ಪಾಲನೆಯಾಗದ ಮಾಸ್ಕ್ , ಸಾಮಾಜಿಕ ಅಂತರ ನಿಯಮ

ಜನರು ನಿರ್ಲಕ್ಷ್ಯ ತೋರಬಾರದು, ಜಿಲ್ಲಾಡಳಿತವೂ ಎಚ್ಚರ ವಹಿಸಬೇಕು

Team Udayavani, May 28, 2020, 6:30 AM IST

ಪಾಲನೆಯಾಗದ ಮಾಸ್ಕ್ , ಸಾಮಾಜಿಕ ಅಂತರ ನಿಯಮ

ಮಂಗಳೂರು/ ಉಡುಪಿ: ದಿನ ಕಳೆದಂತೆ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಪಾಲನೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಕೋವಿಡ್ ವೈರಸ್‌ ನಿಯಂತ್ರಿಸಲು ಜಗತ್ತೇ ಪಾಲಿಸುತ್ತಿರುವ ಏಕೈಕ ಮಾರ್ಗ ಇದಾಗಿದ್ದು, ಇದರ ಕಟ್ಟುನಿಟ್ಟಿನ ಪಾಲನೆಯತ್ತ ಜಿಲ್ಲಾಡಳಿತಗಳು ಮೊದಲಿನಷ್ಟು ಗಮನ ಕೊಡುತ್ತಿಲ್ಲ ಎಂಬ ಟೀಕೆಯೂ ವ್ಯಕ್ತವಾಗುತ್ತಿದೆ. ಇದರೊಂದಿಗೆ “ಮೂಲವೇ’ ಗೊತ್ತಿಲ್ಲದ ಪ್ರಕರಣಗಳ ಸಂಖ್ಯೆಯೂ ಏರುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಷ್ಟು ದಿನ ಸೋಂಕು ಪೀಡಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಿಂದ ಹರಡುತ್ತಿದ್ದ ಕೋವಿಡ್ ಸೋಂಕು ಈಗ ಯಾವುದೇ ಸಂಪರ್ಕದ ಹಿಸ್ಟರಿಯೂ ಇಲ್ಲದೆ ಅಲ್ಲಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ. ಇಂತಹ ಸಂದರ್ಭ ಜನರು ಗಂಭೀರವಾಗಿ ನಿಯಮಗಳನ್ನು ಪಾಲಿಸದಿದ್ದರೆ ಮತ್ತಷ್ಟು ಅಪಾಯಕ್ಕೆ ಗುರಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದ ರೊಂದಿಗೆ ಉಭಯ ಜಿಲ್ಲೆಗಳಲ್ಲಿ ಜನರ ಅಸಡ್ಡೆ ಮತ್ತು ಜಿಲ್ಲಾಡಳಿತಗಳ ಮೃದು ನಿಲುವು (ಲಾಕ್‌ಡೌನ್‌ ನಿಯಮ ವಿನಾಯಿತಿ ಬಳಿಕ) ಸೋಂಕು ಸಾಮು ದಾಯಿಕ ಪ್ರಸರಣದ ಹಂತಕ್ಕೆ ತಲುಪುವ ಅಪಾಯವೂ ಇದೆ ಎಂಬ ಅಭಿ ಪ್ರಾಯವೂ ಕೇಳಿಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ 81 ಮಂದಿಗೆ ಮತ್ತು ಉಡುಪಿ ಜಿಲ್ಲೆಯಲ್ಲಿ 120 ಜನರಿಗೆ ಸೋಂಕು ತಗಲಿದೆ. ದ.ಕ.ದಲ್ಲಿ ನಾಲ್ವರಿಗೆ ಸೋಂಕು ಹರಡಿರುವ ಮೂಲವೇ ಪತ್ತೆಯಾಗಿಲ್ಲ.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುರತ್ಕಲ್‌, ಯೆಯ್ನಾಡಿಯ ಬಾರೆಬೈಲ್‌ ಮತ್ತು ಶಿರ್ಲಾಲಿನ ಒಟ್ಟು ಮೂವರು ಮಹಿಳೆಯರು ಮತ್ತು ಎರಡು ದಿನಗಳ ಹಿಂದೆ ಮೃತಪಟ್ಟ ಬೆಳ್ತಂಗಡಿಯ ವ್ಯಕ್ತಿಗೆ ಸೋಂಕು ಹರಡಿದ್ದೆಲ್ಲಿಂದ ಎಂಬುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿ ಕಾರ್ಕಳದ ಗರ್ಭಿಣಿ ಮತ್ತು ಉಡುಪಿ ಜಿ.ಪಂ. ಸಿಬಂದಿಗೆ ಹೇಗೆ ಸೋಂಕು ತಗಲಿದ್ದೆಂದು ಗೊತ್ತಾಗಿಲ್ಲ.

