ಸುದ್ದಿವಾಹಿನಿ ಕ್ಯಾಮರಾಮನ್ ಸೇರಿ 6 ಮಂದಿಗೆ ಸೋಂಕು
Team Udayavani, May 28, 2020, 5:43 AM IST
ಬೆಂಗಳೂರು: ನಗರದಲ್ಲಿ ಬುಧವಾರ ಸುದ್ದಿವಾಹಿನಿ ಕ್ಯಾಮರಾಮನ್, ಪೊಲೀಸ್ ಎಎಸ್‌ಐ ಸೇರಿ 6 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 282ಕ್ಕೆ ಏರಿಕೆಯಾಗಿದೆ. ಸದ್ಯ 120 ಸಕ್ರಿಯ ಪ್ರಕರಣಗಳಿವೆ.
ತಮಿಳುನಾಡಿನಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಹೋಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಸುದ್ದಿ ವಾಹಿನಿಯೊಂದರ ಕ್ಯಾಮರಾಮನ್ (ರೋಗಿ ಸಂಖ್ಯೆ -2334) ಅವರ 32 ವರ್ಷದ ಮಗ (ರೋಗಿ ಸಂಖ್ಯೆ -2336)ನಲ್ಲಿ ಸೋಂಕು ಪತ್ತೆಯಾಗಿದೆ. ಹೆಬ್ಬಗೋಡಿ ಠಾಣೆ ಎಎಸ್‌ಐ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಆನೇಕಲ್‌ನ ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಹೋಗಿ ಸಿಕ್ಕಿಬಿದ್ದ ಕಳ್ಳರನ್ನು ಬಂಧಿಸಿದ್ದ 30 ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ ಈಗಾಗಲೇ ಒಬ್ಬರು ಕಾನ್ಸ್‌ಸ್ಟೇಬಲ್‌ಗೆ ಸೋಂಕುದೃಢಪಟ್ಟಿತ್ತು. ಬುಧವಾರ ಎಎಸ್‌ಐಗೂ ಸೋಂಕಿರುವುದು ದೃಢಪಟ್ಟಿದೆ.
ವಿದೇಶ, ಹೊರರಾಜ್ಯದಿಂದ ಬಂದ ಮೂವರಿಗೆ ಸೋಂಕು: ಮತ್ತೂಂದೆಡೆ ನೇಪಾಳದಿಂದ ಬಂದ 22 ವರ್ಷದ ಯುವತಿ, ಯುಎಇನಿಂದ ಬಂದ 28 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲಾ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದರು. ಮತ್ತೂಂದು ಪ್ರಕರಣದಲ್ಲಿ ಮಧ್ಯಪ್ರದೇಶದಿಂದ ಬಂದಿದ 25 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ. ಇವರೂ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದರು. ಹೀಗಾಗಿ, ಈ ಸೋಂಕಿ ತರಿಂದ ಯಾರಿಗೂ ಸೋಂಕು ಹರಡಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ನಗರದಲ್ಲಿ ಬುಧ ವಾರ ಇಬ್ಬರು ಸೋಂಕಿತರು ಗುಣಮುಖರಾಗಿದ್ದು, ಒಟ್ಟಾರೆ ಗುಣಮುಖರಾದವರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.
ಕಂಟೈನ್ಮೆಂಟ್ ವ್ಯಾಪ್ತಿಗೆ ರಾಮಮೂರ್ತಿ ನಗರ: ತಮಿಳುನಾಡಿನಿಂದ ಹಿಂದಿರುಗಿದ ಇಬ್ಬರಲ್ಲಿ ಕೋವಿಡ್ 19 ದೃಢಪಟ್ಟ ಹಿನ್ನೆಲೆಯಲ್ಲಿ ಮಹದೇವಪುರದ ರಾಮಮೂರ್ತಿ ನಗರವನ್ನು ಕಂಟೈನ್ಮೆಂಟ್ ವ್ಯಾಪ್ತಿಗೆ ಸೇರಿಸಲಾಗಿದೆ. ಇನ್ನು ಕಳೆದ 28 ದಿನಗಳಿಂದ ಯಾವುದೇ ಸೋಂಕು ದೃಢಪಡದ ದೀಪಾಂಜಲಿ ನಗರ ಕಂಟೈನ್ಮೆಂಟ್ ಝೊನ್ ಮುಕ್ತವಾಗಿದೆ. ಸದ್ಯ ನಗರದಲ್ಲಿ ಒಟ್ಟು 25 ಕಂಟೈನ್ಮೆಂಟ್ ವಾರ್ಡ್‌ಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.