ಕಾಡಿನಲ್ಲಿ ಇನ್ನೂ ಭಯಾನಕ ವೈರಸ್‌ಗಳುಂಟು: ಝೆಂಗ್ಲಿ
Team Udayavani, May 29, 2020, 2:32 AM IST
ಬೀಜಿಂಗ್: ನಾವು ಇಲ್ಲಿಯ ತನಕ ನೋಡಿರುವ ವೈರಸ್‌ಗಳು ಕೇವಲ ಅತೀ ಅಲ್ಪವಷ್ಟೇ. ಭಯಾನಕ, ಜೀವಕ್ಕೆ ನಡುಕ ಹುಟ್ಟಿಸುವ ವೈರಸ್‌ಗಳು ಕಾಡಿನಲ್ಲಿ ಇನ್ನೂ ಇವೆ.
ಜಗತ್ತಿನ ಎಲ್ಲ ದೇಶಗಳ ಸಹಕಾರ ದಿಂದಷ್ಟೇ ಅವುಗಳನ್ನು ಸಂಶೋಧಿಸಿ, ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಚೀನದ ವೈರಾಣು ತಜ್ಞೆ ಶಿ ಝೆಂಗ್ಲಿ ಹೇಳಿದ್ದಾರೆ.
ಬಾವಲಿಗಳಲ್ಲಿನ ವೈರಸ್ ಸಂಶೋಧನೆಯಿಂದಲೇ ಖ್ಯಾತಿಪಡೆದ ಶಿ ಝೆಂಗ್ಲಿ, ‘ಮುಂದಿನ ಪೀಳಿಗೆಗಳನ್ನು ತಬ್ಬಿಬ್ಬು ಮಾಡುವಂಥ ವೈರಾಣುಗಳನ್ನು ತಡೆಯಬೇಕಾದರೆ, ನಾವು ಈಗಲೇ ಕಾಡಿನಲ್ಲಿರುವ ಮೃಗಗಳಲ್ಲಿನ ವೈರಸ್‌ಗಳ ಬಗ್ಗೆ ಸಂಶೋಧನೆ ಆರಂಭಿಸಬೇಕು. ಇಲ್ಲದಿದ್ದರೆ ಮನುಕುಲ ಇನ್ನಷ್ಟು ಆಪತ್ತು ಎದುರಿಸಬೇಕಾಗುತ್ತದೆ’ ಎಂದು ಟಿವಿ ಸಂದರ್ಶನವೊಂದರಲ್ಲಿ ಎಚ್ಚರಿಸಿದ್ದಾರೆ.
ಲ್ಯಾಬ್ ಸೃಷ್ಟಿ ಅಲ್ಲ: ‘ನನ್ನ ಜೀವದ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಕೋವಿಡ್ ಯಾವುದೇ ಲ್ಯಾಬ್‌ನ ಸೃಷ್ಟಿ ಅಲ್ಲ. ಅದು ನೈಸರ್ಗಿಕವಾಗಿ ಪ್ರಾಣಿಗಳಿಂದ ದಾಟಿದೆ. ಈ ಬಗೆಗಿನ ಸುಳ್ಳು ಸುದ್ದಿಗಳು ನಿಜಕ್ಕೂ ಬೇಸರ ಹುಟ್ಟಿಸುತ್ತವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.