ಕಳಪೆ ಯಂತ್ರೋಪಕರಣ ವಿತರಕರ ವಿರುದ್ಧ ಕ್ರಮ
Team Udayavani, May 29, 2020, 6:59 AM IST
ತುಮಕೂರು: ಪೂರ್ವ ಮುಂಗಾರು ಆರಂಭವಾಗಿದೆ ರೈತರು ಕೃಷಿ ಚಟುವಟಿಕೆ ಆರಂಭಿಸುತ್ತಿದ್ದಾರೆ, ರೈತರಿಗೆ ತೊಂದರೆಯಾಗದಂತೆ ಉತ್ತಮ ಗುಣಮಟ್ಟದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿ ರೈತರಿಗೆ ಕಳಪೆ ಯಂತ್ರಗಳನ್ನು ವಿತರಿಸಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ಶಾಸಕ ಡಿ.ಸಿ.ಗೌರಿಶಂಕರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಾಲೂಕಿನ ಊರ್ಡಿಗೆರೆ ಗ್ರಾಮದಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ಪೂರ್ವ ಮುಂಗಾರು ಬಿತ್ತನೆಗೆ ಶೇಂಗಾ ಸೇರಿದಂತೆ ಇತರೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ, ಕೃಷಿ ಉಪಕರಣ ವಿತರಿಸಿ ಮಾತನಾಡಿ, ಅನ್ನದಾತರಿಗೆ ಕಳಪೆ ಕೃಷಿ ಉಪಕರಣ, ಕಳಪೆ ಬೀಜಗಳನ್ನು ವಿತರಣೆ ಮಾಡುವುದನ್ನು ನಾನು ಸಹಿಸುವುದಿಲ್ಲ. ಕಳಪೆ ಕೃಷಿ ಉಪಕರಣಗಳನ್ನು ಸರಬರಾಜು ಮಾಡಿದ ಬಾಡಿಗೆ ಕೃಷಿ ಉಪಕರಣಗಳ ವಿತರಕರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕೃಷಿ ಅಧಿಕಾರಿಗೆ ತಾಕೀತು ಮಾಡಿದರು.
ರೈತರೇ ದೇಶಕ್ಕೆ ಬೆನ್ನೆಲುಬು ಅಂಥವರಿಗೆ ಕಳಪೆ ಗುಣಮಟ್ಟದ ಕೃಷಿ ಯಂತ್ರೋಪಕರಗಳನ್ನು ಸರಬರಾಜು ಮಾಡಿ ರೈತರ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗದಂತೆ ಗುಣಮಟ್ಟದ ಯಂತ್ರೋಪಕರಗಳನ್ನು ತಕ್ಷಣ ನೀಡಲು ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು. ತಾಲೂಕಿನ ಕೆಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸಿಗದೇ ಗ್ರಾಮಸ್ಥರು ಫ್ಲೋರೈಡ್ ನೀರನ್ನೇ ಉಪಯೋಗಿಸುತ್ತಿದ್ದುದನ್ನು ಅರಿತು ಸಾರ್ವಜನಿಕರ ಒತ್ತಾಸೆಯ ಮೇರೆಗೆ ಶಾಸಕರ ನಿಧಿಯಿಂದ ಒಂದು ಘಟಕಕ್ಕೆ 12 ಲಕ್ಷ ರೂ.ನಂತೆ 6 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲು ಸುಮಾರು 72 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದರು.
ಶುದ್ಧ ಕುಡಿಯುವ ನೀರಿನ ಸಮಸ್ಯೆ ಇರುವ ಡಿ.ಟಿ.ಪಾಳ್ಯ, ಐನಾಪುರ, ಚಿಕ್ಕಕೊರಟಗೆರೆ, ಚಿಕ್ಕಾಪುರ, ಕೆಂಬಳಲು, ಕೈದಾಳ ಗ್ರಾಮಗಳಲ್ಲಿ ನೂತನವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣ ಮಾಡಲಾಗಿದೆ ಇದರಿಂದ ಆ ಗ್ರಾಮಗಳಲ್ಲಿ ಉದ್ಭವಿಸಿದ್ದ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದು ನುಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆಂಗೇಗೌಡ, ಕೃಷಿ ಅಧಿಕಾರಿ ಆಶಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.