IST

ಅನುದಾನ ಸದ್ಬಳಕೆ: ಕ್ರಿಯಾಯೋಜನೆಗೆ ಗ್ರಾ.ಪಂ.ಗಳಿಗೆ ಸೂಚನೆ

ಪುತ್ತೂರು ತಾಪಂ ಸಭಾಂಗಣದಲ್ಲಿ ಸಭೆ ನಡೆಯಿತು.

ಪುತ್ತೂರು: ಕೇಂದ್ರ ಸರ್ಕಾರ ನೀಡುವ 15ನೇ ಹಣಕಾಸು ಯೋಜನೆಯಲ್ಲಿ ಜಿಪಂ ತಾಪಂ ಹಾಗೂ ಗ್ರಾಪಂಗಳಿಗೆ ಅನುದಾನ ಮಂಜೂರುಗೊಂಡಿದ್ದು, ಪುತ್ತೂರು ತಾಲೂಕಿಗೆ 1,13,60,487 ರೂ. ಹಾಗೂ ಕಡಬ ತಾಲೂಕಿಗೆ 1,05,38,373 ರೂ. ಅನುದಾನ ಮಂಜೂರು ಗೊಂಡಿದೆ. ಈ 15ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರುಗೊಂಡ ಅನುದಾನದಲ್ಲಿ ಶೇ 50 ಹಣವನ್ನು ಕುಡಿಯುವ ನೀರು ಹಾಗೂ ಸ್ವತ್ಛತೆಗೆ ಕಡ್ಡಾಯವಾಗಿ ಬಳಕೆ ಮಾಡಬೇಕು. ಶೇ ಪರಿಶಿಷ್ಟಜಾತಿ ಪಂಗಡ ನಿಧಿಗೆ ಮೀಸಲಾಗಿಡಬೇಕು. ಉಳಿದ ಶೇ.25 ರಷ್ಟು ಹಣ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಆ ಪ್ರಕಾರವಾಗಿ ತಾಪಂ ಹಾಗೂ ಗ್ರಾಪಂಗಳು ಕ್ರೀಯಾಯೋಜನೆ ತಯಾರಿಸಬೇಕು ಎಂದು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಶಿಷ್ಟ ಜಾತಿ-ಪಂಗಡದ ನಿಧಿಯಲ್ಲಿ ವೈಯುಕ್ತಿಕ ಸೌಲಭ್ಯ ನೀಡುವ ಬದಲು ಪೈಪ್‌ ಲೈನ್‌ ಗಳಂತಹ ಸಾಮೂಹಿಕ ಸೌಲಭ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಗುಣಮಟ್ಟದ ಕಾಮಗಾರಿಗೆ ಗಮನನೀಡಬೇಕು ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ನವೀನ್‌ ಭಂಡಾರಿ ತಿಳಿಸಿದರು.

ಬೆಟ್ಟಂಪಾಡಿಯಲ್ಲಿ “ಇಲಿಜ್ವರ’…!
ಈಗಾಗಲೇ ಡೆಂಗ್ಯು ಹಾಗೂ ಮಲೇರಿಯಾ ಜ್ವರದಿಂದ ಕಂಗಾಲಾಗಿರುವ ಬೆಟ್ಟಂಪಾಡಿ ಭಾಗದಲ್ಲಿ ಇಲಿಜ್ವರ ಭಾದೆ ಕಂಡು ಬಂದಿದೆ ಎಂಬ ಮಾಹಿತಿ ಬಗ್ಗೆ ಅಧ್ಯಕ್ಷರು ತಾಲೂಕು ಆರೋಗ್ಯಾಧಿಕಾರಿ ಅವರನ್ನು ಪ್ರಶ್ನಿಸಿದರು. ಬೆಟ್ಟಂಪಾಡಿಯಲ್ಲಿ 3 ಡೆಂಗ್ಯೂ ಪ್ರಕರಣ ಖಚಿತಗೊಂಡಿದೆ. ಶಂಕಿತ ಡೆಂಗ್ಯೂ ಪೀಡಿತರ ಸಂಖ್ಯೆ 80ಕ್ಕೂ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ಕೆಲಸ ನಡೆಸಲಾಗಿದೆ. ಆದರೆ ಇಲಿಜ್ವರ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಡಾ|ಅಶೋಕ್‌ ಕುಮಾರ್‌ ರೈ ತಿಳಿಸಿದರು.

