ಎವರೆಸ್ಟ್ ಶಿಖರವೇರಿದ ಚೀನ ತಂಡ
Team Udayavani, May 29, 2020, 2:45 PM IST
ಸಾಂದರ್ಭಿಕ ಚಿತ್ರ
ಇಡೀ ಜಗತ್ತೇ ಕೋವಿಡ್ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲಿ ಚೀನದ ತಂಡವೊಂದು ವಿಶ್ವದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಏರಿ ದಾಖಲೆ ಮಾಡಿದೆ. ನೇಪಾಲದ ಗಡಿಯಲ್ಲಿರುವ ಎವರೆಸ್ಟ್ ಶಿಖರದ ಎತ್ತರವನ್ನು ಪುನಃ ಅಳೆಯಲು ಈ ತಂಡ ತೆರಳಿತ್ತೆಂದು ಚೀನದ ಮಾಧ್ಯಮ ವರದಿ ಮಾಡಿವೆ.
ನೇಪಾಲದ ದಾಖಲೆಗಳಲ್ಲಿ ಇರುವುದಕ್ಕಿಂತ ಮೌಂಟ್ ಎವರೆಸ್ಟ್ 4 ಮೀ. ಕಡಿಮೆ ಎತ್ತರವಿದೆ ಎಂದು ಚೀನ ಹೇಳಿದೆ. 2015ರಲ್ಲಿ ಸಂಭವಿಸಿದ ಭಾರೀ ಭೂಕಂಪನದ ಪ್ರಭಾವದಿಂದ ಶಿಖರದ ಎತ್ತರ ತಗ್ಗಿರಬೇಕೆಂದು ಅಂದಾಜಿಸಲಾಗಿದೆ.
ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಋತುವಿನಲ್ಲಿ ಎವರೆಸ್ಟ್ ಪರ್ವತವೇರಲು ಚೀನ ತನ್ನ ತಂಡಕ್ಕೆ ಮಾತ್ರ ಅನುಮತಿ ನೀಡಿತ್ತು. ನೇಪಾಲ ಎಲ್ಲ ಯಾತ್ರೆಗಳನ್ನೂ ರದ್ದುಗೊಳಿಸಿತ್ತು. ಎಪ್ರಿಲ್ ತಿಂಗಳಲ್ಲಿ ಚೀನದ ತಂಡ ಪರ್ವತಾರೋಹಣ ಆರಂಭಿಸಿತ್ತು. ಪ್ರತಿಕೂಲ ಹವಾಮಾನ ಅವರಿಗೆ ಸಾಕಷ್ಟು ತಡೆಯನ್ನೂ ಒಡ್ಡಿತ್ತು. ಮಂಗಳವಾರ ಬಹು ಪ್ರಯಾಸದಿಂದ ಶಿಖರವೇರಿದ ತಂಡ ಅಲ್ಲಿ ತನ್ನ ಸರ್ವೆಯ ಗುರುತನ್ನು ನೆಟ್ಟಿದೆ. ಚೀನದ ಸೆಂಟ್ರಲ್ ಟೆಲಿವಿಷನ್ ಈ ದೃಶ್ಯಾವಳಿಯನ್ನು ನೇರ ಪ್ರಸಾರ ಮಾಡಿತ್ತು. ಹವಾಮಾನ ವೈಪರೀತ್ಯ ಹಾಗೂ ಆಮ್ಲಜನಕ ಕೊರತೆ ಕಾರಣದಿಂದ ಇಬ್ಬರು ವೃತ್ತಿಪರ ಸರ್ವೇಯರ್ಗಳು ಕೊನೆಯ ಹಂತವನ್ನು ಏರಲಿಲ್ಲ. 1960ರಲ್ಲೂ ಚೀನಿ ತಂಡ ಮಾತ್ರ ಶಿಖರವನ್ನು ತಲುಪಿದ ದಾಖಲೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.