ಕೇಳುವವರಿಲ್ಲ ಸೋಂಕಿತೆ ಕುಟುಂಬದವರ ಕಷ್ಟ‌

Team Udayavani, May 29, 2020, 7:13 AM IST

keluvvarilla

ನೆಲಮಂಗಲ: ಕೋವಿಡ್‌ 19ಗೆ ಬಲಿಯಾದ ರೈತ ಮಹಿಳೆ ಕುಟುಂಬದವರು ಹಾಗೂ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಿದ್ದು, ಮನೆಯಲ್ಲಿರುವ ಜಾನುವಾರು, ಹುಲ್ಲು-ಮೇವು ನೀರಿಲ್ಲದೇ ಅನಾಥವಾಗಿವೆ. ಜತೆಗೆ ಕೋವಿಡ್‌ 19  ಆತಂಕದಿಂದ ಡೇರಿಯಲ್ಲಿ ಹಾಲು ನಿಷೇಧಿಸಲಾಗಿದೆ.

ತಾಲೂಕಿನ ವೀರಸಾಗರದ ಮಹಿಳೆಗೆ ಮೇ.22ರಂದು ಕೋವಿಡ್‌ 19 ದೃಢವಾಗುತ್ತಿದ್ದಂತೆ ಸಂಪರ್ಕದಲ್ಲಿದ್ದ ಕುಟುಂಬದ 12 ಜನರನ್ನುಕ್ವಾರಂಟೈನ್‌ ಮಾಡಿ, 4 ಮನೆಗಳನ್ನು ಲಾಕ್‌ ಮಾಡಲಾಗಿದೆ. ಹೀಗಾಗಿ ಮನೆಯಲ್ಲಿರುವ 12ಕ್ಕೂ ಹೆಚ್ಚು ಹಸು, 10 ಮೇಕೆಗಳನ್ನು ನೋಡಿಕೊಳ್ಳುವವರಿಲ್ಲದಂತಾಗಿದ್ದು, ರೋಧನೆ ಮನಕಲಕುವಂತಿದೆ.

ನಿತ್ಯ 60 ಲೀ. ಹಾಲು ಮಣ್ಣುಪಾಲು: ಸೋಂಕಿತೆ ಮನೆಯವರು ಪ್ರತಿದಿನ 60ಕ್ಕೂ  ಹೆಚ್ಚು ಲೀ. ಹಾಲನ್ನು ವೀರಸಾಗರದ ಹಾಲಿನ ಡೇರಿಗೆ ಸರಬರಾಜು ಮಾಡುತ್ತಿದ್ದರು. ಆದರೆ ಈಗ ಬಮೂಲ್‌ ಅಧಿಕಾರಿಗಳು, ನಿರ್ದೇಶಕರು ಹಾಲು ಪಡೆಯದಂತೆ ಡೇರಿ ಸಿಬ್ಬಂದಿಗೆ ತಿಳಿಸಿದ್ದಾರೆ. ಹೀಗಾಗಿ ನಿತ್ಯ 60 ಲೀಟರ್‌ ಹಾಲು  ಮಣ್ಣಿಗೆ ಸುರಿಯಲಾಗುತ್ತಿದೆ.

ಮನೆ ಬಳಿ ಹೋಗದ ಜನರು: ಗ್ರಾಮದ ಜನರು ಮನೆ ಹಾಗೂ ತೋಟದ ಬಳಿ ಹೋಗಲು ಭಯಪಟ್ಟು ಪ್ರಾಣಿಗಳಿಗೆ ಹಲ್ಲು ಹಾಕಲು ಹೋಗುತ್ತಿಲ್ಲ. ಹಸುಗಳ ರೋಧನೆ ತಾಳಲಾರ ದೆ ಗ್ರಾಮದ ವ್ಯಕ್ತಿಯೊಬ್ಬರು ದಿನಕ್ಕೆ ಒಂದು ಬಾರಿ ನೀರು  ಕುಡಿಸಿ ಹಾಲು ಕರೆಯುತ್ತಿದ್ದರು. ಈಗ ಅವರು ಕೂಡ ಮೇವು, ನೀರು ಕುಡಿಸುವುದನ್ನು ನಿಲ್ಲಿಸಿದ್ದಾರೆ.

