ಮಂದಾರದಲ್ಲಿ ತ್ಯಾಜ್ಯ ರಾಶಿಗೆ ಬೆಂಕಿ; ವಿಷಪೂರಿತ ಹೊಗೆ
Team Udayavani, May 30, 2020, 5:48 AM IST
ಮಂಗಳೂರು: ನಗರದ ಮಂದಾರಕ್ಕೆ ಕಳೆದ ವರ್ಷ ಮಳೆಗಾಲದಲ್ಲಿ ಜರಿದು ಬಂದ ಪಚ್ಚನಾಡಿಯ ತ್ಯಾಜ್ಯ ರಾಶಿಗೆ ಶುಕ್ರವಾರ ಮತ್ತೆ ಬೆಂಕಿ ಬಿದ್ದಿದ್ದು, ಪರಿಸರದಲ್ಲಿ ವಿಷಪೂರಿತ ಹೊಗೆ ವ್ಯಾಪಿಸಿತ್ತು.
ಸಂಜೆ ವೇಳೆಗೆ ಬೆಂಕಿ ಬಿದ್ದಿದ್ದು, ವಿಷಯ ತಿಳಿದು ಪಾಲಿಕೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ, ಗಾಳಿಯ ವೇಗಕ್ಕೆ ಬೆಂಕಿಯು ವ್ಯಾಪಿಸಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ತ್ಯಾಜ್ಯಕ್ಕೆ ಬಿದ್ದ ಬೆಂಕಿ ನಂದಿಸಲು ಹಿಟಾಚಿ ಮೂಲಕ ಮಣ್ಣು ತಂದು ಸುರಿಯಲಾಗುತ್ತಿದೆ. ಆದರೆ ಗಾಳಿಯಲ್ಲಿ ಸೇರುತ್ತಿರುವ ವಿಷಪೂರಿತ ಹೊಗೆ ಸಮೀಪದ ಮೂರು-ನಾಲ್ಕು ವಾರ್ಡ್ ಗಳ ಜನರ ಆತಂಕ ಹೆಚ್ಚಿಸಿದೆ. ಮಂದಾರ ಪ್ರದೇಶದ ಕೆಲವು ಮನೆಯ ಜನರು ಅಲ್ಲಿಂದ ತೆರವಾಗಿದ್ದರೂ, 2-3 ಮನೆಯವರೂ ಅಲ್ಲೇ ವಾಸವಾಗಿದ್ದಾರೆ. ಹೀಗಾಗಿ ವಿಷಪೂರಿತ ಹೊಗೆ ಅವರ ಆತಂಕ ಹೆಚ್ಚಿಸಿದೆ.
ಮಳೆಗೆ ಮತ್ತೆ ಆತಂಕ
ಕೆಲವೇ ದಿನಗಳಲ್ಲಿ ಮಳೆ ಶುರುವಾಗುವ ಹಿನ್ನೆಲೆಯಲ್ಲಿ ಮಳೆ ನೀರಿಗೆ ಇನ್ನೇನು ಸಮಸ್ಯೆ ಆಗಲಿವೆಯೋ ಎಂಬ ಆತಂಕವೂ ಎದುರಾಗಿದೆ. ಕಳೆದ ವರ್ಷ ಮಳೆಗೆ ಪಚ್ಚನಾಡಿಯ ತ್ಯಾಜ್ಯರಾಶಿ ಜರಿದು ಮಂದಾರದ 2 ಕಿ.ಮೀ ವ್ಯಾಪ್ತಿಯಲ್ಲಿ ಹರಡಿತ್ತು. ಸಾವಿರಾರು ತೆಂಗು, ಕಂಗು ಇದರಡಿಯಲ್ಲಿ ಸಿಲುಕಿಕೊಂಡಿತ್ತು. ಜರಿದು ಬಂದ ತ್ಯಾಜ್ಯರಾಶಿಯು ಈ ಬಾರಿಯ ಮಳೆಗೆ ಇನ್ನಷ್ಟು ಅಪಾಯ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.