ಜಿಲ್ಲಾ ಗಡಿ: ಹಗಲು ವೇಳೆ ಪೊಲೀಸರ ಹಿಂದೆಗೆತ
Team Udayavani, May 27, 2020, 10:21 PM IST
ಪಡುಬಿದ್ರಿ: ಉಡುಪಿ ಜಿಲ್ಲಾ ಗಡಿಯ ಹೆಜಮಾಡಿ ಚೆಕ್‌ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬಂದಿಯನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಇಲಾಖೆಯು ಹಿಂಪಡೆದಿದೆ. ಆದರೆ ರಾತ್ರಿಯ ವೇಳೆ ಇವರ ಪಾಳಿ ಮುಂದುವರಿಯಲಿದೆ. ಈ ಕುರಿತಾಗಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರಲ್ಲಿ ಮಾಹಿತಿ ಕೇಳಿದಾಗ, ಈಗಾಗಲೇ ಲಾಕ್‌ಡೌನ್ ವಿಚಾರದಲ್ಲಿ ಸಾಕಷ್ಟು ವಿನಾಯತಿಗಳನ್ನು ನೀಡಲಾಗಿದೆ. ಹಾಗಾಗಿ ಉಡುಪಿ, ದ.ಕ., ಜಿಲ್ಲೆಗಳನ್ನು ಒಂದು ಘಟಕವಾಗಿಸಿದ್ದರಿಂದ ಅಂತರ್ ಜಿಲ್ಲಾ ವಾಹನ ಸಂಚಾರಕ್ಕೆ ನಿರ್ಬಂ ಧಗಳಿಲ್ಲ. ಈ ನಿಟ್ಟಿನಲ್ಲಿ ಹಗಲು ವೇಳೆಯಲ್ಲಿ ಪೊಲೀಸ್ ತಪಾಸಣೆ ಅಗತ್ಯವಿಲ್ಲ ಎಂಬು ದಾಗಿ ಅರಿತು ಪೊಲೀಸರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದಿದ್ದಾರೆ. ಶಿರೂರು ಮತ್ತು ಹೊಸಂಗಡಿ ಗಡಿ ಭಾಗಗಳಲ್ಲಿ 24 ಗಂಟೆಗಳ ಪೊಲೀಸರ ನಿಗಾವಣೆ ಇದೆ. ಇದೇ ವೇಳೆ ಹೆಜಮಾಡಿಯಲ್ಲಿನ ದ.ಕ., ಜಿಲ್ಲೆಗೆ ಸಂಬಂಧಿಸಿದ ಚೆಕ್‌ಪೋಸ್ಟ್‌ನಲ್ಲಿ ಹಗಲು ವೇಳೆ ಕೂಡ ಪೊಲೀಸ್ ತಪಾಸಣೆ ಎಂದಿನಂತೆ ಮಂದುವರಿದಿದೆ.
ಕ್ವಾರಂಟೈನ್ ತಪ್ಪಿಸಿಕೊಳ್ಳಲಾರರೇ?
ಕೊರೊನಾ ಮಹಾಮಾರಿಯಿಂದಾಗಿ ಲಾಕ್‌ಡೌನ್ ಆರಂಭವಾದಾಗಿನಿಂದ ಪೊಲೀಸ್ ಬಲವನ್ನು ಹೆಜಮಾಡಿ ಯಂತಹ ಜಿಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲೆ, ಅಂತರ್ ಜಿಲ್ಲಾ, ರಾಜ್ಯಗಳ ವಾಹನ ತಪಾಸಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಆದರೂ ಇದೀಗ ಹಗಲು ವೇಳೆಯಲ್ಲಿ ಪೊಲೀಸರು ಇಲ್ಲದಿರುವುದನ್ನು ಅರಿತು ಬೇರೆ ರಾಜ್ಯಗಳ ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದಲ್ಲಿ ಕ್ವಾರಂಟೈನ್ ತಪ್ಪಿಸಿ ನೇರ ಮನೆಗೇ ತೆರಳುವ ಅಪಾಯವೂ ಇದೆ ಎಂಬುದು ಸಾರ್ವಜನಿಕ ಅಭಿಪ್ರಾ ಯವಾಗಿದೆ. ಆದರೆ ಪೊಲೀಸ್ ಮೂಲಗಳು ಇದನ್ನು ಅಲ್ಲಗೆಳೆದಿದ್ದು ಕೇರಳದಿಂದ ಬರುವ ಮಂದಿಯನ್ನು ತಲ ಪಾಡಿಯಲೆತ್ತು ವೈಮಾನಿಕ ಮಾರ್ಗವಾಗಿ ಬರುವ ಮಂದಿಯನ್ನು ಅಲ್ಲಲ್ಲೇ ತಪಾಸಣೆ ನಡೆಸಿ ಆಯಾಯ ತಾ| ಕೇಂದ್ರಗಳಿಗೆ ಕ್ವಾರಂಟೈನ್‌ಗಾಗಿ ರವಾನಿಸಲಾಗುವುದು. ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರೂ ನಿಗಾ ವಹಿಸಲಿದ್ದಾರೆ.
