ಹೊಸ ಧ್ವನಿಯ ಸ್ಪರ್ಶ
Team Udayavani, May 29, 2020, 4:24 AM IST
ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಹಳೆಯ ಮಧುರ ಗೀತೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಅಂತಹ ಅದ್ಭುತ ಹಾ ಡುಗಳ ಮೂಲಕ ಗಮನಸೆಳೆದ ಎವರ್‌ಗ್ರೀನ್ ನಟ,ನಟಿಯರ ನೆನಪಿಸುವ ಉದ್ದೇಶದಿಂದ ಹಾಗೂ ಇಂದಿನ ಪೀಳಿಗೆಗೂ ಅಂದಿನ ಸ್ಟಾರ್ ನಟ,ನಟಿಯರನ್ನು ಪರಿಚಯಿಸುವ ದೃಷ್ಟಿಯಿಂದ ಕನ್ನಡ ಚಿತ್ರರಂಗದಲ್ಲಿ “ಗಂಧದ ಗುಡಿಯ ಗಂಧರ್ವರು ‘ ಶೀರ್ಷಿಕೆ ಮೂಲಕ ಅವರ ಚಿತ್ರಗಳ ಹಾಡುಗಳನ್ನು ಹಾಡಿ ರಂಜಿಸುವ ಪ್ರಯತ್ನ ಮಾಡಲಾಗಿದೆ.
ಹೌದು, ಇತ್ತೀಚೆಗೆ “ಗಂಧದ ಗುಡಿಯ ಗಂಧರ್ವರು ‘ ಮೂಲಕ ಕನ್ನಡ ಚಿತ್ರರಂಗದ ದಂತಕತೆಗಳಾದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ಟೈಗರ್ ಪ್ರಭಾಕರ್, ಲೋಕೇಶ್, ಅನಂತ್‌ನಾಗ್, ಬಿ.ಸರೋಜಾದೇವಿ, ಲೀಲಾವತಿ,ಭಾರತಿ, ಜಯಂತಿ ಇವರ ಹಳೆಯ ಚಿತ್ರಗಳ ಮಧುರ ಗೀತೆಗಳನ್ನು ಹಾಡಿ ಸ್ಪೀಡ್ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ. ಮೂರು ಎಪಿಸೋಡ್‌ಗಳಲ್ಲಿ ಪ್ರಸಾರಗೊಂಡ ಈ ಕಾರ್ಯಕ್ರಮದಲ್ಲಿ ಒಟ್ಟು ಈ ಎಲ್ಲಾ ನಟ,ನಟಿಯರು ನಟಿಸಿರುವ ಚಿತ್ರಗಳ ಜನಪ್ರಿಯ ಹಾಡುಗಳನ್ನು ಹಾಡಲಾಗಿದೆ.
ಈ ಹಾಡುಗಳಿಗೆ ವಿಜಯರಾಘವೇಂದ್ರ, ರವಿಶಂಕರ್‌ಗೌಡ, ನವೀನ್‌ಕೃಷ್ಣ, ಅನಿರುದಟಛಿ, ಸುನೀಲ್ ಇತರರು ಹಾಡಿದ್ದಾರೆ. ಇನ್ನು, ಇವರೊಂದಿಗೆ ಶಮಿತಾ ಮಲಾಡ್, ವಾಣಿಹರಿಕೃಷ್ಣ, ಕೀರ್ತಿ, ಸಂಗೀತಾ ಕೂಡ ಹಾಡಿದ್ದಾರೆ. ಅಂದಹಾಗೆ, ಮೂರು ಎಪಿಸೋಡ್‌ನಲ್ಲಿ ಮೂಡಿಬಂದ ಈ “ಗಂಧದ ಗುಡಿಯ ಗಂಧರ್ವರು ‘ ಹಾಡಿನ ಕಾರ್ಯಕ್ರಮ ಮೊದಲ ಎಪಿಸೋಡ್ 25 ನಿಮಿಷ ಹೊಂದಿದ್ದರೆ, ಎರಡು ಹಾಗು ಮೂರು ಎಪಿಸೋಡ್‌ಗಳು 20 ನಿಮಿಷಗಳ ಕಾಲ ಪ್ರಸಾರಗೊಂಡಿವೆ.
ಇನ್ನು, ಈ ಹಾಡುಗಳು ಹಾಗು ಚಿತ್ರಗಳ ಕುರಿತು ನಟ ಸೃಜನ್ ಲೋಕೇಶ್ ನಿರೂಪಣೆ ಮಾಡಿದ್ದಾರೆ. ಈ ಕಾರ್ಯಕ್ರಮದ ನಿರ್ದೇಶನವನ್ನು ರಘುರಾಮ್ ಮಾಡಿದ್ದಾರೆ. ಇಲ್ಲಿ ಹದಿನೈದು ಹಾಡುಗಳಿದ್ದರೂ, ಅವೆಲ್ಲವೂ ಪಲ್ಲವಿ ಚರಣದಿಂದ ಕೂಡಿವೆ. ಎಲ್ಲಾ ಹಾಡುಗಳಿಗೂ ಮೂಲ ರಾಗ ಬಳಸಿ ಹಾಡಲಾಗಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಎಲ್ಲರೂ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿದ್ದಾರೆ.
ಹಳೆಯ ನಟರ ಚಿತ್ರಗಳ ಹಾಡುಗಳ ಬಗ್ಗೆ ಹಳಬರಿಗೆ ಗೊತ್ತು. ಆದರೆ, ಇಂದಿನ ಜನರೇಷನ್‌ಗೂ ಗೊತ್ತಾಗಬೇಕು ಎಂಬ ಕಾರಣಕ್ಕೆ ಜನಪ್ರಿಯ ಹಾಡುಗಳನ್ನು “ಗಂಧದ ಗುಡಿಯ ಗಂಧರ್ವರು ‘ ಶೀರ್ಷಿಕೆಯಡಿ ಪ್ರಸಾರ ಮಾಡಲಾಗಿದೆ. ಇನ್ನು ಎಲ್ಲಾ ಗಾಯಕರು ತಮ್ಮ ತಮ್ಮ ಮನೆಯಲ್ಲೇ ಹಾಡಿ ಕಳುಹಿಸಿದ್ದಾರೆ. ಇದಕ್ಕೆ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.