ಸಾಮುದಾಯಿಕ ಹರಡುವಿಕೆಯ ಆತಂಕ
ಸೋಂಕುಪೀಡಿತರ ಸಂಪರ್ಕವಿಲ್ಲದವರಿಗೂ ಕೋವಿಡ್ ಹರಡುತ್ತಿರುವುದನ್ನು ಗಮನಿಸಿದರೆ ಅದೀಗ ಸಾಮುದಾಯಿಕ ಪ್ರಸರಣದ ಹಂತ ತಲುಪಿದೆಯೇ ಎನ್ನುವ ಅನುಮಾನವನ್ನೂ ಹುಟ್ಟು ಹಾಕಿದೆ. ಇಂತಹ ಹರಡುವಿಕೆಗೆ ಪೂರಕ ಎಂಬಂತೆ ಎರಡೂ ಜಿಲ್ಲೆಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತಹ ಮುನ್ನೆಚ್ಚರಿಕೆಯ ಕ್ರಮಗಳನ್ನು ಮರೆಯುತ್ತಿರುವುದು ಮತ್ತು ನಿರ್ಲಕ್ಷಿಸುತ್ತಿರುವುದು ಹೆಚ್ಚಾಗುತ್ತಿದೆ.

ಕಾನೂನು ಕ್ರಮದ ಹೆದರಿಕೆಯೂ ಇಲ್ಲ
ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಸಂಚರಿಸಿದರೆ ನಗರ ಪ್ರದೇಶಗಳಲ್ಲಿ 200 ರೂ. ದಂಡ, ಗ್ರಾಮೀಣ ಭಾಗದಲ್ಲಿ 100 ರೂ. ದಂಡ ವಿಧಿಸುವುದಾಗಿ, ಕ್ವಾರಂಟೈನ್‌ ನಿಯಮ ಉಲ್ಲಂ ಸಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದರು. ದ.ಕ. ಜಿಲ್ಲೆಯಲ್ಲಿ ಸುಮಾರು 650 ಹಾಗೂ ಉಡುಪಿ ಜಿಲ್ಲೆಯಲ್ಲಿ 700 ಮಂದಿಗೆ ದಂಡ ವಿಧಿಸಲಾಗಿದೆ.

ಸಂಕೀರ್ಣ ಸ್ವರೂಪ; ಎಚ್ಚರವೇ ಮದ್ದು
ಸದ್ಯ ಲಾಕ್‌ಡೌನ್‌ ಸಡಿಲಿಕೆಯಾಗಿದೆ. ಆದರೆ ಸೋಂಕುಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸಾಮುದಾಯಿಕ ಪ್ರಸರಣದ ಹಂತ ತಲುಪಿರುವ ಅನುಮಾನವನ್ನು ವೈದ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ತಳ್ಳಿ ಹಾಕುತ್ತಾರೆ. ಆದರೆ ಈಗ ಜನರೇ ಸೋಂಕು ಮುಂದಿನ ಹಂತ ಪ್ರವೇಶಿಸದಂತೆ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕಿದೆ. ಜಿಲ್ಲಾಡಳಿತ ಕಾರ್ಯ ನಿರತವಾಗಿದ್ದರೂ ಅದು ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕೆ ಉದಾಹರಣೆಯಾಗಿ ವಿಟ್ಲ ಪೊಲೀಸ್‌ ಠಾಣೆಯ ಸಿಬಂದಿಗೆ ಸೋಂಕು ಹರಡಿದ್ದನ್ನು ಗಮನಿಸಬಹುದು. ಈ ಪ್ರಕರಣದಲ್ಲಿ ಸೋಂಕುಪೀಡಿತನ ಆಧಾರ್‌ ಕಾರ್ಡ್‌ ಮುಟ್ಟಿದ ಪೊಲೀಸ್‌ ಸಿಬಂದಿಯು ಬಳಿಕ ಇನ್ನೋರ್ವ ಸಿಬಂದಿಗೆ ತನ್ನ ಮೊಬೈಲ್‌ ಫೋನ್‌ ನೀಡಿದ್ದರು. ಆಧಾರ್‌ ಕಾರ್ಡ್‌ ಮುಟ್ಟಿದ ಸಿಬಂದಿಯಲ್ಲಿ ಸೋಂಕು ಪತ್ತೆಯಾಗಿಲ್ಲ, ಆದರೆ ಅವರ ಮೊಬೈಲ್‌ ಬಳಸಿದ ಇನ್ನೊಬ್ಬ ಸಿಬಂದಿಗೆ ಸೋಂಕು ತಗಲಿದೆ. ಇದನ್ನು ಗಮನಿಸಿದರೆ ಕೊರೊನಾ ಎಲ್ಲಿಂದ, ಹೇಗೆ ಹರಡುತ್ತದೆ ಎಂಬುದೇ ಗೊತ್ತಾಗದಷ್ಟು ಅಪಾಯ ಆಳದಲ್ಲಿದೆ. ಹೀಗಾಗಿ ಸಾಧ್ಯವಾದಷ್ಟು ಎಚ್ಚರ ವಹಿಸುವುದೇ ಈಗಿರುವ ದಾರಿ.

