ಮಾವು ಬೆಳೆಗಾರರು-ಮಾರಾಟಗಾರರಿಗೆ ಕೋವಿಡ್ ಕಹಿ
ಖರೀದಿದಾರರಿಲ್ಲದೆ ಹಾಳಾದ ಹಣ್ಣುಗಳು ; ಸಿಕ್ಕಸಿಕ್ಕ ದರಕ್ಕೆ ನಡೆದಿದೆ ಮಾರಾಟ
Team Udayavani, May 28, 2020, 6:28 AM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಇಳುವರಿಯೂ ಕಡಿಮೆ.. ನೆಲಕಚ್ಚಿದ ವ್ಯಾಪಾರ.. ತೋಟದ ಗುತ್ತಿಗೆ ಕೈಬಿಟ್ಟ ಗುತ್ತಿಗೆದಾರರು.. ತೋಟದವರಿಂದಲೇ ಮಾರಾಟ.. ಸಿಕ್ಕವರಿಗೆ
ಗುತ್ತಿಗೆ… ದರವೂ ಅಷ್ಟಕಷ್ಟೇ.. ಇದು ಕೋವಿಡ್ ಹೊಡೆತ್ತಕ್ಕೆ ತತ್ತರಿಸಿದ ಧಾರವಾಡ ತಾಲೂಕು ಜೋಗೆಲ್ಲಾಪುರ ಗ್ರಾಮದ ಮಾವಿನ ವಹಿವಾಟಿನ ಕಥೆ-ವ್ಯಥೆ. ಲಾಕ್‌ಡೌನ್ ಕಾರಣ ಎರಡೂವರೆ ತಿಂಗಳಿಂದ ಮಾವಿನ ಹಣ್ಣುಗಳ ವಹಿವಾಟು ನೆಲಕಚ್ಚಿದೆ. ಮಾರುಕಟ್ಟೆಗೆ ಆಗಮಿಸಿರುವ ಹಣ್ಣುಗಳ ಖರೀದಿಗೆ ಜನ ನಿರೀಕ್ಷಿತ ಮಟ್ಟದಲ್ಲಿ ಮುಂದಾಗುತ್ತಿಲ್ಲ. ಹೀಗಾಗಿ ಸಾಕಷ್ಟು ಹಣ್ಣುಗಳು ಹಾಳಾಗಿದ್ದರೆ, ಕೆಲವೊಮ್ಮೆ ಸಿಕ್ಕ ಸಿಕ್ಕ ದರಕ್ಕೆ ಮಾರಾಟಗೊಂಡಿವೆ.
ಆರಂಭದಲ್ಲಿ ಒಂದು ಸಾವಿರ ರೂ.ಗಳಿಗೆ ಎರಡು ಡಜನ್ ಆಲ್ಪೋನ್ಸೊ ಮಾವಿನ ಹಣ್ಣಿನ ಬಾಕ್ಸ್ ಮಾರಾಟವಾಗುತ್ತಿತ್ತು. ಈಗ ಕೇವಲ 200-500 ರೂ. ಗಳಿಗೆ ದರ ಕುಸಿದಿದೆ. ಕಲ್ಮಿ, ಕರೇ ಈಶಾಡಿ, ಸಿಂಧೂರ ಸೇರಿದಂತೆ ವಿವಿಧ ತಳಿಗಳ ಹಣ್ಣುಗಳದ್ದೂ ಇದೇ ಕಥೆ. ಪ್ರತಿ ವರ್ಷ ಸೀಜನ್ ಆರಂಭವಾಗುವುದಕ್ಕಿಂತ
ಮುಂಚಿತವಾಗಿ ಕಾಯಿ ಬಿಡುವ ಸಮಯದಲ್ಲಿ ತೋಟಗಳಿಗೆ ಆಗಮಿಸುತ್ತಿದ್ದ ಗುತ್ತಿಗೆದಾರರು, ಇಡೀ ತೋಟದ ಹಣ್ಣುಗಳಿಗೆ ದರ ನಿಗದಿ ಮಾಡುತ್ತಿದ್ದರು.
ಈ ಬಾರಿ ಗುತ್ತಿಗೆ ಹೊಂದಿಸಿಕೊಂಡು ಹೋದವರು ತೋಟದತ್ತ ತಲೆ ಹಾಕಿಲ್ಲ. ಇದರಿಂದ ತೋಟದ ಮಾಲೀಕರಿಗೆ ದಿಕ್ಕು ತೋಚದಂತಾಗಿ ನಂತರ ಬಂದ
ದರಗಳಿಗೆ ಹಣ್ಣುಗಳನ್ನು ನೀಡಿದ್ದಾರೆ. ಇನ್ನು ಕೆಲವೆಡೆ ತೋಟದ ಮಾಲೀಕರೇ ಬಂದ ದರಕ್ಕೆ ಮಾವಿನ ಕಾಯಿಗಳ ಮಾರಾಟವನ್ನೂ ಮಾಡಿದ್ದಾರೆ.