ಔಷಧ ನೀಡಿಲ್ಲ: ಸೋಂಕಿತೆಯ ಸಂಪರ್ಕದಲ್ಲಿದ್ದ ಆಟೋ ಚಾಲಕನನ್ನು ಸಿದ್ದಾರ್ಥ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದ್ದು, ಆತನಿಗೆ ಮೆದುಳಿನ ನರದಲ್ಲಿ ರಕ್ತ ಸರಬರಾಜಿನ ಸಮಸ್ಯೆ ಎದುರಾಗಿದೆ. ದಿನಕ್ಕೆ ಎರಡು ಬಾರಿ  ಮಾತ್ರೆ ತೆಗೆದುಕೊಂಡು ಬಿಸಿ ನೀರು ಕುಡಿಯಲು ಸೂಚಿಸಲಾಗಿದೆ. ಆದರೆ ಕ್ವಾರಂಟೈನ್‌ ಕೇಂದ್ರದಲ್ಲಿ ಮಾತ್ರೆ ಹಾಗೂ ಬಿಸಿ ನೀರು ನೀಡುತ್ತಿಲ್ಲ. ನನಗೆ ಮಾನಸಿಕ ಹಿಂಸೆಯಂತಾಗುತ್ತಿದೆ.

ತಕ್ಷಣ ವ್ಯವಸ್ಥೆ ಮಾಡಿ ಎಂದು ಮನವಿ  ಮಾಡಿದರು. ಸೋಂಕಿತರ ಮನೆಗೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡುತ್ತೇವೆ. ಹಾಲು ಹಾಕಿಸಿಕೊಳ್ಳಲು ಬಮೂಲ್‌ ಅಧಿಕಾರಿ ಗಳ ಜತೆ ಮಾತನಾಡಲಾಗುತ್ತದೆ. ಕ್ವಾರಂಟೈನ್‌ ಇರುವ ವ್ಯಕ್ತಿಗೆ ಔಷಧಿ ಸರಬರಾಜು  ಮಾಡಲಾಗುತ್ತದೆ ಎಂದು ತಹಶೀಲ್ದಾರ್‌ ಶ್ರೀನಿವಾಸ್‌ ಹೇಳಿದರು.

ಕಣ್ಣೀರು ಹಾಕಿದ ಕುಟುಂಬ: ತಾಯಿಯನ್ನು ಕಳೆದುಕೊಂಡು ಸರಕಾರದ ಆದೇಶ ಹಾಗೂ ಜನರ ಹಿತದೃಷ್ಟಿಯಿಂದ ಕ್ವಾರಂಟೈನ್‌ನಲ್ಲಿ ಜೀವನ ಮಾಡುತಿದ್ದೇವೆ. ಮನೆಯಲ್ಲಿ ಪ್ರಾಣಿಗಳಿಗೆ ವ್ಯವಸ್ಥೆಗೂ ಬಿಡದೆ, ಅಧಿಕಾರಿಗಳು  ಕರೆದುಕೊಂಡು ಬಂದರು. ಈಗ ಹಸುಗಳಿಗೆ ಆಹಾರವಿಲ್ಲದಿರುವುದು ಕೇಳಿ ದುಃಖವಾಗುತ್ತಿದೆ. ಹಾಲು ಕರೆಯದಿದ್ದರೆ ಹಸುಗಳ ಸಾವು ನಿಶ್ಚಿತ, ಇಬ್ಬರನ್ನಾದರೂ ಮನೆಗೆ ಕಳುಹಿಸಿ ಎಂದು ಕುಟುಂಬದ ಸದಸ್ಯರು ಕಣ್ಣೀರು ಹಾಕಿದ್ದಾರೆ.

ಟಾಪ್ ನ್ಯೂಸ್

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

156

Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.