ಸುಳ್ಯ: 20 ಕ್ವಿಂಟಾಲ್ ಭತ್ತದ ಬೀಜ ಸಂಗ್ರಹ
ಹೋಬಳಿ ಕೇಂದ್ರಗಳಿಂದ ಈಗಾಗಲೇ 7 ಕ್ವಿಂಟಾಲ್ ವಿತರಣೆ
Team Udayavani, May 29, 2020, 5:22 AM IST
ಸುಳ್ಯ: ಭತ್ತ ಬೆಳೆಗಾರರಿಗೆ ವಿತರಿಸಲು ತಾಲೂಕಿನಲ್ಲಿ 20 ಕ್ವಿಂಟಾಲ್ ಭತ್ತದ ಬೀಜ ಸಂಗ್ರಹವಿದ್ದು, ಈಗಾಗಲೇ 7 ಕ್ವಿಂಟಾಲ್ ವಿತರಣೆ ಕಾರ್ಯ ಪೂರ್ಣ ಗೊಂಡಿದೆ. ಕೃಷಿ ಇಲಾಖೆ ಸಬ್ಸಿಡಿ ದರದಲ್ಲಿ ಭತ್ತದ ಬೀಜ ವಿತರಿಸುತ್ತಿದೆ. ಬೆಳೆಗಾರರು ಬೆಳೆ ಮಾಹಿತಿಯೊಂದಿಗೆ ಸಂಪರ್ಕಿಸಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ಎರಡು ಕಡೆ ವಿತರಣೆ
ತಾಲೂಕಿನಲ್ಲಿ ಎರಡು ರೈತ ಸಂಪರ್ಕ ಕೇಂದ್ರಗಳಿವೆ. ಸುಳ್ಯ ಹೋಬಳಿಗೆ ಸಂಬಂಧಿಸಿ ನಗರದಲ್ಲಿ ಹಾಗೂ ಪಂಜ ಹೋಬಳಿಗೆ ಸಂಬಂಧಿಸಿ ಪಂಜ ಪೇಟೆಯಲ್ಲಿ ಕೇಂದ್ರವಿದೆ. ಆಯಾ ಹೋಬಳಿ ರೈತರು ತಮ್ಮ ವ್ಯಾಪ್ತಿಯ ಕಚೇರಿಗೆ ತೆರಳಿ ಸೌಲಭ್ಯ ಪಡೆದುಕೊಳ್ಳಬಹುದು.
ಎಂಒ4 ಭತ್ತದ ಬೀಜ
20 ಕ್ವಿಂಟಾಲ್ ಎಂಒ4 (ಭದ್ರಾ) ತಳಿ ಭತ್ತದ ಬೀಜ ಸಂಗ್ರಹವಿದೆ. ಸುಳ್ಯ ಕೇಂದ್ರದಲ್ಲಿ 15 ಕ್ವಿಂಟಾಲ್ ಹಾಗೂ ಪಂಜ ಕೇಂದ್ರದಲ್ಲಿ 5 ಕ್ವಿಂಟಾಲ್ ದಾಸ್ತಾನು ಇದೆ. ಈಗಾಗಲೇ 7 ಕ್ವಿಂಟಾಲ್ ವಿತರಿಸಲಾಗಿದೆ. ಬೇಡಿಕೆ ಆಧರಿಸಿ ಪೂರೈಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
300 ಹೆಕ್ಟೇರ್
ತಾಲೂಕಿನಲ್ಲಿ 300 ಹೆಕ್ಟೇರ್ ಭತ್ತದ ಗದ್ದೆ ಇದೆ. ಈಗಾಗಲೇ 2 ಹೆಕ್ಟೇರಿನಲ್ಲಿ ಬೇಸಾಯ ಕಾರ್ಯ ಪ್ರಾರಂಭವಾಗಿದೆ. ಯಾಂತ್ರೀಕೃತ ಪದ್ಧತಿಯಲ್ಲಿ ನಾಟಿ ಮಾಡಿದಲ್ಲಿ ಎಕರೆಗೆ 12 ರಿಂದ 15 ಕೆ.ಜಿ.ಭತ್ತದ ಬೀಜ ಸಾಕಾಗುತ್ತದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ 25 ಕೆ.ಜಿ.ಬೇಕಾಗುತ್ತದೆ. ಇದರ ಆಧಾರದಲ್ಲಿ ವಿತರಣೆ ನಡೆಯುತ್ತದೆ ಅನ್ನುವುದು ಇಲಾಖೆ ನೀಡುವ ಅಂಕಿ ಅಂಶ.