ಧಾರವಾಡ ತಾಲೂಕಿನ ಜೋಗೆಲ್ಲಾಪುರ ಗ್ರಾಮದಲ್ಲಿ ನೂರಾರು ಎಕರೆ ಮಾವಿನ ತೋಟಗಳಿದ್ದು, ಪ್ರತಿವರ್ಷ ಮಾವಿನ ಹಣ್ಣುಗಳು ಸ್ಥಳೀಯ ಮಾರುಕಟ್ಟೆ ಜತೆಗೆ
ಹೊರರಾಜ್ಯ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ಹೋಗುತ್ತಿದ್ದವು. ಆದರೆ ಈ ಸಲ ಖರೀದಿಗೆ ಗುತ್ತಿಗೆದಾರರು ಆಗಮಿಸದ ಕಾರಣ ಸ್ಥಳೀಯ ಹಣ್ಣು ಮಾರಾಟಗಾರ ಕುಟುಂಬಗಳೇ ಮಾವಿನ ಹಣ್ಣುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಹಣ್ಣಿನ ಸೀಜನ್ ಸಂಪೂರ್ಣ ಹಾಳಾಗಿ ಹೋಗಿದೆ. ಲಕ್ಷಾಂತರ ರೂ. ಬಂಡವಾಳ ಹಾಕಿ ತೋಟಗಳನ್ನು ಗುತ್ತಿಗೆ ಪಡೆದು ಹಣ್ಣುಗಳನ್ನು ತೆಗೆದುಕೊಂಡು ಬಂದು
ಮಾರಾಟಕ್ಕೆ ಹಚ್ಚಿದರೆ ಕೊಳ್ಳಲು ಜನರೇ ಇಲ್ಲ. ಪ್ರತಿ ವರ್ಷ ಜೋಗೆಲ್ಲಾಪುರ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಜನರು
ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದರು. ಆದರೆ ಈ ಬಾರಿ ಖರೀದಿದಾರರೇ ಇಲ್ಲ ಎಂದು ದ್ಯಾಮವ್ವ ಹನುಮಂತಪ್ಪ ತಳವಾರ ಹೇಳುತ್ತಾರೆ.
ಕೋವಿಡ್ ಹಿನ್ನೆಲೆಯಲ್ಲಿ ಜನರು ಹಣ್ಣುಗಳ ಖರೀದಿಗೂ ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಇಲ್ಲಿಗೆ ಬಂದವರು ಒಂದೆರಡು ಬಾಕ್ಸ್ ನೋಡಿ ಹಣ್ಣುಗಳು ಚೆನ್ನಾಗಿವೆ ಎಂದು ತೆಗೆದುಕೊಂಡು ಹೋಗುತ್ತಿದ್ದರು. ಈ ಬಾರಿ ಹಣ್ಣು ನೋಡಿದರೂ
ಈ ಹಿಂದೆ ಕೆಲವರಷ್ಟೇ ಮಾವಿನ ಹಣ್ಣುಗಳ ಮಾರಾಟ ಮಾಡುತ್ತಿದ್ದರು. ಆದರೆ ಈಗ ತರಕಾರಿ ಮಾರುವವರಿಂದ ಹಿಡಿದು ಬಟ್ಟೆ ಮಾರುವವರು ಸಹ ಮಾವಿನ
ಸೀಜನ್‌ನಲ್ಲಿ ಹಣ್ಣುಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಹಣ್ಣುಗಳ ಮಾರಾಟಗಾರರಿಗೆ ಕೊಂಚ ಹೊಡೆತ ಬಿದ್ದಿದೆ.
ದ್ಯಾಮವ್ವ ತಳವಾರ, ಹಣ್ಣಿನ ವ್ಯಾಪಾರಿ
ಕಳೆದ ಹದಿನೈದು ವರ್ಷಗಳಿಂದ ವಿವಿಧ ಹಣ್ಣುಗಳ ಮಾರಾಟ ಮಾಡುತ್ತಿದ್ದೇವೆ. ಮಾವಿನ ಹಣ್ಣುಗಳ ಸೀಜನ್‌ನಲ್ಲಿ ಹಣ್ಣುಗಳು ಭರಪೂರವಾಗಿ ಮಾರಾಟವಾಗುತ್ತಿದ್ದವು. ಆದರೆ ಈ ವರ್ಷ ಅಂಥ ವ್ಯಾಪಾರವೇ ಇಲ್ಲ. ಈಗ ಇರುವ ಹಣ್ಣುಗಳನ್ನು ಖಾಲಿ ಮಾಡುವುದಾದರೂ ಹೇಗೆ ಎನ್ನುವುದೇ ಚಿಂತೆಯಾಗಿದೆ. ಇಂಥ ಸ್ಥಿತಿ ಎಂದೂ ಬಂದಿರಲಿಲ್ಲ.
ಹನುಮವ್ವ ಹುಬ್ಬಳ್ಳಿ ಮಾವಿನ ಹಣ್ಣಿನ ವ್ಯಾಪಾರಿ
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.