ವಿದ್ಯುತ್‌ ಬಿಲ್‌ ಸಮರ್ಪಕ
ಹೆಚ್ಚು ಬಿಲ್‌ ಹೆಚ್ಚು ಬಂದಿದೆ ಎಂದು ಜನತೆ ಆರೋಪಿಸುತ್ತಿದ್ದಾರೆ. ಆದರೆ ಬಳಕೆ ಹೆಚ್ಚಿದ್ದರಿಂದ ಬಿಲ್‌ಗ‌ಳು ಸಮರ್ಪಕವಾಗಿವೆ ಎಂದು ಮೆಸ್ಕಾಂ ಇಲಾಖೆಯ ಎಂಜಿನಿಯರ್‌ ರಾಮಚಂದ್ರ ತಿಳಿಸಿದರು. ರಾಜ್ಯ ಸರ್ಕಾರ ಆಟೋ ರಿಕ್ಷಾ ಚಾಲಕರ ಬದುಕಿಗೆಗಾಗಿ ನೀಡಿದ ಹಣ ಪಡೆಯಲಾಗದೆ ಸಮಸ್ಯೆ ಉಂಟಾಗಿದೆ. ಸಾಫ್ಟ್ವೇರ್‌ನಲ್ಲಿ ಅಪ್‌ಡೇಟ್‌ ಆಗದ ಕಾರಣ ಈ ಸಮಸ್ಯೆ ಕಾಡುತ್ತಿದೆ. ಮಾಲಕರ ಕೈ ಕೆಳಗೆ ದುಡಿವ ಚಾಲಕರಿಗೆ ಈ ಹಣ ಸಿಗುತ್ತಿಲ್ಲ. ಇದಕ್ಕೆ ಪರಿಹಾರ ಬೇಕಾಗಿದೆ ಎಂದು ಸದಸ್ಯ ರಾಮ ಪಾಂಬಾರು ಹೇಳಿದರು. ಕೇಂದ್ರ ಸರಕಾರ‌ ಈ ಬಗ್ಗೆ ಹೊಸ ನಿಯಮ ತರಲಿದೆ. ಅನಂತರ ಸರಿಯಾಗಲಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ ಚರಂಡಿ ದುರಸ್ಥಿ ನಡೆಸಲು ಅವಕಾಶ ಇದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅಧ್ಯಕ್ಷರು ಗ್ರಾಪಂ ಗಳಿಗೆ ಸೂಚಿಸಿದರು. ಬಡಗನ್ನೂರಿಗೆ ಅಭಿವೃದ್ಧಿ ಅಧಿಕಾರಿ ಇಲ್ಲ. ತಕ್ಷಣ ಅಭಿವೃದ್ಧಿ ಅಧಿಕಾರಿ ನೇಮಕವಾಗಬೇಕು ಎಂದು ಸದಸ್ಯೆ ಫೌಝಿಯಾ ಆಗ್ರಹಿಸಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಇದ್ದರು.

ಬಿಸಿಎಂ ಹಾಸ್ಟೆಲ್‌ನಲ್ಲಿ 320 ಕ್ವಿಂಟಾಲ್‌ ಅಕ್ಕಿ
ತಾಲೂಕಿನಲ್ಲಿರುವ 9 ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ 320 ಕ್ವಿಂಟಾಲ್‌ ಅಕ್ಕಿ ಇದೆ. ಆದರೆ ಇದನ್ನು ವಾಪಾಸು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಕ್ಕಿ ಹಾಳಾಗದಂತೆ ಸಂರಕ್ಷಣೆ ಮಾಡ ಲಾಗುತ್ತಿದೆ ಎಂದು ಅಧಿಕಾರಿ ಜೋಸೆಫ್ ತಿಳಿಸಿದರು. ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ರೈತ ಸದಸ್ಯರಿಗೆ ಸಾಲ ಮನ್ನಾದ ಯೋಜನೆಯ ಹಣ ಇನ್ನೂ ಬಂದಿಲ್ಲ. ಇದರಿಂದ ಹೊಸ ಸಾಲ ಪಡೆಯಲು ಕಷ್ಟವಾಗುತ್ತಿದೆ ಎಂದು ಸದಸ್ಯ ಪರಮೇಶ್ವರ ಹೇಳಿದರು. ಈ ಬಗ್ಗೆ ಸಹಕಾರಿ ಇಲಾಖೆ ಅಧಿಕಾರಿ ಮಾತನಾಡಿ, ಈಗಾಗಲೇ 13870 ಮಂದಿಯ ಖಾತೆಗೆ ಹಣ ಬಂದಿದೆ. 1493 ಮಂದಿ ರೈತ ಸಮಸ್ಯೆ ಪರಿಹಾರವಾಗಿದೆ. ಅವರಿಗೆ ಹಣ ಬರಲಿದೆ. ಇನ್ನುಳಿದ 2958 ಮಂದಿಗೆ ಪಡಿತರ ಕಾರ್ಡು, ಆಧಾರ್‌ ಕಾರ್ಡು ಸಹಿತ ದಾಖಲೆ ಪತ್ರಗಳು ಸಮರ್ಪಕವಾಗಿಲ್ಲದೆ ಹಣ ಬರಲು ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲಾ ಗುತ್ತಿದೆ. ಸಾಲಮನ್ನಾದ ಹಣ ಬಂದೇ ಬರುತ್ತದೆ. ಈ ಬಗ್ಗೆ ಸಂಶಯ ಬೇಡ ಎಂದು ಹೇಳಿದರು.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bantwala-1

Bantwala: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Untitled-1

Uppinangady ವಿವಾಹಿತೆ ನಾಪತ್ತೆ: ದೂರು ದಾಖಲು

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.