ಪಡುಬಿದ್ರಿ ಠಾಣೆ ಸೇಫ್
ಪಡುಬಿದ್ರಿ ಪೊಲೀಸ್ ಠಾಣಾ ಸಿಬಂದಿಯ ಗಂಟಲ ದ್ರವ ಪರೀಕ್ಷೆಯ ವರದಿ ಈಗಾಗಲೇ ಬಂದಿದೆ. ಪಡುಬಿದ್ರಿ ಪೊಲೀಸ್ ಠಾಣೆ ಸೇಫ್ ಆಗಿದೆ. ಎಲ್ಲರ ವರದಿಯೂ ನೆಗೆಟಿವ್ ಬಂದಿರು ವುದಾಗಿ ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ ತಿಳಿಸಿದ್ದಾರೆ. ಪಡುಬಿದ್ರಿಯ ಹೊಟೇಲೊಂದರಲ್ಲಿ ಕ್ವಾರಂಟೈನ್‌ನಲ್ಲಿರುವ 18 ಮಂದಿಯ ಗಂಟಲ ದ್ರವ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ. ಬಂದ ಬಳಿಕ ನೆಗೆಟಿವ್ ಆದಲ್ಲಿ ಅವರನ್ನೂ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಪಡುಬಿದ್ರಿ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಬಿ.ಬಿ. ರಾವ್ ಹೇಳಿದ್ದಾರೆ.
ಅಂತಾರಾಜ್ಯ ಪ್ರಯಾಣಿಕರ ತಪಾಸಣೆ ಗಾಗಿ ಹೆಜಮಾಡಿ ಚೆಕ್‌ಪೋಸ್ಟ್ ಹಗಲಲ್ಲೂ ಕಾರ್ಯನಿರ್ವಹಿಸುತ್ತದೆ ಎಂಬುದಾಗಿ ಉಡುಪಿ ಜಿಲ್ಲಾ ಪೊಲೀಸ್ ಸೂಚನೆ ತಿಳಿಸಿದೆ. ಚೆಕ್ ಪೋಸ್ಟ್ ಗಳನ್ನು ತೆಗೆಯಲಾಗಿಲ್ಲ. ಅಂತಾರಾಜ್ಯ ಮಂದಿಯ ಜಿಲ್ಲಾ ಒಳ ಪ್ರವೇಶದ ವೇಳೆ ತಪಾಸಣೆ ನಡೆಸಿ ಕ್ವಾರೆಂಟೈನ್‌ಗೆ ಒಳಪಡಿಸಲು ಶಿರೂರು, ಹೆಜಮಾಡಿ, ಸೋಮೇಶ್ವರ, ಹೊಸಂಗಡಿಗಳಲ್ಲಿ ಹಗಲು ವೇಳೆಗಳಲ್ಲೂ ಚೆಕ್‌ಪೋಸ್ಟ್ ನಿಗಾವಣೆ ಕಾರ್ಯ ಮುಂದುವರಿಯಲಿದೆ.
ಮುಕ್ತ ವಾಹನ ಸಂಚಾರಕ್ಕೆ ಅವಕಾಶ
ಕೊಲ್ಲೂರು: ಎರಡು ತಿಂಗಳುಗಳಿಂದ ಇಲ್ಲಿನ ಗಡಿ ಪ್ರದೇಶವಾದ ದಳಿ ಎಂಬಲ್ಲಿ ಒದಗಿಸಲಾಗಿದ್ದ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮೇ 26 ರಿಂದ ಸಡಿಲಗೊಳಿಸಲಾಗಿದೆ.ಬಹುತೇಕ ವೈದ್ಯಾ ಧಿಕಾರಿಗಳು, ದಾದಿಯರು ಹಾಗೂ ವಿಶೇಷ ಪೊಲೀಸ್ ತಂಡದೊಡನೆ ಕಂದಾಯ ಇಲಾಖೆ ಅ ಧಿಕಾರಿಗಳ ನೇತೃತ್ವದಲ್ಲಿ ಶಿವಮೊಗ್ಗ ಹಾಗೂ ಇನ್ನಿತರ ಜಿಲ್ಲೆಗಳಿಂದ ಯಾರೊಬ್ಬರು ಗಡಿ ದಾಟದಂತೆ ವಿಶೇಷ ವ್ಯವಸ್ಥೆ ಏರ್ಪಡಿಸಿ ಪ್ರತಿ ವಾಹನ ತಪಾಸಣೆ ನಡೆಯುತ್ತಿತ್ತು. ಬುಧವಾರದಿಂದ ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದ ವಾಹನ ತಪಾಸಣೆ ರದ್ದುಗೊಳಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ಮಾತ್ರ ತಪಾಸಣೆ ಮುಂದುವರಿಯಲಿದೆ. ಈ ರೀತಿಯ ಬದಲಾವಣೆಯು ಒಂದಿಷ್ಟು ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.