ಟರ್ಪಾಲು ಬಂದಿಲ್ಲ
ಕೀಟನಾಶಕ, ಕೃಷಿ ಸುಣ್ಣ, ಸಾವಯವ ಗೊಬ್ಬರ, ಟರ್ಪಾಲು ಪವರ್ ವೀಡರ್, ಕೈಗಾಡಿ, ಸ್ಪ್ರಿಂಕ್ಲರ್ ಸೆಟ್ ಈ ಎಲ್ಲ ಸೌಲಭ್ಯಗಳು ಇನ್ನಷ್ಟೇ ಪೂರೈಕೆ ಆಗಬೇಕಿದೆ. ಕಳೆದ ವರ್ಷ ಟಾರ್ಪಾಲಿಗೆ 1500 ಕ್ಕೂ ಅಧಿಕ ಅರ್ಜಿಗಳ ಸಲ್ಲಿಕೆ ಆಗಿದೆ. 20 ಟಾರ್ಪಾಲು ಮಾತ್ರ ಪೂರೈಕೆ ಆಗಿದೆ. ಹತ್ತು ದಿನದಲ್ಲಿ ಬರುವ ನಿರೀಕ್ಷೆ ಇದೆ ಅನ್ನುತ್ತಿವೆ ಇಲಾಖಾ ಮೂಲಗಳು.
ಸಬ್ಸಿಡಿ ಸೌಲಭ್ಯ
ಕೆ.ಜಿ.ಯೊಂದಕ್ಕೆ 32 ರೂ.ಧಾರಣೆ ನಿಗದಿ ಪಡಿಸಲಾಗಿದೆ. ಇದರಲ್ಲಿ ಸಾಮಾನ್ಯ ವರ್ಗದ ಬೆಳೆಗಾರರಿಗೆ ಪ್ರತಿ ಕೆಜಿಗೆ 8 ರೂ.ಸಬ್ಸಿಡಿ ಇದೆ. ಪ್ರತಿ ಖರೀದಿದಾರ ಸಹಾಯಧನ ಕಡಿತಗೊಳಿಸಿ ಉಳಿದ ಮೊತ್ತ ಪಾವತಿಸಿ ಭತ್ತದ ಬೀಜ ಪಡೆದುಕೊಳ್ಳಬಹುದು. ಪ್ರತಿ ಕೆ.ಜಿ.ಯೊಂದರಲ್ಲಿ ಪರಿಶಿಷ್ಟ ಜಾತಿ/ಪಂಗಡ-10 ರೂ. ಸಬ್ಸಿಡಿ ನೀಡಲಾಗುತ್ತಿದೆ. ಅರ್ಹ ಬೆಳೆಗಾರರು ಪಹಣಿ ಪತ್ರ (ಆರ್‌ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪ್ರತಿ ಹಾಗೂ ಒಂದು ಭಾವಚಿತ್ರದೊಂದಿಗೆ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು. ಕಿಸಾನ್ ಕಡ್ಡಾಯ (ಬೆಳೆಗಾರರ ನೋಂದಣಿ) ಆಗಿರುವ ಕಾರಣ ಈ ಎಲ್ಲ ದಾಖಲೆಗಳು ಅವಶ್ಯ.
ಭತ್ತದ ಬಿತ್ತನೆ ಬೀಜ ಲಭ್ಯ
ತಾಲೂಕಿನಲ್ಲಿ 20 ಕ್ವಿಂಟಾಲ್ ಎಂಓ4 (ಭದ್ರಾ) ತಳಿಯ 20 ಕ್ವಿಂಟಾಲ್ ಭತ್ತದ ಬೀಜ ಸಂಗ್ರಹವಿದ್ದು, ಈಗಾಗಲೇ 7 ಕ್ವಿಂಟಾಲ್ ಪೂರೈಕೆ ಆಗಿದೆ. ಆಯಾ ಹೋಬಳಿ ರೈತ ಕೇಂದ್ರಕ್ಕೆ ಬೆಳೆಗಾರರು ದಾಖಲೆಯೊಂದಿಗೆ ಸಂಪರ್ಕಿಸಿದರೆ ವಿತರಿಸಲಾಗುತ್ತದೆ.
-ಮೋಹನ್ ನಂಗಾರು, ಕೃಷಿ ಅಧಿಕಾರಿ, ಕೃಷಿ ಇಲಾಖೆ, ಸುಳ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.