ಲಾಕ್‌ಡೌನ್ ಟೈಮಲ್ಲಿ ಅಜೇಯ್‌ರಾವ್ ಮಾಡಿದ್ದೇನು ಗೊತ್ತಾ?
Team Udayavani, May 28, 2020, 4:33 AM IST
ಈ ಲಾಕ್‌ಡೌನ್ ಸಮಯವನ್ನಂತೂ ಪ್ರತಿಯೊಬ್ಬರೂ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಅದರಲ್ಲೂ ಕನ್ನಡದ ನಟರ ಪೈಕಿ ಕೆಲವರು ಹಾಡು ಬರೆದರೆ, ಕೆಲವರು ಹಾಡು ಹಾಡಿದರು. ಇನ್ನು ಕೆಲವರು ಮನೆಯವರ ಜೊತೆ ಸಂತಸದಿಂದ ಕಾಲ ಕಳೆದರು. ಈಗ ನಟ ಅಜೇಯ್‌ರಾವ್ ಈ ಸಮಯವನ್ನು ವ್ಯರ್ಥ ಮಾಡದೆ ಅವರೊಂದು ಕಥೆ ಹೆಣೆದಿದ್ದಾರೆ ಎಂಬುದು ವಿಶೇಷ.
ಹೌದು, ಇಷ್ಟು ದಿನಗಳ ಕಾಲ ಮನೆಯಲ್ಲೇ ಇದ್ದ ಅಜೇಯ್‌ರಾವ್, ಅಮ್ಮ, ಪತ್ನಿ, ಮಗಳ ಜೊತೆ ಸಮಯ ಕಳೆಯುತ್ತಲೇ ಜೊತೆಯಲ್ಲೊಂದು ಒಳ್ಳೆಯ ಕಥೆ ರೆಡಿ ಮಾಡಿದ್ದಾರೆ. ಈಗಾಗಲೇ ಸಂಪೂರ್ಣ ಸ್ಕ್ರಿಪ್ಟ್ ಮುಗಿದಿದ್ದು, ಸಂಭಾಷಣೆ ಮಾತ್ರ ಬಾಕಿ ಉಳಿದಿದೆ. ಈ ಕುರಿತು ಉದಯವಾಣಿ ಜೊತೆ ಮಾತನಾಡಿದ ಅಜೇಯ್ ರಾವ್, ಲಾಕ್‌ಡೌನ್ ಸಮಯದಲ್ಲಿ ನಾನು ಒಂದು ಕಥೆ ಬರೆದು ಮುಗಿಸಿದ್ದೇನೆ. ಅದೀಗ ಮುಗಿಯೋ ಹಂತ ತಲುಪಿದ್ದು, ಮಾತುಗಳನ್ನು ಪೋಣಿಸಬೇಕಿದೆ.
ಅದು ಹೊಸ ಬಗೆಯ ಕಥೆ. ಕಥೆಯೇ ಹೈಲೈಟ್. ಮಾಸ್, ಕ್ಲಾಸ್, ಲವ್, ಎಮೋಷನಲ್, ಥ್ರಿಲ್ಲರ್ ಜೊತೆಯಲ್ಲಿ ಬೇರೆ ಹೊಸ ವಿಷಯವೂ ಇದೆ. ಯುನಿಕ್ ಆಗಿರುವಂತಹ ಕುತೂಹಲ ಕೆರಳಿಸುವಂತಹ ಕಥೆ ಇದಾಗಿದೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಕಥೆ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ಬೇರೇನೂ ಯೋಚಿಸಿಲ್ಲ. ಮುಂದೆ ನಿರ್ದೇಶನ ಮಾಡಬಹುದಾ? ಗೊತ್ತಿಲ್ಲ. ನನ್ನದೇ ಕಥೆ ಆಗಿರುವುದರಿಂದ ನಿರ್ದೇಶನ ಮಾಡಿದರೂ ಅಚ್ಚರಿಯೇನಿಲ್ಲ ಎಂಬುದು ಅಜೇಯ್‌ರಾವ್ ಮಾತು.
ಲಾಕ್‌ಡೌನ್ ನಂತರ ಸಿನಿಮಾ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ ಎನ್ನುವ ಅಜೇಯ್‌ರಾವ್, ಸದ್ಯಕ್ಕೆ ಕಥೆ ರೆಡಿಯಾಗಿದೆ. ನನ್ನ ಅಭಿನಯದ ಕೃಷ್ಣ ಟಾಕೀಸ್ ಮತ್ತು ಶೋಕಿವಾಲ ಮುಗಿದಿವೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿಕೊಂಡು ಇನ್ನೇನು ಸೆನ್ಸಾರ್ ಬಳಿಕ ಪ್ರೇಕ್ಷಕರ ಮುಂದೆ ಬರಬೇಕಿದೆ. ಅದು ಬಿಟ್ಟರೆ, ಗುರುದೇಶಪಾಂಡೆ ಅವರ ಜೊತೆಗೆ ಒಂದು ಸಿನಿಮಾ ಮಾಡಬೇಕಿದೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್‌ನಲ್ಲಿ ಇನ್ನೊಂದು ಸಿನಿಮಾ ಇದೆ.
ಅದಕ್ಕೆ ನಿರ್ದೇಶಕರು ಯಾರು, ಕಥೆ ಏನು ಎಂಬುದಿನ್ನೂ ಅಂತಿಮವಾಗಿಲ್ಲ ಎಂದು ವಿವರಿಸುತ್ತಾರೆ. ಚಿತ್ರರಂಗ ಆದಷ್ಟು ಬೇಗ ಚೇತರಿಕೆ ಕಾಣಬೇಕು. ಚಿತ್ರಮಂದಿರಗಳು ತೆರೆದರೆ ಜನರು ಹೇಗೆ ಸ್ಪಂದಿಸುತ್ತಾರೆ ಅನ್ನುವ ಸ್ಪಷ್ಟನೆ ಇಲ್ಲ. ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾಗಳ ಕಥೆ ಏನು ಎಂಬುದು ದೊಡ್ಡ ಆತಂಕ ತಂದಿದೆ ಎನ್ನುತ್ತಾರೆ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.