ಶೀಘ್ರವೇ ನಿಮ್ಮ ಜೊತೆ ಇರ್ತೀವಿ: ನಟ ಅನಿರುದ್ಧ
Team Udayavani, May 29, 2020, 4:21 AM IST
ಸರಿ ಸುಮಾರು ಎರಡು ತಿಂಗಳ ಕಾಲ ಲಾಕ್‌ಡೌನ್ ಹಿನ್ನೆಲೆಯಲ್ಲಿ ಧಾರಾವಾಹಿಗಳೆಲ್ಲವೂ ಸ್ಥಗಿತ ಗೊಂಡಿದ್ದವು. ಇದೀಗ ಚಿತ್ರೀಕರಣಗಳು ಆರಂಭ ಗೊಂಡಿವೆ. ಈ ಹಿನ್ನೆಲೆಯಲ್ಲಿ ಜನಪ್ರಿಯ ಧಾರಾವಾಹಿಗಳೆಲ್ಲವೂ ಶುರುವಾಗಿವೆ. ಈಗಾಗಲೇ ಜನಮನಸೆಳೆದಿರುವ “ಜೊತೆ ಜೊತೆಯಲಿ’ ಧಾರಾವಾಹಿ ಕೂಡ ಶುರುವಾಗಿದ್ದು, ಆ ಧಾರಾವಾಹಿಯ ಮುಖ್ಯ ಆಕರ್ಷಣೆಯಾಗಿರುವ ನಟ ಅನಿರುದ್ಧ ಅವರು ತಮ್ಮ ಟ್ವೀಟ್ ಹಾಗೂ ಮುಖಪುಟದ ಮೂಲಕ ವೀಕ್ಷಕರಿಗೆ “ಜೊತೆ ಜೊತೆಯಲಿ’ ಧಾರಾವಾಹಿಯ ಕುರಿತು ಮಾತನಾಡಿದ್ದಾರೆ. ಆ ಬಗ್ಗೆ ಹೇಳಿಕೊಂಡಿರುವ ಅವರು, ” ಎಲ್ಲರಿಗೂ ನಮಸ್ಕಾರ.
ಎರಡು ತಿಂಗಳಿಗೂ ಹೆಚ್ಚು ಕಾಲ “ಜೊತೆ ಜೊತೆಯಲಿ’ ಧಾರಾವಾಹಿ ಸೇರಿದಂತೆ ಯಾವ ಧಾರಾವಾಹಿಗಳು ಪ್ರಸಾರಗೊಂಡಿರಲಿಲ್ಲ. ಈಗ ಲಾಕ್ ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಈಗ ಚಿತ್ರೀಕರಣ ಶುರುವಾಗಿದೆ. ನಿರ್ಮಾಪಕರು, ವಾಹಿನಿಯ ಮುಖ್ಯಸ್ಥರು ಎಲ್ಲರೂ ಕೂಡ ಮುನ್ನೆಚ್ಚರಿಕೆ ವಹಿಸಿ, ಸ್ಯಾನಿಟೈಸರ್ ವ್ಯವಸ್ಥೆ ಸೇರಿದಂತೆ ಎಲ್ಲಾ ಮುಂಜಾಗ್ರತೆ ಕ್ರಮ ವಹಿಸಿಕೊಂಡು ಚಿತ್ರೀಕರಣಕ್ಕೆ ಮುಂದಾಗಲು ಕಾರಣರಾಗಿದ್ದಾರೆ.
ಇನ್ನು ಮುಂದೆ ನಮ್ಮ “ಜೊತೆ ಜೊತೆಯಲಿ’ ಧಾರಾವಾಹಿಯ ಹೊಸ ಸಂಚಿಕೆಗಳು ಶುರುವಾಗಲಿವೆ. ಇಷ್ಟು ದಿನಗಳ ಕಾಲ ನೀವು ತೋರಿದ ಪ್ರೀತಿ, ವಿಶ್ವಾಸವನ್ನು ಇನ್ನು ಮುಂದೆಯೂ ಕೊಡಬೇಕು ಎಂದು ಅನಿರುದ್ಧ ಮನವಿ ಮಾಡಿದ್ದಲ್ಲದೆ, ಇಡೀ ಚಿತ್ರೀಕರಣದಲ್ಲಿ ಆಗಿರುವಂತಹ ನೀಟ್ ವ್ಯವಸ್ಥೆಯನ್ನು ಹೊಗಳಿದ್ದಾರೆ.
ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ಕಾರ್ಮಿಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಿರ್ಮಾಪಕರು ಸ್ಯಾನಿಟೈಸ್ ಮಾಡಿಸಿ, ಪ್ರತಿ ಉಪಕರಣಕ್ಕೂ, ಚಿತ್ರೀಕರಿಸುವ ಜಾಗಕ್ಕೆ ಸ್ಯಾನಿಟೈಸರ್ ಹಾಕಿಸುವ ಮೂಲಕ ಎಚ್ಚರಿಕೆ ವಹಿಸಿದ್ದಾರೆ. ಇಷ್ಟು ದಿನಗಳ ಕಾಲ ಯಾವ ಮಟ್ಟದಲ್ಲಿ ಖುಷಿಪಡಿಸಿತ್ತೋ ಅಷ್ಟೇ ಖುಷಿ ಇನ್ನು ಮುಂದೆಯೂ ವೀಕ್ಷಕರಿಗೆ ಸಿಗಲಿದೆ. ಎಲ್ಲರೂ ಮಿಸ್ ಮಾಡದೆ “ಜೊತೆ ಜೊತೆಯಲಿ’ ಧಾರಾವಾಹಿ ನೋಡಿ. ಈಗಷ್ಟೇ ಚಿತ್ರೀಕರಣ ಶುರುವಾಗಿದೆ. ಜೂನ್‌ನಲ್ಲಿ ಕಂತುಗಳು ಪ್ರಸಾರಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.