ಸಭೆಗಳಲ್ಲೇ ನಿಯಮ ಉಲ್ಲಂಘನೆ
ಮಾಸ್ಕ್ ಧರಿಸದಿರುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಇಲ್ಲದಿರುವ ಪ್ರಸಂಗಗಳು ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುವ ಕಾರ್ಯಕ್ರಮ, ಸಭೆಗಳಲ್ಲೇ ಕಂಡು ಬರುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ನಾವು ಕಚೇರಿಯ ಒಳಗೆ ಇದ್ದೇವೆ ಎಂದು ಮಾಸ್ಕ್ ಧರಿಸಬೇಕಾಗಿಲ್ಲ ಎಂಬ ಅಭಿಪ್ರಾಯ ಕೆಲವರದ್ದಾದರೆ, ಹಲವು ಮಂದಿ ಪಾಲ್ಗೊಳ್ಳುವ ಸಭೆ, ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಷ್ಟವಾಗಬಹುದು ಎಂಬ ಅಭಿಪ್ರಾಯ ಉಳಿದವ ರಲ್ಲಿರಬಹುದು. ಆದರೆ ನಿಯಮ ಪಾಲಿಸುವಂತೆ ಹೇಳುವವರೇ ಉಲ್ಲಂಘಿಸಿದ ಉದಾಹರಣೆಯೂ ಉಳಿದವರೂ ಗಂಭೀರವಾಗಿ ತೆಗೆದುಕೊಳ್ಳದಂತೆ ಮಾಡುತ್ತಿದೆ ಎಂಬುದು ಜನಾಭಿಪ್ರಾಯ.

ಸೋಂಕು ಪೀಡಿತರ ಸಂಪರ್ಕಿತರಲ್ಲದ 4 ಪ್ರಕರಣಗಳ ಬಗ್ಗೆ ಏಕಾಏಕಿ ನಿರ್ಧಾರಕ್ಕೆ ಬರಲಾಗುವುದಿಲ್ಲ. ಸಾಮುದಾಯಿಕ ಹರಡುವಿಕೆಯ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ಮುಂದೆ ಅಲ್ಲಗಳೆಯುವಂತಿಲ್ಲ.
-ಡಾ| ರಾಮಚಂದ್ರ ಬಾಯರಿ,  ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಜಿಲ್ಲೆಯ 2 ಪ್ರಕರಣಗಳ ಮೂಲ ತಿಳಿಯುತ್ತಿಲ್ಲ. ಇವರು ಸಂಪರ್ಕ ತಿಳಿಸುತ್ತಿಲ್ಲ. ಸಂಪರ್ಕವನ್ನು ಹೊಂದದೆ ಸೋಂಕು ತಗಲಿದರೆ ಸಾಮುದಾಯಿಕವಾಗಿ ಹರಡುತ್ತಿದೆಯೇ ಎಂಬ ಸಂಶಯ ಮೂಡುತ್ತದೆ.
– ಡಾ| ಸುಧೀರ್‌ಚಂದ್ರ ಸೂಡ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

ಮಾಸ್ಕ್ ಧರಿಸದವರು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ದೇಶಿಸುತ್ತೇನೆ.
– ಜಿ. ಜಗದೀಶ್‌, ಜಿಲ್ಲಾಧಿಕಾರಿಗಳು, ಉಡುಪಿ

ಟಾಪ್ ನ್ಯೂಸ್

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.