ಡಿಜಿಟಲೀಕರಣದಿಂದ ಪಾರದರ್ಶಕ ಆಡಳಿತ
Team Udayavani, May 29, 2020, 6:27 AM IST
ಮಾಲೂರು: ಸಹಕಾರ ಬ್ಯಾಂಕ್‌ಗಳು ಮತ್ತು ಸೇವಾ ಸಂಘಗಳ ಆರ್ಥಿಕ ವ್ಯವಹಾರವನ್ನು ಡಿಜಿಟಲೀಕರಣ ಮಾಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ತಾಲೂಕಿನ ಚಿಕ್ಕತಿರುಪತಿಯ ಕೃಷಿ ಸೇವಾ ಸಹಕಾರ ಬ್ಯಾಂಕಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸಹಕಾರ ಕ್ಷೇತ್ರದ ಡಿಜಿಟಲೀಕರಣ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕೋಲಾರ ಜಿಲ್ಲೆಯ ಪವಿತ್ರ ಯಾತ್ರ ಸ್ಥಳವಾಗಿರುವ ಚಿಕ್ಕ ತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ಸೇವಾ ಸಹಕಾರ ಬ್ಯಾಂಕಿನಿಂದ ಎರಡೂ ಜಿಲ್ಲೆಗಳ ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಮೊಬೈಲ್‌ನಲ್ಲೇ ಮಾಹಿತಿ: ಎರಡೂ ಜಿಲ್ಲೆಗಳ 200 ಸಹಕಾರ ಬ್ಯಾಂಕ್‌ಗಳು ಮತ್ತು ಸೇವಾ ಸಂಘಗಳ ಹಣಕಾಸಿನ ವ್ಯವಹಾರವು ಗುರುವಾರದಿಂದಲೇ ಕಂಪ್ಯೂಟರೀಕರಣವಾಗಿ ಸಹ ಕಾರ ಸೇವೆಗಳು ರೈತರಿಗೆ ನೇರವಾಗಿ ತಲುಪಲಿವೆ. ಸಹಕಾರ ಬ್ಯಾಂಕಿನ ಎಲ್ಲಾ ಆರ್ಥಿಕ ವಹಿವಾಟುಗಳು ಪಾರದರ್ಶಕವಾಗುವ ಜೊತೆಗೆ ಖಾತೆಯ ಸಂಪೂರ್ಣ ಮಾಹಿತಿಯನ್ನು ರೈತರು ತಮ್ಮ ಮೊಬೈಲ್ ಫೋನ್‌ಗಳ ಮೂಲಕವೇ ನೋಡಲು ಸಾಧ್ಯವಾಗಲಿದೆ ಎಂದು ವಿವರಿಸಿದರು.
ಸಬಲಿಕರಣ: ರೈತರು ಮತ್ತು ಬ್ಯಾಂಕಿನ ಹಣ ದುರುಪಯೋಗ ವಾಗುವ ಸಾಧ್ಯತೆಗಳು ಇನ್ನು ಮುಂದೆ ಇರುವುದಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕಿನ ವತಿಯಿಂದ ರೈತರು ಮತ್ತು ಮಹಿಳೆಯರಿಗೆ ಕೋಟ್ಯಂತರ ರೂ. ಸಾಲ ನೀಡಿ ರೈತ ಮತ್ತು ಮಹಿಳಾ ಸಬಲೀಕರಣಕ್ಕೆ ಡಿಸಿಸಿ ಬ್ಯಾಂಕ್ ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿಯೂ ಆಡಳಿತ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ಉತ್ತಮ ಪಡಿಸುವ ಕಾರ್ಯವಾಗಲಿದ್ದು, ಡಿಜಿಟಲೀಕರಣದಿಂದ ರೈತರು ತಮ್ಮ ಖಾತೆಯಲ್ಲಿನ ಹಣದ ಸಂಪೂರ್ಣ ಮಾಹಿತಿಯನ್ನು ನೇರವಾಗಿ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಕೆ.ಎಚ್.ಚನ್ನರಾಯಪ್ಪ, ಕೇಂದ್ರ ಸಹಕಾರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ರವಿ, ಯೋಜನಾ ನಿರ್ದೇಶಕ ಶಿವಕುಮಾರ್, ಮಾಲೂರು ತಾಲೂಕು ಡಿಸಿಸಿ ಬ್ಯಾಕಿನ ಮೇಲ್ವಿಚಾರಕ ವಿ.ಕೃಷ್ಣಪ್ಪ, ಸಿಇಒ ಗಳಾದ ಎಂ.ಶಿವಶಂಕರ್, ಎಚ್.ವಿ. ತಿರುಮೇಗೌಡ, ಎಂ .ಸುಧಾಕರ್, ವೇಣುಗೋಪಾಲ್, ಯೋಗೀಶ್, ಚಿಕ್ಕತಿರುಪತಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಮುನಿರಾಜು,
ಉಪಾ ಧ್ಯಕ್ಷ ಆರ್.ಶ್ರೀಧರ್, ನಿರ್ದೇಶಕ ಶಂಕರ್ ನಾರಾ ಯಣಗೌಡ, ಜಿ.ವಿ. ಮಂಜುನಾಥ್, ಟಿ.ಎಂ.ರಾಮ್‌ಪ್ರಸಾದ್, ಜಿ.ರಾಮಮೂರ್ತಿ, ಎಸ್.ನಾಗರಾಜು, ನಾರಾಯ ಣಮ್ಮ, ನಾಗರತ್ಮಮ್ಮ, ಇಸ್ಟಾಪ್ ಟೆಕ್ನಾಲಜಿಸ್‌ನ ಲಲಿತ್‌ಪ್ರಸಾ ನ್ನದ್, ಸತೀಶ್‌ಹಂಪಹೊಳ್ಳ, ಎ.ಇ.ಫರ್ನಾಂಡಿಸ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.